ಬೆಂಗಳೂರು ಇನ್ನೊಂದು ವಾರ ಲಾಕ್‍ಡೌನ್- 7 ದಿನ ಏನಿರುತ್ತೆ? ಏನಿರಲ್ಲ?

Public TV
2 Min Read

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತೊಮ್ಮೆ ಲಾಕ್‍ಡೌನ್ ಆಗಿದೆ. ಡೆಡ್ಲಿ ವೈರಸ್ ಕೊರೊನಾ ಕಾರಣಕ್ಕೆ ಸಿಲಿಕಾನ್ ಸಿಟಿಗೆ ಮತ್ತೆ ಬೀಗ ಬಿದ್ದಿದೆ. ಇನ್ನೊಂದು ವಾರ ಬೆಂಗಳೂರಲ್ಲಿ ಯಾರು ಮಿಸುಕಾಡಂಗಿಲ್ಲ. ಅಡ್ಡಾದಿಡ್ಡಿ ಓಡಾಡಂಗಿಲ್ಲ. ತುರ್ತು ಅಂತೇಳಿ ಕಾರಣವನ್ನೂ ನೀಡಂಗಿಲ್ಲ. ಈಗಾಗಲೇ ಪೊಲೀಸರು ಎಲ್ಲಾ ಕಡೆ ಬ್ಯಾರೀಕೇಡ್ ಹಾಕಿ ಬೆಂಗಳೂರನ್ನ ಬಂದ್ ಮಾಡಿದ್ದಾರೆ. ಜುಲೈ 22 ಬೆಳಗ್ಗೆ 5 ಗಂಟೆವರೆಗೆ ಇಡೀ ಬೆಂಗಳೂರು ಕಂಪ್ಲೀಟ್ ಸ್ತಬ್ಧವಾಗಿರಲಿದೆ.

ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12ಗಂಟೆವರೆಗೆ ಮಾತ್ರ ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬಹುದು. ಅದು ಮನೆಯ ಹತ್ತಿರದ ಅಂಗಡಿಗಳಲ್ಲಿ ಖರೀದಿಸಬೇಕು. ಅನಗತ್ಯವಾಗಿ ದೂರದ ಶಾಪ್‍ಗಳಿಗೆ ಹೋಗುವಂತಿಲ್ಲ. ಮಧ್ಯಾಹ್ನ 12 ಗಂಟೆ ನಂತರ ಎಲ್ಲವೂ ಬಂದ್ ಆಗಲಿವೆ.

ಮಾಂಸ, ಮೀನು ಮಾರಾಟಕ್ಕೆ ಲಾಕ್‍ಡೌನ್ ವೇಳೆಯೂ ಅನುಮತಿ ಇದೆ. ಆದ್ರೆ ಇದಕ್ಕೂ ಕೂಡ ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ಸಮಯ ನಿಗದಿ ಮಾಡಲಾಗಿದೆ. ಬಾರ್, ಲಿಕ್ಕರ್ ಶಾಪ್‍ಗಳು ಬಂದ್ 7 ದಿನ ಕಂಪ್ಲೀಟ್ ಲಾಕ್ ಆಗಲಿವೆ.

ತುರ್ತು ಅಗತ್ಯಗಳಿಗಾಗಿ ಮಾತ್ರ ಬಿಎಂಟಿಸಿ 134 ಬಸ್‍ಗಳು ರಸ್ತೆಗೆ ಇಳಿಯಲಿವೆ. ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ, ಬೇರೆ ವಲಯಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ತನಕ ಈ ಬಸ್‍ಗಳು ಓಡಾಡಲಿವೆ. ಆಟೋ, ಕ್ಯಾಬ್, ಟ್ಯಾಕ್ಸಿಗಳು ಯಾವುದೇ ಕಾರಣಕ್ಕೂ ರೋಡಿಗೆ ಇಳಿಯುವಂತಿಲ್ಲ. ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ತೆರೆಯುವವಂತಿಲ್ಲ. ಪಾರ್ಕ್, ಶಾಪಿಂಗ್ ಮಾಲ್‍ಗಳು ಕೂಡ ಬಂದ್ ಆಗಿರಲಿವೆ. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್ ಗಷ್ಟೇ ಅವಕಾಶ ಇರಲಿದೆ. ಸ್ವಿಗ್ಗಿ, ಝೋಮ್ಯಾಟೋ ರಾತ್ರಿ 8 ಗಂಟೆಗೆ ಕ್ಲೋಸ್ ಆಗಲಿವೆ.

ವಿಮಾನ ಪ್ರಯಾಣಿಕರಿಗೆ ವಿನಾಯಿತಿ: ಪೆಟ್ರೋಲ್ ಬಂಕ್, ಕ್ಲಿನಿಕ್, ಆಸ್ಪತ್ರೆಗಳು, ಮೆಡಿಕಲ್ಸ್ ಸದಾ ಕಾಲ ಇದ್ದೇ ಇರುತ್ತೆ. ವಿಮಾನ ಪ್ರಯಾಣಿಕರಿಗೆ ವಿನಾಯಿತಿ ಇದ್ದು, ಏರ್‍ಪೋರ್ಟ್ ಗೆ ಹೋಗೋರು ಟಿಕೆಟ್ ತೆಗೆದುಕೊಳ್ಳಬೇಕು. ಊಬರ್, ಓಲಾ, ಏರ್ಪೋಟ್ ಡ್ಯೂಟಿ ಮಾಡುವವರು ಸಂಬಂಧ ಪಟ್ಟವರಿಂದ ಸಂಚಾರ ಅನುಮತಿಯ ಪತ್ರ ಪಡೆದಿರಬೇಕು. ಯಾರು ಬೇಕಾದ್ರು ಬೆಂಗಳೂರಿಂದ ಹೊರಗಡೆ ಹೋಗಬಹುದು. ಆದ್ರೆ ಸೇವಾ ಸಿಂಧು ಅಡಿಯಲ್ಲಿ ಬರಬೇಕು. ತುರ್ತು ಸೇವೆಯಲ್ಲಿ ಒಡಾಡುವರು ಕಡ್ಡಾಯವಾಗಿ ಐಡಿ ಕಾರ್ಡ್ ತೊರಿಸಬೇಕು. ಖಾಸಗಿ ವಾಹನಗಳಿಗೆ ಅನುಮತಿ ಇಲ್ಲ.

ಬಿಬಿಎಂಪಿ ಕಚೇರಿಗಳು ಎಂದಿನಂತೆ ತೆರೆಯುತ್ತವೆ. ಅಂಚೆ ಕಚೇರಿ, ಬ್ಯಾಂಕ್, ಎಟಿಎಂ ಎಂದಿನಂತೆ ಇರುತ್ತವೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ನಡೆಯಲಿವೆ. ಖಾಸಗಿ ಕಚೇರಿ, ವಾಣಿಜ್ಯ ಕಚೇರಿ/ಚಟುವಟಿಕೆ ಇರಲ್ಲ. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ಇವೆ. ಕೈಗಾರಿಕೆ, ಕಾರ್ಖಾನೆ ತೆರೆಯಲು ಲಾಕ್‍ಡೌನ್‍ನಿಂದ ರಿಲೀಫ್ ಕೊಡಲಾಗಿದೆ. ಹಾರ್ಡ್‍ವೇರ್, ಸಿಮೆಂಟ್ ಅಂಗಡಿಗಳನ್ನು ತೆರೆಯಲು ಅನುಮತಿ ಇದೆ. ಆಹಾರ ಸಂಸ್ಕರಣೆ, ಔಷಧ ತಯಾರಿಕಾ ಕಾರ್ಖಾನೆ ಓಪನ್ ಇರಲಿವೆ. ಆನ್‍ಲೈನ್ ಕಂಪನಿಗಳಿಂದ ಹೋಂ ಡೆಲಿವರಿಗೆ ಅನುಮತಿ ನೀಡಲಾಗಿದೆ

Share This Article
Leave a Comment

Leave a Reply

Your email address will not be published. Required fields are marked *