ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಸೀಲ್ ಕಡ್ಡಾಯ: ಸುಧಾಕರ್

Public TV
3 Min Read

– ಹೋಂ ಐಸೋಲೇಷನ್ ಇದ್ದವರಿಗೂ ಸೀಲ್
– ಹೊರರಾಜ್ಯದಿಂದ ಬರೋರಿಗೆ ಟೆಸ್ಟ್ ಕಡ್ಡಾಯ
– ಕಾರ್ಯಕ್ರಮಗಳಿಂದ 2 ತಿಂಗಳು ದೂರ ಇರಿ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಮೊದಲನೇ ಅಲೆಯಲ್ಲಿ ಕೈಗೊಳ್ಳಲಾಗಿದ್ದ ಸೀಲ್ ಇದೀಗ ಮತ್ತೆ ವಾಪಸ್ ಮಾಡಲಾಗುತ್ತಿದೆ. ಸೋಂಕಿತರ ಕೈಗೆ ಮತ್ತೆ ಸೀಲ್ ಹಾಕಲಾಗುತ್ತಿದೆ. ಅಲ್ಲದೆ ಮನೆಯಲ್ಲಿ ಐಸೋಲೇಷನ್ ನಲ್ಲಿ ಇರುವವರಿಗೂ ಸೀಲ್ ಕಡ್ಡಾಯ ಮಾಡಲಾಗುತ್ತಿದೆ. ಹೊರರಾಜ್ಯದಿಂದ ಬರುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ಕುರಿತು ಇಂದು ಸಭೆ ನಡೆಯಿತು. ಎಂಟು ವಲಯಗಳ ವರದಿ ಕೈ ಸೇರಿದೆ. 1,400 ಕೇಸ್ ನಿನ್ನೆ ಪತ್ತೆಯಾಗಿದೆ. ಕಳೆದ 4 ತಿಂಗಳಲ್ಲಿ ಕೇಸ್ ಈಗ ಹೆಚ್ಚಳವಾಗಿದೆ. ಮತ್ತೆ ದಿನೇ ದಿನೇ ಕೇಸ್ ಹೆಚ್ಚಳದ ಸೂಚನೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮಗಳ ಕುರಿತು ಸಭೆ ನಡೆದಿದ್ದು, ಈ ವೇಳೆ ಹೊರಗಿನಿಂದ ಬಂದವರಿಂದ ಶೇ.60 ರಷ್ಟು ಸೋಂಕು ಹೆಚ್ಚಳವಾಗುತ್ತಿರುವ ಬಗ್ಗೆ ತಿಳಿದುಬಂತು ಹೇಳಿದ್ದಾರೆ.

ಹೊರ ರಾಜ್ಯದಿಂದ ಬಂದವರು ನಗರದಲ್ಲಿ ವಾಸವಿದ್ದರೆ ಆರ್ ಟಿ ಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗುತ್ತದೆ. ಸಮುಚ್ಛ ಕ್ಷೇತ್ರದಲ್ಲಿ ವಾಸ ಮಾಡುವವರಿಗೆ ಹೊಸ ಸೂಚನೆ ನೀಡಲಾಗುತ್ತದೆ. ಪ್ರತಿ ವಾರ್ಡ್ ಗಳ ಲೆಕ್ಕಚಾರದಂತೆ ಅಪಾರ್ಟ್ ಮೆಂಟ್ ಗಳಿಗೆ ಹೊಸ ರೂಲ್ಸ್ ಗೆ ಚಿಂತನೆ ನಡೆಸಲಾಗುತ್ತಿದೆ. ಮನೆಯಲ್ಲಿ ಒಬ್ಬರಿಗೆ ಕೊರೊನಾ ಬಂದರೆ ಎಲ್ಲರಿಗೂ ಕೊರೊನಾ ಸೋಂಕು ಹೆಚ್ಚಳವಾಗುತ್ತದೆ. ಹೀಗಾಗಿ ಮಾರ್ಷಲ್ ಗಳು ಬಸ್ ನಿಲ್ದಾಣ, ರೈಲ್ವೆ, ಮದುವೆ ಮಂಟಪಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಮದುವೆ, ಕಾರ್ಯಕ್ರಮಗಳ ಆಯೋಜಕರು ನಿಯಮ ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಕಾರ್ಯಕ್ರಮ ಆಯೋಜಕರಿಗೂ ದಂಡ ವಿಧಿಸಲಾಗುತ್ತದೆ. ಒಂದು ಮದುವೆ, ಕಾರ್ಯಕ್ರಮಕ್ಕೆ 500 ಅತಿಥಿಗಳು ಮಾತ್ರ ಸೀಮಿತ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೆ ಅತಿಥಿ ಸಂಖ್ಯೆ ಹೆಚ್ಚಳ ಮಾಡುವಂತಿಲ್ಲ. ಮಹಾರಾಷ್ಟ್ರ ಪ್ರಕರಣಗಳಿಗೆ ರಾಜ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದರು.

ಕ್ಲೋಸ್ ಡೋರ್ ನಲ್ಲಿ 200 ಜನಕ್ಕೆ ಅವಕಾಶ, ಓಪನ್ ಸ್ಪೇಸ್ ನಲ್ಲಿ 500 ಜನಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ವಾರ್ಡ್ ಒಂದಕ್ಕೆ ಅಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ. ಕೋವಿಡ್ ವಾಚ್ ಆ್ಯಪ್ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತಿದ್ದು, ಕೊರೊನಾ ಸೋಂಕಿತರಿಗೆ ಕೈ ಮೇಲೆ ಸೀಲ್ ಹಾಕಲಾಗುತ್ತದೆ ಎಂದು ಸಚಿವರು ತಿಳಿಸಿದರು.

20 ರಿಂದ 40ರ ವಯಸ್ಸಿನವರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮೊದಲ ಅಲೆಯ ಸೀಲ್ ಮತ್ತೆ ವಾಪಸ್ ಆಗುತ್ತಿದ್ದು, ಇದೆಲ್ಲ ನಿಯಮಗಳು ಬಿಬಿಎಂಪಿ ವ್ಯಾಪ್ತಿಗೆ ಮಾತ್ರ ಸೀಮಿತವಾಗುತ್ತದೆ. ಹೋಂ ಐಸೋಲೇಷನ್‍ನಲ್ಲಿರುವ ಎಲ್ಲ ಸೋಂಕಿತರಿಗೂ ಸೀಲ್ ಕಡ್ಡಾಯ ಮಾಡಲಾಗುತ್ತಿದೆ. ಹೀಗಾಗಿ ಸೀಲ್ ಬಗ್ಗೆ ಅರಿವು ಮೂಡಿಸುವ ಕೆಲಸ ಆರಂಭವಾಗಿದೆ. ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಇರುವವರಿಗೆ ಆರ್ ಟಿ ಪಿಸಿಆರ್ ಕಡ್ಡಾಯ ಮಾಡಲಾಗುತ್ತದೆ. ಅಲ್ಲದೆ ಗಡಿ ಭಾಗಗಳಲ್ಲಿ ಕಠಿಣ ಕ್ರಮಕ್ಕೆ ಬದ್ಧವಾಗಬೇಕಿದೆ ಎಂದು ಹೇಳಿದರು.

ಪ್ರತಿ ಆಸ್ಪತ್ರೆಗೆ ವಿಶೇಷ ನೋಡೆಲ್ ಆಫೀಸರ್ ನಿಯೋಜನೆ ಮಾಡಲಾಗುತ್ತಿದೆ. ಕೋವಿಡ್ ಬಂದ ವ್ಯಕ್ತಿಯಿಂದ 20 ಜನ ಪ್ರಾಥಮಿಕ ಸಂಪರ್ಕಿತರ ಪಟ್ಟಿ ಸಿದ್ಧ ಆಗಲೇಬೇಕಿದೆ ಎಂದರು.

ಅನಗತ್ಯ ಧಾರ್ಮಿಕ, ಮನರಂಜನಾ, ರಾಜಕೀಯ ಕಾರ್ಯಕ್ರಮಗಳಿಂದ 2 ತಿಂಗಳು ದೂರ ಇರಿ. ಕಡ್ಡಾಯವಾಗಿ ಆರ್ ಟಿ ಪಿಸಿ ಆರ್ ಟೆಸ್ಟ್ ಗೆ ಸೂಚನೆ ನೀಡಲಾಗಿದೆ. ಕಾಂಪ್ಲೆಕ್ಸ್ ,ಅಪಾರ್ಟ್ ಮೆಂಟ್, ರೆಸಿಡೆನ್ಸ್ ಭಾಗಗಳಿಗೆ ಔಷಧಿ ಸಿಂಪಡನೆ ಮಾಡಲಾಗುತ್ತಿದೆ. ಏಪ್ರಿಲ್ 1 ರಿಂದ ಕೊರೊನಾ ತಡೆಯಲು ಹೊಸ ರೂಲ್ಸ್ ತರಲಾಗುತ್ತಿದ್ದು, ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಸಿನಿಮಾ ಹೀರೋ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡ ಸುಧಾಕರ್, ಚುನಾವಣೆ ವೇಳೆ ನಿಗದಿತ ನಿಯಮ ಜಾರಿಗೆ ತರಬೇಕು. ಹಾಗೂ ಎಲ್ಲಾ ಕಾರ್ಯಕ್ರಮಕ್ಕೂ ಮಾಸ್ಕ್ ಕಡ್ಡಾಯ ಮಾಡಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *