ಬೆಂಗಳೂರು: ಸಿಲಿಕಾನ್ ಸಿಟಿಗೆ ಪಾಲಿಗೆ ಶುಕ್ರವಾರ ಕರಾಳ ದಿನ. ಕಳೆದೊಂದು ವಾರದಿಂದ ಸುನಾಮಿಯಂತೆ ಅಪ್ಪಳಿಸುತ್ತಿರುವ ಕೊರೊನಾ ಮಹಾಮಾರಿ ಶುಕ್ರವಾರ ರಣ ಹೆಜ್ಜೆ ಹಾಕಿದೆ. ಹಿಂದೆಂದೂ ದಾಖಲಾಗದ ಪಾಸಿಟಿವ್ ಪ್ರಕರಣಗಳು ಒಂದೇ ದಿನ ಪತ್ತೆಯಾಗಿದೆ. 138 ಜನರಿಗೆ ಸೋಂಕು ತಗಲುವ ಮೂಲಕ ಶತಕ ಬಾರಿಸಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿಗೆ ಬಂದು ನಿಂತಿದೆ. ಸದ್ಯ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 982 ಆಗಿದ್ದು, ಸಾವಿನಲ್ಲೂ ದಾಖಲೆ ಸೃಷ್ಟಿಸಿದೆ.
ಸಿಲಿಕಾನ್ ಸಿಟಿಗೆ ರಣವೇಗದಲ್ಲಿ ನುಗ್ಗುತ್ತಿರುವ ಕೊರೊನಾ ಹೆಮ್ಮಾರಿ ಮರಣ ಕೇಕೆ ಹಾಕ್ತಿದೆ. ಒಂದೇ ದಿನ 7 ಜನರನ್ನು ಕಿಲ್ಲರ್ ಕೊರೊನಾ ಬಲಿ ಪಡೆದಿದೆ. ಯಲಚೇನಹಳ್ಳಿಯಲ್ಲಿ 55 ವರ್ಷದ ವ್ಯಕ್ತಿ, ಶಾಮಣ್ಣ ಗಾರ್ಡನ್ ನ 53 ವರ್ಷದ ವ್ಯಕ್ತಿ, ಸೋಮೇಶ್ವರ ಕಾಲೋನಿಯಲ್ಲಿ 30 ವರ್ಷದ ಯುವತಿ ಕೊರೊನಾದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 124ದ್ದು, ಇದರಲ್ಲಿ 58 ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಜೂನ್ ತಿಂಗಳಲ್ಲೇ ಬೆಂಗಳೂರಲ್ಲಿ ಕೊರೊನಾ ಸಾವು 4 ಪಟ್ಟು ಏರಿಕೆಯಾಗಿದೆ. ಕೇವಲ 19 ದಿನದಲ್ಲಿ ಬೆಂಗಳೂರಲ್ಲಿ 48 ಮಂದಿ ಸಾವನ್ನಪ್ಪಿದ್ದಾರೆ.
41 ನಿಗೂಢ ಕೇಸ್: ಶುಕ್ರವಾರ ಪತ್ತೆಯಾದ 138 ಪ್ರಕರಣಗಳಲ್ಲಿ ನಿಗೂಢ ಕೇಸ್ 41 ಆಗಿದೆ. ಅಂದರೆ ಇವರಿಗೆ ಸೋಂಕಿನ ಮೂಲವೇ ಇಲ್ಲ. ಇದು ಬೆಂಗಳೂರು ಪಾಲಿಗೆ ಡೆಡ್ಲಿ ಡೇಂಜರ್ ಆಗಿದೆ. ಇದರ ಜೊತೆ ಉಸಿರಾಟ ತೊಂದರೆಯಿಂದ 30 ಜನ, ವಿಷಮಶೀತ ಜ್ವರದಿಂದ 30 ಜನ ಕೊರೊನಾ ಪೀಡಿರಾಗಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೊರ ರಾಜ್ಯಗಳು ಕಂಟಕವಾದರೆ ಬೆಂಗಳೂರಿಗೆ ನಿಗೂಢ, ಐಎಲ್‍ಐ ಹಾಗೂ ಸಾರಿ ಕೇಸ್‍ಗಳು ಕಂಟಕವಾಗಿ ಕಾಡ್ತಿದೆ. ಇದು ಸಮುದಾಯಗಳಿಗೆ ಸೋಂಕು ಹಬ್ಬಲು ದಾರಿ ಮಾಡಿಕೊಡುತ್ತಿದೆ.
ಬೆಂಗಳೂರಿನಲ್ಲಿ ರಣಕೇಕೆಗೆ ಕಾರಣಗಳು ಏನು?
* ಹೊರ ರಾಜ್ಯದಿಂದ ಬಂದವರ ಕ್ವಾರಂಟೈನ್ ವಿಚಾರದಲ್ಲಿ ಸರ್ಕಾರದ ಎಡವಟ್ಟು ತೀರ್ಮಾನಗಳು
* ಸೋಂಕು ಹೆಚ್ಚಾಗ್ತಿದ್ದರೂ ಸ್ಥಳೀಯ ಮಟ್ಟದಲ್ಲಿ ಟೆಸ್ಟಿಂಗ್ ನಿಲ್ಲಿಸಿದ್ದು.
* ಹೆಮ್ಮಾರಿ ಬಗ್ಗೆ ಆರಂಭದಲ್ಲಿ ಮಹಾನಗರಿ ಬಗ್ಗೆ ನಿರ್ಲಕ್ಷ್ಯ ಮಾಡಿದ್ದು.
* ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನು ಪತ್ತೆ ಹೆಚ್ಚದೇ ಇರೋದು .
* ಐಎಲ್‍ಐ, ಸಾರಿ ಕೇಸ್‍ಗಳ ಗಣನೀಯ ಏರಿಕೆ.