ಬೆಂಗಳೂರು: ನಗರದಲ್ಲಿ ಸೋಂಕಿನ ಸಂಖ್ಯೆ ಇಳಿಮುಖ ಆಗ್ತಿದ್ದಂತೆ ಜನ ಮತ್ತೆ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.
ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಟ್ರೈನ್‍ನ ಮೂಲಕ ನಗರಕ್ಕೆ ಬರುತ್ತಿದ್ದಾರೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಪ್ರತಿಯೊಬ್ಬ ಪ್ರಯಾಣಿಕನಿಗೂ ಕೋವಿಡ್ ಟೆಸ್ಟ್ ಮಾಡುವ ಉದ್ದೇಶದಿಂದ ಟೆಸ್ಟಿಂಗ್ ಕ್ಯಾಂಪ್ ಮಾಡಲಾಗಿದೆ. ಆದರೆ ಬಹುತೇಕ ಪ್ರಯಾಣಿಕರು ಕೊರೊನಾ ಟೆಸ್ಟ್ ಮಾಡುವ ಆರೋಗ್ಯ ಸಿಬ್ಬಂದಿ ಕಣ್ತಪ್ಪಿಸಿ, ರೈಲ್ವೆ ನಿಲ್ದಾಣದಿಂದ ಎಸ್ಕೇಪ್ ಆಗ್ತಿದ್ದಾರೆ. ಕೋವಿಡ್ ಟೆಸ್ಟ್ ಗೆ ಒಪ್ಪದ ಜನರಿಗೆ ಆರೋಗ್ಯ ಸಿಬ್ಬಂದಿ ಮನವೊಲಿಸಿ ಟೆಸ್ಟ್ ಮಾಡಲಾಗ್ತಿದೆ.
ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಎರಡು ತಂಡ, ಹೊರ ಭಾಗದಲ್ಲಿ ಎರಡು ತಂಡಗಳಂತೆ ಕೋವಿಡ್ ಟೆಸ್ಟ್ ಮಾಡಲಾಗ್ತಿದೆ. ಕೆಲವು ಜನ ಕೊರೋನಾ ಪರಿಕ್ಷೆಗೆ ಸಹಕರಿಸ್ತಿದ್ರೆ, ಇನ್ನೂ ಕೆಲವರು ಆರೋಗ್ಯ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿಯುತ್ತಿದ್ದಾರೆ.
ಆರೋಗ್ಯ ಸಿಬ್ಬಂದಿಗೆ ಸಂಬಳನೇ ಆಗಿಲ್ಲ..!
ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸ್ವಾಬ್ ಕಲೆಕ್ಟರ್ಸ್, ಲ್ಯಾಬ್ ಟೆಕ್ನಿಷಿಯನ್ಸ್ ಸೇರಿದಂತೆ ಇನ್ನೂ ಕೆಲವು ಆರೋಗ್ಯ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ಸಂಬಳವೇ ನೀಡಿಲ್ಲ. ಸಂಬಳವಿಲ್ಲದೇ ಕೆಲಸ ಮಾಡೋಕೆ ಆಗ್ತಿಲ್ಲ ಅಂತ ಸಿಬ್ಬಂದಿ ತಮ್ಮ ಸಂಕಟವನ್ನ ತೋಡಿಕೊಳ್ತಿದ್ದಾರೆ.