ಬೆಂಗಳೂರು: ಕೊರೋನಾದಿಂದ ಸಂಕಷ್ಟದಿಂದ ಸಿಲುಕಿದ್ದ ಬೆಂಗಳೂರಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಕಡಿಮೆ ಆಗಿದೆ. ಯಾವ ಪ್ರಮಾಣದಲ್ಲಿ ಇಳಿಕೆ ಅಂದರೆ ಪಾಸಿಟಿವಿಟಿ ರೇಟ್ 4.94 ಗೆ ಬಂದಿದೆ. ಅಂದರೆ ಬೆಂಗಳೂರಿನಲ್ಲಿ 100 ಜನರಿಗೆ ಟೆಸ್ಟ್ ಮಾಡಿದ್ರೆ 4 ಜನರಿಗೆ ಮಾತ್ರ ಪಾಸಿಟಿವಿ ಆಗಿದೆ.
ಉಳಿದ 96 ಜನರಿಗೆ ನೆಗೆಟಿವ್ ಆಗ್ತಿದೆ. ಕಳೆದ 10 ದಿನಗಳಿಂದ ಪಾಸಿಟಿವಿಟಿ ರೇಟ್ ಒಂದೊಂದೆ ಪರ್ಸೆಂಟ್ ಇಳಿಕೆಯಾಗ್ತಿದೆ. ಶುಕ್ರವಾರ 3,221 ಹೊಸ ಪ್ರಕರಣಗಳು ದಾಖಲಾಗಿದ್ದವು. ನಿನ್ನೆ ಪಾಸಿಟಿವಿಟಿ ರೇಟ್ 4.94% ಪಾಸಿಟಿವಿಟಿ ರೇಟ್ ದಾಖಲಾಗಿದೆ.
ಇನ್ನೂ ಇಂದು ಕೂಡ ಬೆಂಗಳೂರಿನಲ್ಲಿ ಕಡಿಮೆ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿ ಸೇರಿ 2,724 ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಮೂರು ತಿಂಗಳ ನಂತರ ಮೂರು ಸಾವಿರಕ್ಕಿಂತ ಒಳಗಡೆ ಕೇಸ್ ದಾಖಲಾಗ್ತಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲೂ 500 ಕ್ಕಿಂತ ಕಡಿಮೆ ಕೇಸ್ ದಾಖಲಾಗಿದೆ.
ಕಳೆದ ನಾಲ್ಕು ದಿನಗಳ ಪಾಸಿಟಿವಿಟಿ ರೇಟ್
ಜೂನ್ 1: ಶೇ.5.48
ಜೂನ್ 2: ಶೇ.6.25
ಜೂನ್ 3: ಶೇ.5.44
ಜೂನ್ 4: ಶೇ.4.94