ಬುರ್ಜ್ ಖಲೀಫಾ ಮೇಲೆ ನಿಂತ ಗಗನಸಖಿ – ವೀಡಿಯೋ ವೈರಲ್

Public TV
1 Min Read

ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ದುಬೈ ಬುರ್ಜ್ ಖಲೀಫಾದ ಮೇಲೆ ಗಗನಸಖಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

30 ಸೆಕೆಂಡ್ ಇರುವ ಎಮಿರೇಟ್ಸ್ ಕಂಪನಿಯ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ದೃಶ್ಯ ನೋಡಿ ನೆಟ್ಟಿಗರು ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೃತ್ತಿಪರ ಸ್ಕೈ ಡ್ರೈವಿಂಗ್ ಬೋಧಕರಾಗಿರುವ ನಿಕೋಲ್ ಸ್ಮಿತ್-ಲುಡ್ವಿಕ್ ಜಾಹೀರಾತಿನಲ್ಲಿ ಎಮಿರೇಟ್ಸ್ ಕ್ಯಾಬಿನ್ ಸಿಬ್ಬಂದಿ ಸದಸ್ಯರಾಗಿ ಕಾಣಿಸಿಕೊಂಡಿದ್ದಾರೆ.

ವೀಡಿಯೋದಲ್ಲಿ ಎಮಿರೇಟ್ಸ್ ಸಮವಸ್ತ್ರದಲ್ಲಿರುವ ನಿಕೋಲ್ ನಮಗೆ ಪ್ರಪಂಚದಲ್ಲಿ ಅಗ್ರಸ್ಥಾನ ಸಿಕ್ಕಿದೆ, ಫ್ಲೈ ಎಮಿರೇಟ್ಸ್, ಫ್ಲೈ ಬೆಟರ್ ಎಂದು ಬರೆದಿರುವ ಬೋರ್ಡ್ ಗಳನ್ನು ಹಿಡಿದುಕೊಂಡು ಒಂದೊಂದಾಗಿಯೇ ತೋರಿಸುತ್ತಾ ಹೋಗುವುದನ್ನು ಕಾಣಬಹುದಾಗಿದೆ.

ಬುರ್ಜ್ ಖಲೀಫಾದ ತುದಿಯಲ್ಲಿ ನಿಂತುಕೊಂಡರೆ ಇಡೀ ದುಬೈನನ್ನು ಕಾಣಬಹುದಾಗಿದೆ. ನೆಲದಿಂದ 828 ಮೀಟರ್ ಎತ್ತರದ ಬುರ್ಜ್ ಖಲೀಫಾ ವಿಶ್ವದ ಅತೀ ಎತ್ತರದ ಕಟ್ಟಡವಾಗಿದೆ.

ನಿಕೋಲ್ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅನುಮಾನವಿಲ್ಲದೇ ನಾನು ಮಾಡಿದ ಅದ್ಭುತ ಹಾಗೂ ಅತ್ಯಾಕರ್ಷಕ ಸಾಹಸಗಳಲ್ಲಿ ಒಂದಾಗಿದೆ. ಸೃಜನಶೀಲ ಮಾರ್ಕೆಂಟಿಂಗ್ ಕಲ್ಪನೆಗಾಗಿ ಎಮಿರೇಟ್ಸ್ ಏರ್‍ಲೈನ್‍ನ ಈ ತಂಡದಲ್ಲಿ ಪಾಲ್ಗೊಂಡಿರುವುದು ಬಹಳ ಸಂತೋಷದ ಸಂಗತಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಕ್ರೀಡೆಯಲ್ಲಿ ಅಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

Share This Article
Leave a Comment

Leave a Reply

Your email address will not be published. Required fields are marked *