ಬೀಚ್‍ನಲ್ಲಿ ದಿಗಂತ್, ಐಂದ್ರಿತಾ ಮಸ್ತ್ ಮಜಾ

Public TV
2 Min Read

ಬೆಂಗಳೂರು: ದೂದ್ ಪೇಡಾ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಟ್ರಿಪ್ ಹೋಗುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ. ದಂಪತಿಗೆ ಅಡ್ವೆಂಚರ್, ಸೈಕ್ಲಿಂಗ್, ಸ್ಪೋರ್ಟ್ಸ ಎಂದರೆ ಎಲ್ಲಿಲ್ಲದ ಪ್ರೀತಿ. ಆಗಾಗ ವಿವಿಧ ರೀತಿಯ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸರ್ಫಿಂಗ್ ಕೋರ್ಸ್ ನಲ್ಲಿ ನಿರತರಾಗಿದ್ದಾರೆ.

 

View this post on Instagram

 

A post shared by Aindrita Ray (@aindrita_ray)

ಹೌದು.. ದಂಪತಿ ಮಂಗಳೂರಿನ ಮುಲ್ಕಿಯಲ್ಲಿ ವಾಸ್ತವ್ಯ ಹೂಡಿದ್ದು, ಸರ್ಫಿಂಗ್ ಕೋರ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ವೀಡಿಯೋ ಹಾಗೂ ಫೋಟೋಗಳನ್ನು ದಂಪತಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ದಂಪತಿ ಇದೀಗ ಸರ್ಫ್ ಕಲಿಯುತ್ತಿರುವ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಬ್ಬರೂ ಈ ಕುರಿತು ಪೋಸ್ಟ್ ಮಾಡಿದ್ದು, ಐಂದ್ರಿತಾ ರೇ ಸಹ ಫೋಟೋ ಹಾಕಿ ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ನನ್ನ ಸ್ವೀಟ್‍ಹಾರ್ಟ್ ದಿಗಂತ್ ಸ್ಟಾಂಡ್ ಅಪ್ ಪೆಡ್ಲಿಂಗ್ ಹಾಗೂ ಸರ್ಫ್ ಲೆಸನ್ಸ್ ಗಿಫ್ಟ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Aindrita Ray (@aindrita_ray)

ಜೋಡಿ ಮೂರು ದಿನಗಳ ಕ್ರ್ಯಾಶ್ ಕೋರ್ಸ್‍ಗೆ ಸಹಿ ಹಾಕಿದ್ದು, ಸರ್ಫಿಂಗ್ ಕ್ಲಬ್‍ನಲ್ಲಿ ಉಳಿದುಕೊಂಡಿದ್ದಾರೆ. ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಬೀಚ್‍ಗೆ ತೆರಳುತ್ತೇವೆ. ಸ್ವಿಮ್, ಪೆಡ್ಲ್, ಸರ್ಫ್, ನಡಿಗೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿರುತ್ತೇವೆ. ಅದ್ಭುತ ಕ್ಷಣಗಳನ್ನು ಕಲೆಯುತ್ತಿದ್ದೇವೆ ಎಂದು ಐಂದ್ರಿತಾ ತಿಳಿಸಿದ್ದಾರೆ.

 

View this post on Instagram

 

A post shared by diganthmanchale (@diganthmanchale)

ಸದ್ಯ ದಿಗಂತ್ ಕೈಯ್ಯಲ್ಲಿ ಹಲವು ಸಿನಿಮಾಗಳಿದ್ದು, ದಂಪತಿ ಒಟ್ಟಿಗೆ ಸೇರಿ ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿ ಪ್ರಸ್ತುತ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಮೂಲಕ 8 ವರ್ಷಗಳ ಬಳಿಕ ಮತ್ತೆ ಜೊತೆಯಾಗಿ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದ್ದಾರೆ.

 

View this post on Instagram

 

A post shared by diganthmanchale (@diganthmanchale)

ಈ ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ದಿಗಂತ್ ನಟಿಸುತ್ತಿದ್ದು, ಚಿತ್ರೀಕರಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಲೆನಾಡಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದೇ ಗ್ಯಾಪ್‍ನಲ್ಲಿ ದಿಗಂತ್ ಮಾರಿ ಗೋಲ್ಡ್ ಸಿನಿಮಾದ ಚಿತ್ರೀಕರಣವನ್ನು ಸಹ ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಸಿನಿಮಾಗಳ ಜೊತೆಗೆ ವೇರ್ ಈಸ್ ಮೈ ಕನ್ನಡಕ, ಗಾಳಿಪಟ-2 ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈ ಮೂಲಕ ದಿಗಂತ್ ಸಖತ್ ಬ್ಯುಸಿಯಾಗಿದ್ದಾರೆ. ಇದೀಗ ಬಿಡುವು ಮಾಡಿಕೊಂಡು ಪತ್ನಿ ಜೊತೆ ಸರ್ಫ್ ತರಬೇತಿಗೆ ತೆರಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *