ಬಿಜೆಪಿ ಆಡಳಿತವೆಂದರೆ ರಾಜ್ಯಕ್ಕೆ ದುರ್ದಿನಗಳು- ಕಾಂಗ್ರೆಸ್

Public TV
2 Min Read

ಬೆಂಗಳೂರು: ಬಿಜೆಪಿ ಆಡಳಿತವೆಂದರೆ ರಾಜ್ಯಕ್ಕೆ ದುರ್ದಿನಗಳು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಸಾಲುಸಾಲು ಟ್ವೀಟ್ ಮಾಡುವ ಮೂಲಕವಾಗಿ ಹರಿಹಾಯ್ದಿದೆ.

ಸಿಕ್ಕ ಅಧಿಕಾರಾವಧಿಯನ್ನು ಸಂಪುಟ ವಿಸ್ತರಣೆ, ಸಂಪುಟ ರಚನೆ, ನಾಯಕತ್ವ ಬದಲಾವಣೆ, ಆಂತರಿಕ ಕಲಹದಲ್ಲಿಯೇ ಕಳೆದಿದ್ದಕ್ಕೆ ರಾಜ್ಯವನ್ನು ತನ್ನ ರಾಜಕೀಯ ಪ್ರಯೋಗಶಾಲೆ ಮಾಡಿಕೊಂಡಿದ್ದಕ್ಕೆ ಬಿಜೆಪಿ ರಾಜ್ಯದ ಜನರ ಬಳಿ ಕ್ಷಮೆ ಕೋರಬೇಕೆಂದು ಟ್ವೀಟ್ ಮಾಡಿ ಕಾಂಗ್ರೆಸ್ ಒತ್ತಾಯಿಸಿದೆ. ಇದನ್ನೂ ಓದಿ: ಶ್ರೀರಾಮುಲು DCM ಕನಸು ಭಗ್ನ!

ನಾಯಕತ್ವ ಬದಲಾವಣೆಯಿಂದ ಬದಲಾದ ಸಂಪುಟದಿಂದ ರಾಜ್ಯದಲ್ಲಿ ಯಾವ ಬದಲಾವಣೆಯೂ ಆಗದು, ಅದೇ ಆಂತರಿಕ ಕಿತ್ತಾಟ, ಅದೇ ಭ್ರಷ್ಟಾಚಾರ, ಅದೇ ನಿರ್ಲಕ್ಷ್ಯ ಧೋರಣೆ, ಅದೇ ಅರಾಜಕತೆ, ಅದೇ ಅಸಾಮಥ್ರ್ಯ ಮುಂದುವರೆಯಲಿದೆ. ಏಕೆಂದರೆ ಬಿಜೆಪಿಯಲ್ಲಿ ಇರುವವರೆಲ್ಲರೂ ಒಂದೇ ತರದವರಾಗಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಆಡಳಿತವೆಂದರೆ ರಾಜ್ಯಕ್ಕೆ ದುರ್ದಿನಗಳು.

ನೆರೆ ಪರಿಹಾರ ಕೊಡದಿದ್ದಕ್ಕೆ, ಕೋವಿಡ್ ನಿರ್ವಹಣೆಯ ವೈಫಲ್ಯಕ್ಕೆ, ಕೇಂದ್ರದಿಂದ ನೆರೆ ಪರಿಹಾರ, ಜಿಎಸ್‍ಟಿ ಬಾಕಿ ತರಲಾಗದಿದ್ದಕ್ಕೆ, ಶೈಕ್ಷಣಿಕ ಬಿಕ್ಕಟ್ಟು ಬಗೆಹರಿಸದಿದ್ದಕ್ಕೆ, ಅರಾಜಕತೆ ಸೃಷ್ಟಿಸಿದ್ದಕ್ಕೆ, ಭ್ರಷ್ಟಾಚಾರ ನಡೆಸಿದ್ದಕ್ಕೆ, ಸಮರ್ಪಕ ಸರ್ಕಾರ ನಡೆಸದಿದ್ದಕ್ಕೆ, ಲಸಿಕೆ ಕೊಡಲಾಗದಿದ್ದಕ್ಕೆ ಬಿಜೆಪಿ ಕರ್ನಾಟಕ ರಾಜ್ಯದ ಜನರ ಕ್ಷಮೆ ಕೋರಬೇಕೆಂದು ಹೇಳಿದೆ.

ಇದುವರೆಗೂ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದಕ್ಕೆ ಸ್ಪಷ್ಟ ಕಾರಣವನ್ನು ಅವರೂ ನೀಡಿಲ್ಲ, ಬಿಜೆಪಿಯೂ ನೀಡಿಲ್ಲ. ರಾಜ್ಯದ ಸಿಎಂ ರಾಜೀನಾಮೆ ನೀಡಿದ್ದೇಕೆ ಎಂಬ ಕಾರಣವನ್ನು ತಿಳಿದುಕೊಳ್ಳುವ ಹಕ್ಕು ಪ್ರತಿ ಪ್ರಜೆಗೂ ಇದೆ. ಹೀಗಾಗಿ ಕಾರಣ ಬಹಿರಂಗಪಡಿಸಲಿ ಹಾಗೂ ಸಂಕಷ್ಟದ ನಡುವೆ ರಾಜಕೀಯ ಅಸ್ಥಿರತೆ ಸೃಷ್ಟಿಸಿದ್ದಕ್ಕೆ ಜನರ ಕ್ಷಮೆ ಕೇಳಲಿ ಆಗ್ರಹ ಪಡಿಸಿದೆ.

 

Share This Article
Leave a Comment

Leave a Reply

Your email address will not be published. Required fields are marked *