ಬಿಗ್‍ ಮನೆಯಲ್ಲಿ ಪ್ರಶಾಂತ್, ದಿವ್ಯ ವಾಸ್ತು ಚರ್ಚೆ

Public TV
2 Min Read

ಬೆಂಗಳೂರು: ಒಂಟಿ ಮನೆಯ ಮೊದಲ ದಿನದ ಆಟ ಆರಂಭವಾಗಿದೆ. ಬಿಗ್ ಮನೆಯಲ್ಲಿರುವವರು ಒಂದೇ ದಿನದಲ್ಲಿ ಹಲವಾರು ವಿಚಾರಗಳಿಂದ ಸುದ್ದಿ ಮಾಡುತ್ತಿದ್ದಾರೆ. ಅದೇ ರೀತಿ ಸ್ಪರ್ಧಿಗಳಿಬ್ಬರು ಬಿಗ್ ಮನೆಯ ವಾಸ್ತು ಬಗ್ಗೆ ಚರ್ಚೆ ನಡೆಸಿದ್ದಾರೆ.

ಪ್ರಶಾಂತ್ ಸಂಬರಗಿ ಮತ್ತು ದಿವ್ಯ ಉರುಡುಗ ಮನೆಯ ಹಾಲ್‍ನಲ್ಲಿ ಕುಳಿತು ಮಾತನಾಡುತ್ತಾ ಬಿಗ್ ಮನೆಯ ವಾಸ್ತುವಿನ ಕುರಿತಾಗಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆ ವಾಸ್ತು ಪ್ರಕಾರವಾಗಿ ಇದೆಯೋ ಇಲ್ಲವೋ ಎಂದು ದಿವ್ಯ ಅವರು ಸಂಬರಗಿ ಬಳೀ ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಇಬ್ಬರ ನಡುವೆ ಚರ್ಚೆ ನಡೆದಿದೆ.

ಯಾವ ಜೀವಿ ಜಗತ್ತಿಗೆ ಬರುತ್ತದೆಯೋ ಆ ಜೀವಿ ಕರ್ಮ ಫಲವನ್ನು ತೆಗೆದುಕೊಂಡು ಬರುತ್ತದೆ. ನೀನು ಪ್ರಾರ್ಥನೆ ಮಾಡುತ್ತೀಯಾ ಎಂದರೆ ದೇವರು ದೆವ್ವವನ್ನು ನಂಬಬೇಕು ಎಂದಿದ್ದಾರೆ. ಈ ವೇಳೆ ದಿವ್ಯ ನಿಮಗೆ ವಾಸ್ತುವನ್ನು ನೋಡಲು ಬರುತ್ತದೆಯಾ? ಹಾಗಾದರೆ ಬಿಗ್ ಬಾಸ್ ಮನೆಯ ವಾಸ್ತುವನ್ನು ನೋಡಿ ಹೇಳಿ ಎಂದಿದ್ದಾರೆ. ಬಿಗ್ ಮನೆ ಶೇ.90 ವಾಸ್ತುಪ್ರಕಾರ ಇದೆ ಎಂದು ಪ್ರಶಾಂತ್ ಸಂಬರಗಿ ಅವರು ದಿವ್ಯ ಉರುಡುಗ ಅವರಿಗೆ ಹೇಳಿದ್ದಾರೆ.

ಬಿಗ್ ಬಾಸ್ ಮನೆಯ ಕಿಚನ್ ಅಗ್ನಿಮೂಲೆಯಲ್ಲಿ ಇರಬೇಕಿತ್ತು. ಬೆಡ್‍ರೂಮ್, ಬಾತ್‍ರೂಮ್, ದೇವರ ಮನೆ ಸರಿಯಾಗಿದೆ. ಹೀಗಾಗಿ ಬಿಗ್‍ಬಾಸ್ ಮನೆ ಶೇ. 90 ರಷ್ಟು ವಾಸ್ತುಪ್ರಕಾರ ಇದೆ. ಹೀಗಾಗಿಯೇ ಇಷ್ಟೊಂದು ಯಶಸ್ಸು ಬಿಗ್ ಬಾಸ್‍ಗೆ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಮನೆ ತುಂಬಾ ಹಸಿರಾಗಿದೆ. ಪರಿಸರ ಸ್ನೇಹಿಯಾಗಿದೆ. ಆಸ್ಪತ್ರೆ ಬೇಡ್‍ಗಳೆಲ್ಲ ಹಸಿರಾಗಿರುತ್ತೆ ನಮ್ಮ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಲು ಇಂತಹ ಬಣ್ಣವನ್ನು ಹಾಕಿರುತ್ತಾರೆ. ಹಿಂದಿನ ಜನ್ಮ, ಈ ಜನ್ಮ ಕುರಿತಾಗಿ ನಂಬಿಕೆ ಇದೆ ಎಂದು ಪ್ರಶಾಂತ್, ದಿವ್ಯರಿಗೆ ವಾಸ್ತುವಿನ ಪಾಠವನ್ನು ಮಾಡಿದ್ದಾರೆ.

ದಿವ್ಯ ಕೂಡಾ ಪ್ರಶಾಂತ್ ಮಾತನ್ನು ಕೇಳುತ್ತಾ ಅವರಿಗೆ ತೋಚುವ ಪ್ರಶ್ನೆಯನ್ನು ಕೇಳುತ್ತಾ ವಾಸ್ತುವಿನ ಕುರಿತಾಗಿ ಕೇಳಿ ತಿಳಿದುಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಕುಳಿತು ಮಾತನಾಡುತ್ತಿರುವುದನ್ನು ನೋಡಿದ ಅಭಿಮಾನಿಗಳು ಒಂದೇ ದಿನದಲ್ಲಿ ಇಷ್ಟೊಂದು ಕ್ಲೋಸ್ ಆಗಿದ್ದಾರೆ..? ಬಿಗ್ ಬಾಸ್ ಮನೆಯ ವಾಸ್ತುವಿನ ಕುರಿತಾಗಿ ಮಾತನಾಡುತ್ತಿದ್ದಾರೆ. ಮುಂದೆ ಇವರಿಂದ ನಾವು ಇನ್ನೂ ಹೆಚ್ಚಿನ ಮನರಂಜನೆಯನ್ನು ನೀರಿಕ್ಷೆ ಮಾಡಬಹುದು ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಬಿಗ್‍ಬಾಸ್ ನೀಡಿದ ಮೊದಲ ಟಾಸ್ಕ್ ನಲ್ಲಿ ಗೆದ್ದ ಶಮಂತ್ ಗೌಡ್ ಈ ವಾರದ ವಿನ್ನರ್ ಪಟ್ಟದ ಜೊತೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ನಿರ್ಮಲಾ, ಧನುಶ್ರೀ, ಮಂಜು ಪಾವಗಡ, ನಿಧಿ ಮತ್ತು ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಒಟ್ಟಿನಲ್ಲಿ ವಾರಾಂತ್ಯದಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಅಥವಾ ಉಳಿಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *