ಬಿಗ್‍ಬಾಸ್ ಮನೆಯ ಸೂಪರ್ ಚಕ್ಕರ್ ಯಾರು ಗೊತ್ತಾ?

Public TV
2 Min Read

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಆಟದ ವೈಕರಿ ದಿನೇ ದಿನೇ ರಂಗೇರುತ್ತಿದ್ದಂತೆ, ಮಾತಿನ ಚಕಮಕಿ ಕೂಡ ಹೆಚ್ಚಾಗುತ್ತಿದೆ. ಟಾಸ್ಕ್ ಗಾಗಿ ಬಿಗ್‍ಬಾಸ್ ಮಾಡಿರುವ ಎರಡು ತಂಡಗಳ ನಡುವೆ ಒಂದಲ್ಲ ಒಂದು ವಿಷಯವಾಗಿ ಸ್ಪರ್ಧಿಗಳು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಕಿಕೊಳ್ಳುತ್ತಿದ್ದಾರೆ. ಎರಡು ತಂಡಗಳು ಇಟ್ಟಿಗೆಯನ್ನು ಹೆಚ್ಚಿಸಿಕೊಳ್ಳುವ ಟಾಸ್ಕ್ ನಲ್ಲಿ ಎದುರಾಳಿ ವಿರುದ್ಧ ಜಯಗಳಿಸಲು ರಾತ್ರಿ ಹಗಲು ಹೋರಾಟ ನಡೆಸಿತ್ತು.

ಈ ನಡುವೆ ಶುಭಾ ನೇತೃತ್ವದ ಜಾತ್ರೆ ಟೀಂನ ವೈಷ್ಣವಿ ಮತ್ತು ದಿವ್ಯಾ ಉರುಡುಗ ನೇತೃತ್ವದ ಅನುಬಂಧ ತಂಡದ ದಿವ್ಯಾ ಸುರೇಶ್, ನೀರಿಗೊಂದು ಎಲ್ಲೆ ಎಲ್ಲಿದೆ ಟಾಸ್ಕ್ ನಲ್ಲಿ ಗೆಲ್ಲಲೇ ಬೇಕೆಂದು ಹಗಲು ರಾತ್ರಿ ನಿದ್ದೆ ಬಿಟ್ಟು ಸ್ವಿಮ್ಮಿಂಗ್ ಪೂಲ್‍ನಲ್ಲಿ ನಿಂತು ಹೋರಾಟ ನಡೆಸಿದ್ದರೆ ಇತ್ತ ಎರಡು ತಂಡದ ಸದಸ್ಯರು ಮೇಲ್ಭಾಗದಲ್ಲಿ ತಮ್ಮ ತಂಡದ ಇಟ್ಟಿಗೆಯನ್ನು ಹೆಚ್ಚಿಸುವ ಸಾಹಸಕ್ಕೆ ಇಳಿದಿದ್ದರು.

ಮುಂಜಾನೆಯಾಗುತ್ತಿದ್ದಂತೆ ಮೇಲ್ಭಾಗದಲ್ಲಿ ಕೂತಿದ್ದ ಜಾತ್ರೆ ತಂಡದ ಪ್ರಶಾಂತ್ ಸಂಬರಗಿ ಮತ್ತು ರಘು ಒಂದು ಕ್ಷಣ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಅನುಬಂಧ ತಂಡದ ಅರವಿಂದ್ ಮೆಲ್ಲನೆ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ತಮ್ಮ ಇಟ್ಟಿಗೆಯ ಶೇಖರಣೆಯ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭ ವೈಷ್ಣವಿ ತಂಡದ ಸದಸ್ಯನಾದ ರಘು ಅವರನ್ನು ಕರೆದರು. ಎಚ್ಚರ ಆಗುವಷ್ಟರಲ್ಲಿ ಅರವಿಂದ್ ಇಟ್ಟಿಗೆ ಜೋಡಿಸಿ ಆಗಿತ್ತು. ನಂತರ ಎಚ್ಚರಗೊಂಡ ಪ್ರಶಾಂತ್ ಸಂಬರಗಿ ಯಾಕೆ ಜೋಡಿಸಿದ್ದು, ನಾನು ನಿದ್ದೆ ಮಾಡಿರಲ್ಲಿ ಎಂದು ಅರವಿಂದ್ ಬಳಿ ವಾದಕ್ಕೆ ಇಳಿದರು. ಆಗ ಅರವಿಂದ್ ಸರ್ ನೀವು ನಿದ್ದೆಗೆ ಜಾರಿದಾಗ ನಾನು ತೆಗೆದುಕೊಂಡು ಹೋಗಿದ್ದು, ನಿಮಗೆ ನಾನು ಇಟ್ಟಿಗೆ ತೆಗೆದದ್ದೆ ಗೊತ್ತಿಲ್ಲ ಎಂದರು. ಪ್ರಶಾಂತ್ ಇಲ್ಲ ನಾನು ನಿದ್ದೆ ಮಾಡಿಲ್ಲ ತಲೆ ಮಾತ್ರ ಬಗ್ಗಿಸಿದ್ದೆ ಎಂದರು. ಇದನ್ನು ಕೇಳಿದ ಅರವಿಂದ್ ನೀವು ವಾದ ಮಾಡಬೇಡಿ ಎಂದರು ಅದಕ್ಕೆ ಪ್ರಶಾಂತ್ ನೀನೆ ಇಲ್ಲಿ ಸೂಪರ್ ಚಕ್ಕರ್ ಎಂದು ಕೊಂಡಿದ್ದೀಯ ಎಂದರು.

ನಂತರ ಮಾತು ಮುಂದುವರಿಸಿದ ಪ್ರಶಾಂತ್ ಇದು ಮೋಸ ನೀವು ಮೋಸದ ಆಟ ಆಡುತ್ತಿದ್ದೀರಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ದಿವ್ಯ ಉರುಡುಗ ಅರವಿಂದ್ ನೀನು ಮಾತನಾಡಬೇಡ ಎಂದು ತಮ್ಮ ತಂಡವನ್ನು ಸುಮ್ಮನಿರುವಂತೆ ಕೇಳಿಕೊಂಡರು. ಕೊನೆಗೆ ಅರವಿಂದ್ ತಾವು ಜೋಡಿಸಿದ್ದ ಇಟ್ಟಿಗೆಯನ್ನು ಹೊಡೆದು ತಮ್ಮ ನಿಲುವನ್ನು ಪ್ರದರ್ಶಿಸಿದರು.

ಬಿಗ್ ಮನೆಯಲ್ಲಿ ಟಾಸ್ಕ್ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಮಾತಿನ ಚಕಮಕಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಟಾಸ್ಕ್ ನಂತರ ಒಂದಾಗಿ ಬೆರೆದು ಜಗಳವನ್ನು ಮರೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *