ಬಿಗ್‍ಬಾಸ್ ಮನೆಯಲ್ಲಿ ಮೂಡಿತು ಶಿವನ ಚಿತ್ರ!

Public TV
2 Min Read

ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಎಲ್ಲರೂ ಒಂದೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಒಬ್ಬೊಬ್ಬರು ಒಂದೊಂದು ಟ್ಯಾಲೆಂಟ್ ಹೊಂದಿದ್ದಾರೆ. ಇಷ್ಟು ದಿನ ಲಕ್ಷುರಿ ಟಾಸ್ಕ್, ಕ್ಯಾಪ್ಟನ್ಸಿ ಟಾಸ್ಕ್, ಪಿಸಿಕಲ್ ಟಾಸ್ಕ್ ಹೀಗೆ ಹಲವು ಟಾಸ್ಕ್‍ಗಳನ್ನು ಪ್ರದರ್ಶಿಸಿದ್ದ ದೊಡ್ಮನೆ ಮಂದಿ, ನಿನ್ನೆ ನಲಿ-ಕಲಿ ಎಂಬ ಟಾಸ್ಕ್ ನೀಡಿದ್ದಾರೆ.

ಈ ಟಾಸ್ಕ್‍ನ ಅನುಸಾರ ಮನೆಯ ಸದಸ್ಯರು ತಮ್ಮ ಜೋಡಿಗಳಿಗೆ ತಿಳಿದಿರುವ ಯಾವುದಾದರೂ ಒಂದು ಕಲೆಯನ್ನು ಹೇಳಿಕೊಡಬೇಕಿತ್ತು. ಅದರಂತೆ ಮನೆಯ ಎಲ್ಲಾ ಸದಸ್ಯರು ಒಂದೊಂದು ಕಲೆಗಳನ್ನು ತಮ್ಮ ಜೋಡಿಗಳಿಗೆ ಕಲಿಸಿ ವೇದಿಕೆ ಮೇಲೆ ಪರ್ಫಾಮ್ ಮಾಡಿದರು.

ಈ ಮಧ್ಯೆ ಮನೆಯ ಎಲ್ಲಾ ಸದಸ್ಯರ ಪೈಕಿ ಗಮನ ಸೆಳೆದಿದ್ದು ಅಂದರೆ ಶಿವನ ಚಿತ್ರ. ಹೌದು ನಿನ್ನೆ ಮನೆಯ ಸದಸ್ಯರು, ಡ್ಯಾನ್ಸ್, ಸಾಂಗ್, ಡ್ರಾಮಾ ಹೀಗೆ ಹಲವು ರೀತಿಯ ಕಲೆಗಳನ್ನು ಪ್ರದರ್ಶಿಸಲು ನಿರ್ಧರಿಸಿದರೆ, ಅರವಿಂದ್, ದಿವ್ಯಾ ಉರುಡುಗ ಜೋಡಿ ಆಯ್ಕೆ ಮಾಡಿಕೊಂಡಿದ್ದು ಶಿವ.

ಶ್ರೀ ಮಂಜುನಾಥ ಸಿನಿಮಾದ ಓಂ ಮಹಾಕಾರ ದೀಪಂ ಶಿವ ಓಂ… ಎಂಬ ಹಾಡು ಆರಂಭವಾಗುತ್ತಿದ್ದಂತೆ ಪೆನ್ಸಿಲ್ ಹಿಡಿದು ಅರವಿಂದ್ ಚಿತ್ರ ಬಿಡಿಸಲು ಆರಂಭಿಸುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಕ್ರಯೋನ್ಸ್ ಮೂಲಕ ಚಿತ್ರಕ್ಕೆ ಶೇಡ್ ಮಾಡುತ್ತಾ, ಬಣ್ಣ ಹಚ್ಚುತ್ತಾ ಬರುತ್ತಾರೆ. ಹಾಡು ಪೂರ್ಣಗೊಳ್ಳುವಷ್ಟರಲ್ಲಿ ಶಿವನ ಚಿತ್ರವನ್ನು ಬರೆದು ಮುಗಿಸುತ್ತಾರೆ. ಈ ವೇಳೆ ಮನೆಯ ಎಲ್ಲಾ ಸದಸ್ಯರು ಎದ್ದು ನಿಂತು ಭಕ್ತಿಯಿಂದ ಶಿವನಿಗೆ ನಮಸ್ಕರಿಸಿ ಹರಹರ ಮಹಾದೇವ್ ಎಂದು ಘೋಷಣೆ ಕೂಗುತ್ತಾರೆ.

ನಂತರ ಚಿತ್ರ ಕುರಿತಂತೆ ಮಾತನಾಡಿದ ಅರವಿಂದ್ ಮೊದಲಿಗೆ ನಾವು ಈ ಚಿತ್ರವನ್ನು ಒಂದು ಟಿಶ್ಯು ಪೇಪರ್ ಮೇಲೆ ಹೈಲೈನರ್ ಬಳಸಿ ಬರೆಯಲು ಆರಂಭಿಸಿದೆವು. ದಿವ್ಯಾ ಈ ಚಿತ್ರವನ್ನು ಪ್ರೊಫೆಷನಲಿ ನನಗೆ ಬಹಳ ಸುಲಭವಾಗಿ ಹೇಳಿಕೊಟ್ಟರು. ಇದರಿಂದಾಗಿ ನನಗೆ ಶಿವನ ಚಿತ್ರ ಬಿಡಿಸಲು ಸಾಧ್ಯವಾಯಿತು. ಒಳ್ಳೆ ಟೀಚರ್ ಸಿಕ್ಕಿದ್ದರಿಂದ ಒಳ್ಳೆ ರಿಸಲ್ಟ್ ಬಂದಿದೆ ಎಂದು ಹೇಳುತ್ತಾರೆ.

ಇದಕ್ಕೆ ದಿವ್ಯಾ ಬೈಕ್ ಹ್ಯಾಂಡಲ್ ಹಿಡಿದುಕೊಂಡವರಿಗೆ ಸಡನ್ ಆಗಿ ಕ್ರಯೋನ್ಸ್, ಪೆನ್ಸಿಲ್ ಕೊಟ್ಟರೆ ಬಹಳ ಕಷ್ಟ. ಆದರೂ ಏನೇ ಹೇಳಿಕೊಟ್ಟರು ಅರವಿಂದ್ ಬಹಳ ಸುಲಭವಾಗಿ ಗ್ರಹಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂದು ಹೇಳುತ್ತಾ, ಕೊನೆಯಲ್ಲಿ ಬಿಡಿಸಿದ ಚಿತ್ರವನ್ನು ದಿವ್ಯಾ ಅರವಿಂದ್‍ಗೆ ಉಡುಗೊರೆಯಾಗಿ ನೀಡಿದರು.

ಒಟ್ಟಾರೆ ಬಿಗ್‍ಬಾಸ್ ವೇದಿಕೆ ಮನೆಯ ಸದಸ್ಯರಿಗೆ ತಮ್ಮ ಟ್ಯಾಲೆಂಟ್ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.

Share This Article
Leave a Comment

Leave a Reply

Your email address will not be published. Required fields are marked *