ಬಿಗ್‍ಬಾಸ್ ಮನೆಯಲ್ಲಿ ಗೊರಕೆಯದ್ದೇ ಸದ್ದು

Public TV
2 Min Read

ಬೆಂಗಳೂರು: ಬಿಗ್‍ಬಾಸ್ ಸದಸ್ಯರೊಂದಿಗೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ಮುಂದುವರಿಸಿದ ಸುದೀಪ್ ಭಾನುವಾರ ವೈಟ್ ಆ್ಯಂಡ್ ವೈಟ್ ಲುಕ್‍ನಲ್ಲಿ ವೇದಿಕೆ ಮೇಲೆ ಪ್ರೇಕ್ಷಕರ ಮುಂದೆ ಎಂಟ್ರಿಕೊಟ್ಟರು. ವಾರದ ಪಂಚಾಯತಿ ಜೊತೆ ಜೊತೆಗೆ ಕಿಚ್ಚ ಈ ಮನೆಯಲ್ಲಿ ಅತೀ ಹೆಚ್ಚು ಗೊರಕೆ ಹೊಡೆಯುವವರು ಯಾರು ಎಂದು ಪ್ರಶ್ನಿಸುತ್ತಾರೆ.

ಆಗ ಎಲ್ಲರೂ ಮಂಜು ಹಾಗೂ ರಾಘವೇಂದ್ರರವರು ಎಂದು ಹೇಳಿದರೆ, ಶಂಕರ್‍ರವರು ಪ್ರಶಾಂತ್ ಹಾಗೂ ಮಂಜು ಕೂಡ ಸ್ಟೀರಿಯೋ ಫೋನ್ ರೀತಿ ಗೊರಕೆ ಹೊಡೆಯುತ್ತಾರೆ ಜೊತೆಗೆ ಇಬ್ಬರೂ ಸದ್ದು ಮಾಡದಂತೆ ಮಲಗಿಬಿಡುತ್ತಾರೆ ಎಂದರು. ಬಳಿಕ ಕಿಚ್ಚ ಕ್ಷಮಿಸಿ ಸರ್ ಪ್ರಶಾಂತ್‍ರವರದ್ದು ಗೊರಕೆ ಸದ್ದು ಅಲ್ಲ. ಅದು ಲೋಕದ ಜ್ಞಾನ, ವಿಚಾರಣೆ, ಅವರ ಒಳಗಿನಿಂದ ಬರುತ್ತಿರುವುದು ಅವರ ಧ್ವನಿಯಲ್ಲ. ಕರ್ನಾಟಕದ ಧ್ವನಿ. ಅವರು ನಿದ್ದೆಯಲ್ಲಿ ಕೂಡ ಮಾಹಿತಿ ಹಂಚುತ್ತಿರುತ್ತಾರೆ. ಅದನ್ನು ನೀವು ಸದ್ದು ಎಂದು ಭಾವಿಸಿದ್ದಿರಾ ಎಂದು ಹಾಸ್ಯಮಯವಾಗಿ ನುಡಿದರು.

ಬಳಿಕ ರಘುರವರು ನಿಧಿ ಸುಬ್ಬಯ್ಯರವರು ಕೂಡ ಗೊರಕೆ ಹೊಡೆಯುತ್ತಾರೆ. ನಾನು ಅಂದು ಸ್ವಲ್ಪ ಬೇಗ ಎದ್ದಿದ್ದೆ ಮೊಬೈಲ್ ಏನಾದರೂ ಸಿಕ್ಕಿದ್ದರೆ ರೆಕಾರ್ಡ್ ಮಾಡಿ ತೋರಿಸಿಬಿಡುತ್ತಿದ್ದೆ. ಆದರೆ ನನ್ನ ಬಳಿ ಮೊಬೈಲ್ ಇರಲಿಲ್ಲ. ಈ ವೇಳೆ ರಾಜೀವ್ ನಿಧಿಯವರು ಗೊರಕೆ ಹೊಡೆಯುವುದು ಬಹಳ ಚೆನ್ನಾಗಿರುತ್ತದೆ ಎಂದು ಹೇಳುವ ಮೂಲಕ ಗೊರಕೆ ಸದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ್ರು. ಇದಕ್ಕೆ ನಿಧಿ ಸುಬ್ಬಯ್ಯ ಮುಖ ಮುಚ್ಚಿಕೊಂಡು ನಾಚುತ್ತಾ ಮುಗುಳುನಗೆ ಬೀರಿದ್ರು. ಈ ಸದ್ದು ಕೇಳಿ ಮಂಜು ಹಾಗೂ ರಘು ಇಬ್ಬರು ಎರಡು ಬಾರಿ ರಾತ್ರಿ ಎದ್ದು ನನ್ನ ಮುಖ ನೋಡಿ ನಕ್ಕಿದ್ದಾರೆ ಎಂದರು. ಇನ್ನೂ ನಿಧಿ ಸುಬ್ಬಯ್ಯ ಗೊರಕೆ ಹೊಡೆಯುವ ಸೌಂಡ್ ಮಿಮಿಕ್ರಿ ನೋಡಿ ಕಿಚ್ಚ ಹಾಗೂ ಮನೆಯ ಸದಸ್ಯರು ಹೊಟ್ಟೆ ಹುಣ್ಣಾಗುವಂತೆ ನಕ್ಕರು.

ಬಳಿಕ ಲ್ಯಾಗ್ ಮಂಜು ಶಂಕರ್ ರಾತ್ರಿವಿಡೀ ಸ್ಕ್ರಿಪ್ಟ್ ಓದುತ್ತಾರೆ. ಒಮ್ಮೆ ನಿದ್ದೆ ಮಾಡುವ ವೇಳೆ ಶಂಕರ್‍ರವರು ಅಗರ್‍ವಾಲ್ ಎಂದು ಕರೆದರು. ರಾಜೀವ್ ನಿದ್ದೆಯಲ್ಲಿ ಮಾತನಾಡುತ್ತಿರಬಹುದು ಎಂದು ಹೇಳುತ್ತಾರೆ ಆದರೆ ಮಂಜು ಅವರು ನಿಮಗೆ ಗೊತ್ತಿಲ್ಲ. ಬಿಗ್‍ಬಾಸ್ ಎಲ್ಲೋ ಕನಸಿನಲ್ಲಿ ಸ್ಕ್ರಿಪ್ಟ್ ನೀಡಿರಬೇಕು ಅದನ್ನು ಓದುತ್ತಿದ್ದಾರೆ ಎಂದು ಹೇಳಿರುವುದಾಗಿ ರಾಜೀವ್ ತಿಳಿಸಿದರು.

ಒಮ್ಮೆ ನಾನು ಶಂಕರ್ ಅವರ ಪಕ್ಕದಲ್ಲಿ ಮಲಗಲೆಂದು ಹೋದೆ ಸರ್ ಆದರೆ ಐದು ನಿಮಿಷದ ನಂತರ ಶಂಕರ್‍ರವರು ಗೊರಕೆ ಹೊಡೆಯಲು ಆರಂಭಿಸಿದರು. ಅವರು ಹೊಡೆದ ಗೊರಕೆ ಸದ್ದು ಹೇಗಿತ್ತು ಎಂದರೆ ಅವರೆಲ್ಲೋ ನನಗೆ ಉಗುಳುತ್ತಿದ್ದಾರೆ ಎಂಬಂತೆ ಇತ್ತು. ಆಗ ತಕ್ಷಣ ಅವರ ಕಡೆ ಮುಖ ಮಾಡಿಕೊಂಡು ಮಲಗಿದ್ದ ನಾನು ಮತ್ತೊಂದೆಡೆ ತಿರುಗಿಸಿಕೊಂಡು ಮಲಗಿದೆ ಎಂದು ಹೇಳುವ ಮೂಲಕ ಮಂಜು ಹಾಸ್ಯಚಟಾಕಿ ಹರಿಸಿದರು.

ಸದ್ಯ ಮನೆಯ ಸದಸ್ಯರ ಗೊರಕೆ ಕಥೆ ಕೇಳಿದ ಸುದೀಪ್ ವೇದಿಕೆ ಮೇಲೆ ಜೋರು ನಗೆಬೀರಿದರು. ನಂತರ ಇಂದು ಎಲ್ಲರೂ ಎಷ್ಟು ಚೆಂದದ ಬಟ್ಟೆಗಳನ್ನು ಧರಿಸಿ ಕುಳಿತಿದ್ದೀರಿ ಆದರೆ ಎಲ್ಲರ ಅಭಿಪ್ರಾಯಗಳೇ ಬದಲಾಗಿ ಹೋಯಿತು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *