ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂಟಿಮನೆಯಲ್ಲಿ ಬಂಧಿಯಾಗಿರುವ ಸ್ಪರ್ಧಿಗಳಿಗೆ ಹೊರಗಿನ ಪ್ರಪಂಚದಲ್ಲಿ ಕೊರೊನಾ ಆತಂಕ ಹೇಗಿದೆ ಎನ್ನುವ ಕುರಿತಾಗಿ ಚಿಂತೆ ಶುರುವಾಗಿದೆ. ನಮ್ಮ ಮನೆಯವರು, ಕುಟುಂಬಸ್ಥರು, ಜನರು ಹೇಗೆ ಜೀವನ ನಡೆಸುತ್ತಿದ್ದಾರೆ ಏನಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸ್ಪರ್ಧಿಗಳು ಒಂದು ಕವನವನ್ನು ಬರೆದಿದ್ದಾರೆ.
ನಾವೆಲ್ಲ ಬಿಗ್‍ಬಾಸ್ ಮನೆಯಲ್ಲಿ ಇದ್ದೇವೆ. ಆದರೆ ನಮಗೆ ಹೊರಗಿನ ಪ್ರಪಂಚ ಕೊರೊನಾದಿಂದ ಹೇಗಿದೆ ಎನ್ನುವ ಆತಂಕ ಇದೆ. ಹೀಗಾಗಿ ಒಂದು ಕವನವನ್ನು ಬರೆದಿದ್ದೇವೆ. ಎಲ್ಲಾ ಸ್ಪರ್ಧಿಗಳ ಪರವಾಗಿ ನಾನು ಓದುತ್ತೇನೆ ಎಂದು ಚಕ್ರವರ್ತಿ ಕ್ಯಾಮೆರಾ ಮುಂದೆ ನಿಂತು ಹೇ ಕರ್ನಾಟಕ ಹೇಗಿದ್ದೀಯಾ? ಸರ್ವಜನಾಂಗದ ಶಾಂತಿಯತೋಟದ ಹೂಗಳು ನೀವು.. ನಿಮಗಾಗಿ ಇಲ್ಲಿ ಕುಣಿಯುತ್ತಿದ್ದೇವೆ ನಾವುಗಳು… ನಾವಿಲ್ಲಿ ಮಾಸ್ಕ್ ಎನ್ನುವ ಮುಖವಾಡವಿಲ್ಲದೆ ಆಡುತ್ತಿದ್ದೇವೆ. ಕಾರ್ನಾಟಕವೇ ಯಾವ ರೋಗವು ಇನ್ನ ಕಾಡದಿರಲಿ ಎಂದು ಸದಾ ಬೇಡುತ್ತಿದ್ದೇವೆ. ಕರುನಾಡೇ ನಿನ್ನ ಬಾಯಿಮುಚ್ಚಿದ ಬಟ್ಟೆ ಬೇಗ ತೆರೆಯಲಿ.. ಜನರು ದುಃಖ ಮರೆಯಲಿ.. ಕನ್ನಡದ ತಾಯಿ ನೀನು ಇದ್ದರಷ್ಟೇ ನಾವುಗಳು, ನಮ್ಮ ಆಟಗಳು ಎಂದು ಹೆಳುತ್ತಾ ಪ್ರತಿಯೊಬ್ಬ ಸ್ಪರ್ಧಿಯು ಹೊರಗಿ ಜನರನ್ನು ಕಾಡುತ್ತಿರುವ ಕೊರೊನಾದಿಂದ ಬೇಗ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಬಿಗ್‍ಬಾಸ್ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಪಧಿಗಳಿಗೆ ಕೊರೊನಾ ಹೆಚ್ಚಾಗಿದೆ. ಸಾಕಷ್ಟು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎನ್ನುವ ಸುದ್ದಿಯನ್ನು ಬಿಗ್‍ಬಾಸ್ ಕೊಟ್ಟಿದ್ದರು. ಈ ವೇಳೆ ಸ್ಪರ್ಧಿಗಳು ಪ್ರತಿಯೊಬ್ಬರು ಕಣ್ಣೀರು ಹಾಕುತ್ತಾ ತಾವು ಕಟ್ಟಿಕೊಂಡು ಹೋಗಿರುವ ಕನಸನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಬಂದಿದ್ದರು. ಇದೀಗ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮತ್ತೆ ಬಿಗ್‍ಬಾಸ್ ಮನೆ ಸೇರಿಸುವ ಸ್ಪರ್ಧಿಗಳು ಸೇರಿದ್ದಾರೆ. ಮತ್ತೆ ತಮ್ಮ ಆಟವನ್ನು ಶುರುಮಾಡಿದ್ದಾರೆ. ಆದರೆ ಎಲ್ಲೋ ಒಂದುಕಡೆ ಸ್ಪಧಿಗಳಿಗೆ ಕೊರೊನಾ ಆತಂಕ ಶುರುವಾಗಿದೆ. ನಮ್ಮವರು, ಕುಟುಂಬ, ಕರ್ನಾಟಕದ ಜನತೆ ಹೇಗಿದ್ದಾರೆ ಎನ್ನುವ ಆತಂಕದಲ್ಲಿರುವ ಸ್ಪರ್ಧಿಗಳು ಒಂದು ಕವನವನ್ನು ಬರೆದು ತಮ್ಮವರ ರಕ್ಷಣೆಗಾಗಿ ಪ್ರಾರ್ಥಿಸಿದ್ದಾರೆ.