ಬಿಗ್‍ಬಾಸ್ ಕ್ಯಾಮೆರಾ ಬಳಿ ಬಂದ ಶುಭಾ ಪೂಂಜಾ ಮತ್ತು ದಿವ್ಯಾ ಉರುಡುಗ ಒಂದು ಬೇಡಿಕೆನ್ನು ಇಟ್ಟಿದ್ದಾರೆ. ಬೇಡಿಕೆನ್ನು ಇಡೇರಿಸುವಂತೆ ಮನವಿ ಮಾಡಿದ ಶುಭಾ ಕ್ಯಾಮೆರಾಗೆ ಮುತ್ತಿನ ಸುರಿಮಳೆಯನ್ನು ಸುರಿಸಿದ್ದಾರೆ.
ಬಿಗ್‍ಬಾಸ್ ಬಳಿ ಮಾತು ಬಿಡಿವುದು, ಹಟ ಮಾಡುವುದು, ಕೆಲವು ಬೇಡಿಕೆಗಳನ್ನು ಬಿಗ್‍ಬಾಸ್ ಬಳಿ ಇಡುವುದು ಶುಭಾಗೆ ಹೊಸತೇನು ಅಲ್ಲಾ. ಆದರೆ ಬಿಗ್‍ಬಾಸ್ ಬಳಿ ಶುಭಾ ಹಟ ಮಾಡುವ ಕೆಲವು ವಿಚಾರಗಳು ಮಾತ್ರ ವೀಕ್ಷಕರಿಗೆ ಸಖತ್ ಮಜಾವನ್ನು ಕೊಡುತ್ತದೆ.
ಇದೀಗ ಶುಭಾ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ. ಬೆಳ್ಳಂಬೆಳಗ್ಗೆ ಬಂದು ಬಿಗ್‍ಬಾಸ್ ನನಗೆ ನಿದ್ದೆ ಸರಿ ಆಗಿಲ್ಲ ನನಗೆ ಒಂದು ನಾಲ್ಕು ಗಂಟೆ ಸಮಯ ಕೊಡಿ ಎಂದು ನಿದ್ದೆ ಕಣ್ಣಿನಲ್ಲಿ ಕೇಳಿದ್ದಾರೆ. ಬಿಗ್‍ಬಾಸ್ ಏನು ಉತ್ತರಿಸದೆ ಇದ್ದಾಗ. ಬಿಗ್‍ಬಾಸ್ ಬಳಿ ದಿವ್ಯಾ ಉರುಡುಗ ಕೂಡ ಶುಭಾ ಅವರಿಗೆ ನಿದ್ದೆ ಮಾಡಲು ಸಮಯ ಕೊಡಿ ಎಂದು ಕೇಳಿದ್ದಾರೆ.
ನಿಮಗೆ ನಿದ್ದೆ ಮಾಡಲು ಅವಕಾಶ ಕೊಡಬೇಕು ಎಂದರೆ ನೀವು ಒಂದು ಮತ್ತು ಕೊಡಿ ಎಂದು ಉರುಡುಗ ಹೇಳಿದ್ದಾರೆ. ಈ ವೇಳೆ ಶುಭಾ ಕ್ಯಾಮೆರಾಗೆ ಮುತ್ತುಕೊಟ್ಟು ಚಿಕ್ಕ ಮಕ್ಕಳಂತೆ ಬಿಗ್‍ಬಾಸ್ ನನಗೆ ನಿದ್ದೆ ಮಾಡಲು 4 ಗಂಟೆ ಸಮಯವನ್ನು ಕೊಡಿ ಬಿಗ್‍ಬಾಸ್ ಎಂದು ಮುದ್ದ ಮುದ್ದಾಗಿ ಕೇಳಿದ್ದಾರೆ. ಇತ್ತ ಚಕ್ರವರ್ತಿ ಚಂದ್ರಚೂಡ್ ಮತ್ತು ಸಂಬರಗಿ ನಾವು ಯಾಕೆ ಒಂದು ವಾರವು ಶುಭಾನನ್ನು ಕಳಪೆ ಎಂದು ಮಾಡಿಲ್ಲ. ಅವರು ಕೆಲಸವನ್ನು ಮಾಡಲ್ಲ, ಟಾಸ್ಕ್ ಕೂಡ ಚೆನ್ನಾಗಿ ಮಾಡುವುದಿಲ್ಲ ಆದರೂ ನಾವು ಸುಮ್ಮನೆ ಇದ್ದೇವೆ ಎಂದು ಇಬ್ಬರು ಮಾತನಾಡಿಕೊಂಡಿದ್ದಾರೆ. ಈ ವಾರ ಶುಭಾನನ್ನು ಕಳಪೆಯಾಗಿ ಮಾಡುತ್ತಾರ ಎಂದು ಕಾದುನೋಡಬೇಕಿದೆ.