ಬಿಎಸ್‍ವೈ ಧೂಳಿಗೂ ಸಮನಾಗಿಲ್ಲದವರು ದಿನಾ ಬೆಳಗಾದ್ರೆ ಟೀಕಿಸ್ತಿದ್ದಾರೆ: ಎಸ್.ಟಿ ಸೋಮಶೇಖರ್ ಗರಂ

Public TV
1 Min Read

ಮೈಸೂರು: ಯಡಿಯೂರಪ್ಪನವರು ಧೂಳಿಗೂ ಸಮನಾಗಿಲ್ಲದವರು, ಅವರನ್ನು ದಿನ ಬೆಳಗಾದರೆ ಟೀಕಿಸುತ್ತಿದ್ದಾರೆ ಎಂದು ಸಿಎಂ ವಿರುದ್ಧ ಹೇಳಿಕೆ ನೀಡುತ್ತಿರೋ ಶಾಸಕರ ಬಗ್ಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‍ಟಿ ಸೋಮಶೇಖರ್ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆ – ಬಿಎಸ್‍ವೈ ವಿರುದ್ಧ ಗುಡುಗಿದ ಯತ್ನಾಳ್

ಸುತ್ತೂರು ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮಿಂದ ಸರ್ಕಾರ ಬಂತು ಎಂದು ಪದೇ ಪದೇ ಕೆಲವರು ಹೇಳುತ್ತಿದ್ದಾರೆ. ಸ್ವಲ್ಪನಾದ್ರೂ ಕಾಮನ್ ಸೆನ್ಸ್ ಇರ್ಬೇಕು. ಇವವರು ಯಾರನ್ನೂ ನಂಬಿಕೊಂಡು ನಾವು ಸರ್ಕಾರ ಮಾಡಿಲ್ಲ. ಇವರಿಗೆ ಯಡಿಯೂರಪ್ಪ ಬಗ್ಗೆ ಅಸಮಧಾನ ಇದ್ದರೆ ಶಾಸಕಾಂಗ ಸಭೆಯಲ್ಲಿ ಮಾತನಾಡಲಿ. ಅದನ್ನು ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ರಿಪಿಟರ್ಸ್ ಪಾಸ್ ಮಾಡಲು ಸರ್ಕಾರದ ನಿರ್ಧಾರ!

ಅವರು ಯಾರಿಂದಲೂ ಸರ್ಕಾರ ಬಂದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ 104 ಜನ ಗೆದ್ದಿದ್ದರು. ಜೆಡಿಎಸ್, ಕಾಂಗ್ರೆಸ್‍ನ ನಾವು 17 ಜನ ಅವ್ರ ಜೊತೆ ಬಂದೆವು. ಸರ್ಕಾರ ಆಗಿದೆ. ಯಡಿಯೂರಪ್ಪನ ನೇತೃತ್ವದಲ್ಲಿ 104 ಜನ ಗೆಲ್ಲದೆ ಇದ್ದಿದ್ದರೆ ಸರ್ಕಾರ ಮಾಡಲು ಸಾಧ್ಯವಿತ್ತಾ..? ಇವತ್ತು ಯಡಿಯೂರಪ್ಪನ ಬಗ್ಗೆ ಮಾತನಾಡುವ ಇವರು ಯಾಕೆ ಚುನಾವಣೆಯಲ್ಲಿ ಸೋತರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿ.ಪಿ.ವೈ ಯಾವ ಭಾವನೆಯಲ್ಲಿ ಮಾತಾಡಿದ್ದಾರೆ ಗೊತ್ತಿಲ್ಲ, ಅದರ ವಿವರಣೆ ಕೇಳ್ತೇನೆ: ಕಟೀಲ್

ಒಂದು ಬಾರಿ ಸರಿ ಎರಡು ಬಾರಿ ಸರಿ. ಪ್ರತಿ ದಿನವೂ ಇವರದ್ದು ಯಡಿಯೂರಪ್ಪ ಅವ್ರನ್ನ ಟೀಕೆ ಮಾಡುವುದೇ ಆಗಿದೆ. ಯಡಿಯೂರಪ್ಪ ಅವರ ಪರಿಶ್ರಮ, ನಾಯಕತ್ವ ಎಂತದ್ದು ಎನ್ನೋದನ್ನ ಅರಿತುಕೊಂಡು ಮಾತನಾಡಲಿ. ಯಡಿಯೂರಪ್ಪನವರ ಸಮಕ್ಕೆ ಇರುವವರು ಮಾತನಾಡಿದರೆ ಅದಕ್ಕೊಂದು ಬೆಲೆ ಇರುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *