ಬಿಎಸ್‍ವೈ ಆಪರೇಷನ್ ಕಮಲದ ಪಿತಾಮಹ: ಶಾಸಕ ಭೀಮಾನಾಯ್ಕ್

Public TV
1 Min Read

ವಿಜಯನಗರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಪರೇಷನ್ ಕಮಲದ ಪಿತಾಮಹ ಇದ್ದಂತೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್. ಭೀಮನಾಯ್ಕ್ ಹೇಳಿದ್ದಾರೆ.

ದೇಶದಲ್ಲಿ ಜಾತಿಗಳ ಮಧ್ಯೆ ಕಲಹ ತಂದಿಟ್ಟು ಸಮಾಜದಲ್ಲಿನ ಸಹಬಾಳ್ವೆಗೆ ಬೆಂಕಿಯಿಟ್ಟು ಪೆಟ್ರೋಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಹೆಚ್ಚಳ ಮಾಡಿ ಶ್ರಮಿಕ ವರ್ಗವನ್ನು ತೆರಿಗೆ ಎಂಬ ಕೂಪಕ್ಕೆ ಸಿಲುಕಿಸಿದೆ ಎಂದು ಭೀಮನಾಯ್ಕ್‍ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ತೈಲ ಬೆಲೆ ಏರಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಳ್ಳಾರಿ ಜಿಲ್ಲೆಯ ಕೊಟ್ಟರು ಪಟ್ಟಣದ ಉಜ್ಜಿನಿ ರಸ್ತೆಯ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಂಬಿ ಮತ ಹಾಕಿದ ಎಲ್ಲಾ ಮತದಾರರಿಗೂ ತಮ್ಮ ತಮ್ಮ ಖಾತೆಗೆ 15 ಲಕ್ಷ ರೂ ಹಣ, ಎರಡು ಲಕ್ಷ ಕೋಟಿ ಉದ್ಯೋಗ ನೀಡದೇ ಸುಳ್ಳು ಭರವಸೆ ನೀಡಿ ದೇಶದ ಜನರಿಂದ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಖಾರವಾಗಿ ನುಡಿದಿದ್ದಾರೆ.

ಈಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಪರೇಷನ್ ಕಮಲದ ಪಿತಾಮಹ ಇದ್ದಂತೆ ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವಾಗ ನಮ್ಮ ಸಮ್ಮಿಶ್ರ ಸರ್ಕಾರದ 19 ಶಾಸಕರನ್ನು ಲಂಚ ಕೊಟ್ಟು ಖರೀದಿ ಮಾಡಿಕೊಂಡು ಕಳ್ಳದಾರಿಯಲ್ಲಿ ಬಂದು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ:  ಈಶ್ವರಪ್ಪನವರಿಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ: ಆರ್.ವಿ.ದೇಶಪಾಂಡೆ

Share This Article
Leave a Comment

Leave a Reply

Your email address will not be published. Required fields are marked *