ಬದುಕಿನ ಬಂಡಿ ಸಾಗಿಸಲು ರಸ್ತೆ ಬದಿ ಮೀನು ಮಾರಾಟಕ್ಕಿಳಿದ ಜನಪ್ರಿಯ ಕಿರುತೆರೆ ನಟ

Public TV
1 Min Read

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಇದು ಅನೇಕ ಮಂದಿಯ ಬಾಳನ್ನು ಕಸಿಯಿತು. ತುತ್ತಿನ ಅನ್ನಕ್ಕೂ ಜನ ಪರದಾಡುವಂತಾಗಿತ್ತು. ಅಂತೆಯೇ ಬೆಂಗಾಳಿ ಕಿರುತೆರೆ ನಟರೊಬ್ಬರು ತಮ್ಮ ಬದುಕಿನ ಬಂಡಿ ಓಡಿಸಲು ಮೀನು ಮಾರಾಟಕ್ಕಿಳಿದಿದ್ದಾರೆ.

ಹೌದು. ಕಿರುತೆರೆ ಲೋಕದಲ್ಲಿ ಜನಪ್ರಿಯ ನಟನಾಗಿ ಗುರುತಿಸಿಕೊಂಡಿರುವ ಅರಿಂದರ್ ಪ್ರಮಣಿಕ್‍ಗೆ ರಸ್ತೆ ಬದಿ ಮೀನು ಮಾರಾಟ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ಬಂದೊದಗಿದೆ. ನಟನ ಈ ಸ್ಥಿತಿಗೆ ಕಲಾಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ

ಈ ಸಂಬಂಧ ಪ್ರತಿಕ್ರಿಯಿಸಿರುವ ನಟ, ನನ್ನ ತಂದೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಆಗ ನಾನು ಜನಪ್ರಿಯ ನಟನಾಗಬೇಕೆಂಬ ಕನಸು ಕಂಡಿದ್ದೆ. ಹೀಗೆ ನಟನೆಗೆ ಇಳಿದೆ. ನಾನು ನಟನೆ ಮಾಡಲು ಆರಂಭಿಸುತ್ತಿದ್ದಂತೆಯೇ ನಮ್ಮ ತಂದೆ ತರಕಾರಿ ಮಾರಾಟ ಮಾಡುವುದುನ್ನು ನಿಲ್ಲಿಸಿದ್ದರು. ಆದರೆ ಇದೀಗ ಕೊರೊನಾದಿಂದ ನನಗೂ ಕೆಲಸ ಸಿಗುತ್ತಿಲ್ಲ. ಇತ್ತ ಕುಟುಂಬವೂ ತೀವ್ರ ಸಂಕಷ್ಟಕ್ಕೀಡಾಯಿತು. ಹೀಗಾಗಿ ನನ್ನ ಕುಟುಂಬ ನೋಡಿಕೊಳ್ಳಲು ನಾನು ಮೀನು ಮರಾಟಕ್ಕೆ ಇಳಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಬೀದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಜೀವನ ನಡೆಸಬೇಕೆಂದರೆ ಇದನ್ನು ಮಾಡಲೇಬೇಕಿತ್ತು, ನನಗೆ ಬೇರೆ ದಾರಿ ಇರಲಿಲ್ಲ ಎಂದು ಪ್ರಮಣಿಕ್ ತಮ್ಮ ಪರಿಸ್ಥಿತಿ ನೆನೆದು ಕಣ್ಣೀರಾದರು.  ಇದನ್ನೂ ಓದಿ: ಮಾಜಿ ಸಿಎಂ ಪದ ಬಳಕೆ ತಪ್ಪು, ಕೆಲಸವನ್ನ ಟೀಕಿಸಲಿ: ಶಾಸಕಿ ಪೂರ್ಣಿಮಾ

ಪ್ರಮಣಿಕ್ ಅವರು ತಾವು ಪ್ರಥಮ ಪಿಯುಸಿ ಓದುತ್ತಿದ್ದಾಗಲೇ ನಟನೆ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದರು. ನಾಟಕಕಾರ ಹಾಗೂ ನಿರ್ದೇಶಕ ಚಂದನ್ ಸೇನ್ ಅವರ ತಂಡ ಸೇರಿ ನಾಟಕಗಳಲ್ಲಿ ನಟಿಸಲು ಆರಂಭಿಸಿದರು. ನಂತರ ಅಲ್ಲಿಂದ ಧಾರಾವಾಹಿ ಲೋಕಕ್ಕೆ ಪ್ರವೇಶಿಸಿದ್ದು, ಅನನ್ಯ ಚಟರ್ಜಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸುಬರ್ನಲತಾ’ ಧಾರಾವಾಹಿ ಸೇರಿದಂತೆ ಬೆಂಗಾಳಿಯ ಹಲವು ಧಾರಾವಾಹಿಗಳಲ್ಲಿ ಅರಿಂದಮ್ ಪ್ರಮಣಿಕ್ ನಟಿಸಿ ಮನೆ ಮಾತಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *