ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಂಬೈ ಬೀದಿಗಳಲ್ಲಿ ಊಟ ವಿತರಣೆ ಮಾಡುತ್ತಾ ಬಡವರ ಕಷ್ಟಕ್ಕೆ ಸಹಾಯವನ್ನು ಮಾಡುತ್ತಾ ಹಸಿದವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಸನ್ನಿ ಲಿಯೋನ್ ಸಿನಿಮಾದ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಈಗ ಕೊರೊನಾ ಸಮಯದಲ್ಲೂ ಹೃದಯ ಶ್ರೀಮಂತಿಕೆ ಮೆರೆದಿರುವ ಸನ್ನಿ ಮುಂಬೈನಲ್ಲಿರುವ ಬಡವರಿಗೆ ಹಾಗೂ ನಿರ್ಗತಿಕರಿಗೆ ಊಟ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
View this post on Instagram
ಸನ್ನಿಯ ಈ ಸೇವೆಗೆ ಪತಿ ಡೇನಿಯಲ್ ವೆಬರ್ ಕೂಡ ಸಾಥ್ ನೀಡಿದ್ದಾರೆ. ಟ್ರಕ್‍ನಲ್ಲಿ ಊಟದ ಪ್ಯಾಕೇಟ್‍ಗಳನ್ನು ಇಟ್ಟುಕೊಂಡು, ಮುಂಬೈನ ಬೀದಿ ಬೀದಿಗೂ ಹೋಗಿ ಸನ್ನಿ ಲಿಯೋನ್ ಹಾಗೂ ಡೇನಿಯಲ್ ದಂಪತಿ ಆಹಾರ ವಿತರಿಸುತ್ತಿದ್ದಾರೆ. ಈ ಕುರಿತಾಗಿ ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
View this post on Instagram
ಕೊರೊನಾ ಸಂಕಷ್ಟ ಕಾಲದಲ್ಲಿ ಹಲವು ಆಹಾರ, ಆಸ್ಪತ್ರೆ, ಬೇಡ್, ಆಕ್ಸಿಜನ್ ಹೀಗೆ ಹಲವು ರೀತಿಯ ಸಹಾಯವನ್ನು ಎಲ್ಲಾ ಸಿನಿಮಾ ರಂಗದ ಸ್ಟಾರ್‍ಗಳು ಮಾಡುತ್ತಾ ಬಂದಿದ್ದಾರೆ. ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಶಿವರಾಜ್‍ಕುಮಾರ್, ರಾಗಿಣಿ ಹೀಗೆ ಹಲವರು ಸಹಾಯ ಮಾಡುತ್ತಿದ್ದಾರೆ.