ಬಂಡೀಪುರ ಪ್ರವಾಸ ಮಾಡಿ ಗಿಡ ನೆಟ್ಟ ಪ್ರೇಮಲೋಕ ಚೆಲುವೆ ಜೂಹಿ ಚಾವ್ಲಾ

Public TV
2 Min Read

ಬೆಂಗಳೂರು: ಬುಹುಭಾಷಾ ನಟಿ, ಕಿಂದರಿಜೋಗಿ ಬೆಡಗಿ ಜೂಹಿ ಚಾವ್ಲಾ ಮೂಸೂರು ಸುತ್ತಮುತ್ತ ಪ್ರವಾಸ ಮಾಡಿ ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ನಟಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶಾಂತಿ ಕ್ರಾಂತಿ ಚೆಲುವೆ ಜನಪ್ರಿಯ ಬಾಲಿವುಡ್ ನಟಿ ಜೂಹಿ ಚಾವ್ಲಾ ತಮ್ಮ ಕುಟುಂಬದವರೊಂದಿಗೆ ಇತ್ತೀಚೆಗೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡು ಹಿಂದಿರುಗಿದ್ದಾರೆ. ಈ ಬಗ್ಗೆ ಖುದ್ದು ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದೆ.

ಎಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಅಣೆಕಟ್ಟೆಗೆ ಜೂಹಿ ತೆರಳಿದ್ದರು. ಅಲ್ಲಿನ ನಿಸರ್ಗ ತಾಣಗಳನ್ನು ವೀಕ್ಷಿಸಿದ ಬಳಿಕ ಕಾರಾಪುರ ಜಂಗಲ್ ಲಾಡ್ಜ್‌ನಲ್ಲಿ ತಂಗಿದ್ದರು. ನಂತರ ನಾಗರಹೊಳೆ ಸುತ್ತಮುತ್ತಲಿನ ಸುಂದರ ತಾಣಗಳನ್ನು ವೀಕ್ಷಿಸಿದ್ದ ಅವರು ಇಲ್ಲಿನ ಪರಿಸರದ ಭವ್ಯತೆಯನ್ನು ಹಾಡಿಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬಂಡೀಪುರ ಪ್ರವಾಸದ ವೇಳೆ ರೆಸಾರ್ಟ್‍ನಲ್ಲಿ ಉಳಿದುಕೊಂಡಿದ್ದರು. ಪ್ರವಾಸದ ನೆನಪಿನಾರ್ಥವಾಗಿ ನಾವು ಉಳಿದುಕೊಂಡಿದ್ದ ರೇಸಾರ್ಟ್‍ನಲ್ಲಿ ಒಂದು ಗಿಡವನ್ನು ಸಹ ನೆಟ್ಟಿದ್ದೇವೆ ಎಂದು ಗಿಡ ನೆಡುತ್ತಿರುವ ವೀಡಿಯೋ ಶೇರ್ ಮಾಡಿದ್ದಾರೆ. ಕರ್ನಾಟಕದ ಕಬಿನಿ ನದಿಯ ಹೊರತಾಗಿ, ನಾಗರ ಹೊಳೆ ವನ್ಯಜೀವಿಗಳಿಗೆ ಮೀಸಲು ಇರುವ ಪ್ರದೇಶದಲ್ಲಿ ಟೈಗರ್ ಸಫಾರಿಗೆ ಹೋಗುತ್ತಿದ್ದೇವೆ ಎಂದು ಬರೆದುಕೊಂಡು ಅದರ ಒಂದು ಫೋಟೋವನ್ನು ಜೂಹಿ ಚಾವ್ಲಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Juhi Chawla (@iamjuhichawla)

ಬಂಡೀಪುರ ಹಲವಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಹೀರುವಾಗ ಇಂತಹ ಅದ್ಭುತವಾದ ಭೌವ್ಯ ತಾಣಕ್ಕೆ ಬಾಲಿವುಡ್ ನಟರು, ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬರುತ್ತಿದ್ದಾರೆ. ಈ ಹಿಂದೆ ಹಲವು ನಟ-ನಟಿಯರು ಬಂದು ಹೋಗಿದ್ದಾರೆ. ಇಲ್ಲಿನ ಪ್ರಕೃತಿಯ ಸೊಬಗಿಗೆ ಮನಸೋತಿರುವುದು ಸ್ಥಳೀಯರಿಗೆ ಸಂತಸ ತರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *