ಬಂಗಾರದ ಮನುಷ್ಯನಿಗೆ ಅವಮಾನ- ಗೂಗಲ್‍ಗೆ ರಿಷಬ್ ಶೆಟ್ಟಿ ರಿಪೋರ್ಟ್

Public TV
2 Min Read

ಬೆಂಗಳೂರು: ಗೂಗಲ್ ಸರ್ಚನಲ್ಲಿ ತಮಿಳು ವೇದ್ ಸಿನಿಮಾ ತಂಡದ ಕುರಿತಾಗಿ ಸರ್ಚ್ ಮಾಡಿದರೆ ಡಾ. ರಾಜ್‍ಕುಮಾರ್ ಅವರ ಹೆಸರಿಗೆ ಅವಮಾನ ಆಗುವ ಪದವಿದೆ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

ತಮಿಳು ವಿಕ್ರಮ್ ವೇದ್ ಸಿನಿಮಾ ತಂಡದ ಬಗ್ಗೆ ಸರ್ಚ್ ಮಾಡಿದಾಗ ರಾಜ್‍ಕುಮಾರ್ ಅವರ ಫೋಟೋ ಕಾಣಿಸುತ್ತದೆ ಜೊತೆಗೆ ಅರೆಬೆಂದ (HALF BOIL) ಪಾತ್ರವೊಂದರಲ್ಲಿ ನಟಿಸಿದ್ದಾರೆ ಎಂಬಂತೆ ಮಾಹಿತಿ ಇದೆ. ದಯಮಾಡಿ ಗೂಗಲ್‍ಗೆ ರಿಪೋರ್ಟ್ ಮಾಡಿ, ತಪ್ಪು ಸರಿ ಹೋಗಲಿ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೆ ಗೂಗಲ್‍ನಲ್ಲಿ ‘Ugliest Language of India‘ ಎಂದು ಟೈಪ್ ಮಾಡಿದರೆ ಕನ್ನಡ ಎಂದು ತೋರಿಸುತ್ತಿತ್ತು. ನಂತರ ಗೂಗಲ್ ತನ್ನ ತಪ್ಪನ್ನು ಸರಿಪಡಿಸಿಕೊಂಡಿತ್ತು. ಜೊತೆಗೆ ಕನ್ನಡಿಗರ ಬಳಿ ಕ್ಷಮೆಯಾಗಿಸಿತ್ತು. ಇದೀಗ ಗೂಗಲ್‍ನಿಂದ ಮತ್ತೊಂದು ಎಡವಟ್ಟಾಗಿದೆ. ಕನ್ನಡದ ಮೇರು ನಟ ಡಾ. ರಾಜ್‍ಕುಮಾರ್ ಅವರ ಫೋಟೋ ತಮಿಳು ಸಿನಿಮಾದ ತಾರಾಗಣದ ಪಟ್ಟಿಯಲ್ಲಿ ಕಾಣಿಸುತ್ತಿದೆ.  ತಮಿಳಿನ ಸಿನಿಮಾ ವಿಕ್ರಂ ವೇದ ಚಿತ್ರದ ತಾರಾಗಣದ ಪಟ್ಟಿಯಲ್ಲಿ ಡಾ. ರಾಜ್‍ಕುಮಾರ್ ಅವರ ಫೋಟೋ ಸಹ ಕಾಣಿಸಿಕೊಂಡಿದೆ. ಈ ಮೂಲಕ ಕನ್ನಡ ಹಾಗೂ ಡಾ, ರಾಜ್‍ಕುಮಾರ್ ಅವರಿಗೆ ಅವಮಾನ ಮಾಡಿದೆ ಎಂದು ಕನ್ನಡಿಗರು ಮತ್ತೆ ಸಿಟ್ಟಿಗೆದಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಸಿನಿಮಾ ಕಲಾವಿಧರು, ಅಭಿಮಾನಿಗಳು ಈ ಬಗ್ಗೆ ಗೂಗಲ್ ರಿಪೋರ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಗೂಗಲ್ ಕ್ಷಮೆ ಕೋರಿದೆ, ಒಕ್ಕೂಟ ಸರ್ಕಾರಗಳು ಕನ್ನಡಕ್ಕೆ ಎಷ್ಟು ಮಾನ್ಯತೆ ನೀಡಿವೆ? – ಎಚ್‍ಡಿಕೆ ಕಿಡಿ

ಗೂಗಲ್‍ನಲ್ಲಿ ಹೀಗೆ ತಪ್ಪಾಗಿ ಬೇರೆಯವರ ಫೋಟೋಗಳನ್ನು ಹಾಕುವುದು ಹೊಸದೇನಲ್ಲ. ಈ ಹಿಂದೆಯೂ ಗೂಗಲ್ ಕಡೆಯಿಂದ ಇಂತಹ ಎಡವಟ್ಟಾಗಿದೆ. ಯಾರದ್ದೋ ಹೆಸರಿಗೆ ಯಾರದ್ದೋ ಚಿತ್ರ ತೋರಿಸಿರುವ ಹಲವಾರು ಘಟನೆಗಳು ಸಾಕಷ್ಟು ಸಲ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಕನ್ನಡ ಕೊಳಕು ಭಾಷೆ ಎಂದ ವೆಬ್‍ಸೈಟ್ – ಪೇಜ್ ಅನ್ನು ಸರ್ಚ್‍ನಿಂದ ಕಿತ್ತೆಸೆದ ಗೂಗಲ್

ರಿಪೋರ್ಟ್ ಮಾಡುವುದು ಹೇಗೆ:

ಬಳಕೆದಾರ ಹುಡುಕಿದಾಗ ಫಲಿತಾಂಶವನ್ನು ಗೂಗಲ್ ಸರ್ಚ್ ತೋರಿಸುತ್ತದೆಯೋ ಹೊರತು ಆ ಫಲಿತಾಂಶ ಸರಿ ಇದೆಯೋ ತಪ್ಪಿದೆಯೋ ಎಂಬುದನ್ನು ಪರಿಶೀಲಿಸುವುದಿಲ್ಲ. ಅಷ್ಟೇ ಅಲ್ಲದೇ ಇದು ಅಸಾಧ್ಯ. ಆದರೆ ಬಳಕೆದಾರರಿಗೆ ಆಯ್ಕೆಯನ್ನು ನೀಡಿದ್ದು ಒಂದು ವೇಳೆ ತಪ್ಪು ಮಾಹಿತಿಗಳು ಇದ್ದಲ್ಲಿ ಆ ಪೇಜ್ ಅನ್ನು ರಿಪೋರ್ಟ್ ಮಾಡಬಹುದಾಗಿದೆ. ರಿಪೋರ್ಟ್‍ಗಳ ಸಂಖ್ಯೆ ಜಾಸ್ತಿಯಾದರೆ ಗೂಗಲ್ ಸರ್ಚ್‍ನಲ್ಲಿ ಕೆಲಸ ಮಾಡುವವರು ಈ ವಿಚಾರವನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಂಡು ಆ ಪೇಜ್‍ಗಳನ್ನು ಸರ್ಚ್‍ನಿಂದ ತೆಗೆದು ಹಾಕುತ್ತಾರೆ. ಗೂಗಲ್ ಸರ್ಚ್‍ನ ಕೊನೆಯಲ್ಲಿ ‘‘Send Feedback”  ಆಯ್ಕೆಯನ್ನು ಕ್ಲಿಕ್ ಮಾಡಿ  ರಿಪೋರ್ಟ್ ಮಾಡಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *