ಪ್ರೇಮಿಗಳ ದಿನದಂದು ಶುಭ ಸುದ್ದಿ ಕೊಡಲಿದೆ ಪೊಗರು ತಂಡ

Public TV
1 Min Read

ಬೆಂಗಳೂರು: ದಾವಣಗೆರೆಯಲ್ಲಿ ನಡೆಯುವ ಪೊಗರು ಚಿತ್ರದ ಆಡಿಯೋ ರೀಲಿಸ್ ವೇಳೆ ಸಾಕಷ್ಟು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಇರುವ ಸೆಲೆಬ್ರಿಟಿ ಸ್ಟಾರ್‌ಗಳು ಒಂದೇ ಕಡೆ ಕಾಣಿಸಿಕೊಳ್ಳಲಿದ್ದಾರೆ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ.

 

ಫೆಬ್ರವರಿ 14 ಪ್ರೇಮಿಗಳ ದಿನದಂದು ದಾವಣಗೆರೆಯಲ್ಲಿ ಪೊಗರು ಸಿನಿಮಾ ಆಡಿಯೋ ರೀಲಿಸ್ ಮಾಡಲಿದ್ದೇವೆ ಎಂದು ಸ್ಯಾಂಡಲ್‍ವುಡ್ ಅದ್ಧೂರಿ ಹುಡುಗ ಧ್ರುವ ಸರ್ಜಾ ಇನ್‍ಸ್ಟಾಗ್ರಾಮ್ ಲೈವ್ ವೇಳೆ ಹೇಳಿದ್ದಾರೆ.

 

ಶ್ರೇಯಸ್ ಮೀಡಿಯಾ ಶ್ರೀನಿವಾಸ್ ತುಂಬಾ ದೊಡ್ಡ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಆಯೋಜಿಸಲಿದ್ದಾರೆ. ಸಿನಿಮಾ ಕುರಿತಾಗಿ ಸಾಕಷ್ಟು ಸರ್ಪ್ರೈಜ್ ಇರಲಿದೆ. ಸಿನಿಮಾ ತಂಡದ ಕಲಾವಿದರು ಹಾಗೂ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಲವು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಇರುವ ಸೆಲೆಬ್ರಿಟಿಗಳು ಒಂದೆ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಕುರಿತಾದ ಸಾಕಷ್ಟು ವಿಚಾರಗಳನ್ನು ನಾವು ಕಾರ್ಯಕ್ರಮದಲ್ಲಿ ಹೇಳಲಿದ್ದೇವೆ. ಫೆಬ್ರವರಿ 19 ರಂದು ಸಿನಿಮಾ ರೀಲಿಸ್ ಆಗುತ್ತೆ. ಸಿನಿಮಾ ಬಿಡುಗಡೆದಿನ ಎಲ್ಲಿರುತ್ತೇನೆ ಹಾಗೂ ಸಿನಿಮಾ ಕುರಿತಾದ ಸಾಕಷ್ಟು ವಿಷಯವನ್ನು ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೇಳಲಿದ್ದೇವೆ.

 

View this post on Instagram

 

A post shared by Dhruva Sarja (@dhruva_sarjaa)

ಒದು ನಿಮಿಷ ಟ್ರೈಲರ್, ಮೇಕಿಂಗ್ ವೀಡಿಯೋ ಅಥವಾ ಇಂಟ್ರೊಡಕ್ಷನ್ ಸಾಂಗ್ ಬಿಡಬೇಕಾ ಎಂಬ ವಿಚಾರವನ್ನು ಅಭಿಮಾನಿಗಳಾದ ನಿಮಗೆ ಬಿಡುತ್ತೇನೆ. ನೀವು ಹೇಳಿದ ಹಾಗೆ ನಾವು ನಮ್ಮ ಚಿತ್ರತಂಡ ನೀರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಇದೇ ತಿಂಗಳ 19 ರಂದು ಸಿನಿಮಾ ಬಿಡುಗಡೆಯಾಗಲಿದೆ ನಾನು ತುಂಬಾ ಉತ್ಸುಕನಾಗಿದ್ದೆನೆ. ನಾಳೆಯಿಂದ ಪೊಗರು ತೆಲಗು ಅವತರಣಿಕೆಯ ಪ್ರಮೋಷನ್ ಪ್ರಾರಂಭಿಸುತ್ತೇವೆ ಎಂದು ಅಭಿಮಾನಿಗಳಿಗೆ ಸಿನಿಮಾ ಕುರಿತಾದ ಅಪ್ಡೇಟ್ಸ್ಅನ್ನು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *