ಪ್ರೇಮವಿವಾಹದ ವೇಳೆ ಅಣ್ಣನಂತೆ ಭುಜಕೊಟ್ಟರು – ಟೈಗರ್ ಪ್ರಭಾಕರ್ ಸ್ಮರಿಸಿದ್ರು ಜಗ್ಗೇಶ್

Public TV
1 Min Read

ಬೆಂಗಳೂರು: ಇಂದು ದಿವಂಗತ ನಟ ಟೈಗರ್ ಪ್ರಭಾಕರ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ನವರಸನಾಯಕ ಜಗ್ಗೇಶ್ ಇಂದು ಅವರನ್ನು ಸ್ಮರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ನಾವಿಬ್ಬರು ನಟಿಸಿದ ಚಿತ್ರ ಅರ್ಜುನ ಅಭಿಮನ್ಯು 1995 ಸಮಯದಲ್ಲಿ ಅಮ್ಮ ತೀರಿಕೊಂಡಳು! ಜಗವೆ ಶೂನ್ಯವಾಗಿ ದುಃಖಿಸುವಾಗ 2ಕೈ ನನ್ನ ತಬ್ಬಿ ಅಳುತ್ತಾ ರಾಜಣ್ಣೆ ನೀನು ನನ್ನಂತೆ ಅಮ್ಮನ ಕಳೆದುಕೊಂಡೆಯಾ ಎಂದಾಗ ನನ್ನ ದುಃಖದ ಕಟ್ಟೆಯೊಡೆದು ಹುಚ್ಚನಂತೆ ಅತ್ತುಬಿಟ್ಟೆ! ಅಂಥ ಕರುಣಾಮಯಿ ಪ್ರಭಣ್ಣ ನಿಮಗೆ ಹುಟ್ಟುಹಬ್ಬದ ಶುಭಾಶಯ! ನಿಮ್ಮ ಪ್ರೀತಿ ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿ, ಪ್ರಭಣ್ಣ ನನ್ನ ಸ್ನೇಹ ಆದದ್ದು 1987 ಚಿತ್ರ #ಅಗ್ನಿಪರ್ವ! ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯ ಇಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು! ಅಲ್ಲಿಂದ ನನ್ನ ಬೆಳವಣಿಗೆ ನೋಡಿ ಆನಂದಿಸುತ್ತಿದ್ದರು! ಎಷ್ಟೋ ದಿನಗಳು ನಾವಿಬ್ಬರೇ ಗುಂಡುಪಾರ್ಟಿ ಸಹಪಾಟಿಗಳು! ಅವರ ಮರಣಯಾತ್ರೆವರೆಗೂ ಜೊತೆ ಇದ್ದೆ! ಅವರು ನನ್ನ ಕರೆಯುತ್ತಿದ್ದ ಶೈಲಿ ರಾಜಣ್ಣೆ ಅದ್ಭುತ ಎಂದು ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಟೈಗರ್ ಪ್ರಭಾಕರ್ ಅವರನ್ನು ನೆನಪಿಸಿಕೊಂಡರು.

ಸ್ಯಾಂಡಲ್‍ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ ಹೀಗೆ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿ ಟೈಗರ್ ಪ್ರಭಾಕರ್ ಮಿಂಚಿದ್ದರು. ಅವರು ನಮ್ಮನ್ನು ಅಗಲಿ ಎರಡು ದಶಕಗಳೇ ಉರುಳಿವೆ. ಆದರೂ ಸಿನಿಪ್ರಿಯರು, ಆಪ್ತರು ಹಾಗೂ ಅವರ ಅಭಿಮಾನಿಗಳ ಹೃದಯದಲ್ಲಿ ನಟ ಇಂದಿಗೂ ನೆಲೆಸಿದ್ದು, ಜನ್ಮದಿನದ ಹಿನ್ನೆಲೆಯಲ್ಲಿ ಎಲ್ಲರೂ ಅವರನ್ನು ನೆನಪಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *