ಪ್ರಿಯಾಂಕಾ ಕಣ್ಣೀರು ಹಾಕಲು ಕಾರಣವೇನು ಗೊತ್ತಾ?

Public TV
2 Min Read

ಬಿಗ್ ಬಾಸ್ ನೀಡಿದ ಟಾಸ್ಕ್‌ವೊಂದರಲ್ಲಿ ನನಗೆ ಅನ್ಯಾಯವಾಗಿದೆ ಅಂತ ಪ್ರಿಯಾಂಕಾ ತಕರಾರು ಶುರು ಮಾಡಿದ್ದರು. ಅದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ರಾತ್ರಿ ಲೇಟ್ ಆದರೂ ಯಾರೂ ಊಟ ಕೂಡ ಮಾಡಲಿಕ್ಕೆ ಆಗಿರಲಿಲ್ಲ. ಮನೆ ಮಂದಿ ಬಂದು ಕೇಳಿಕೊಂಡರು ಪ್ರಿಯಾಂಕ ಒಪ್ಪಿಕೊಳ್ಳಲು ಸಿದ್ಧವಾಗಿರಲಿಲ್ಲ.

ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಆ ಪ್ರಕಾರ, ಕೈ-ಕಾಲು ಬಳಸದೇ ತೇವಳಿಕೊಂಡು ಬರೀ ತಲೆಯಿಂದ ಬಾಲ್ ಅನ್ನು ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಿಸಬೇಕಿತ್ತು. ಇದರಲ್ಲಿ ಪ್ರಶಾಂತ್ ಸಂಬರಗಿ, ಅರವಿಂದ್, ಪ್ರಿಯಾಂಕಾ ಭಾಗವಹಿಸಿದರು. ಆಗ ಅರವಿಂದ್ ಆಕಸ್ಮಿಕವಾಗಿ ಪ್ರಿಯಾಂಕಾ ಅವರ ಕೋರ್ಟ್‍ನಲ್ಲಿದ್ದ ಬಾಲ್ ಅನ್ನು ತಳ್ಳಿದರು. ಇದರಿಂದ ಕೋಪಗೊಂಡ ಪ್ರಿಯಾಂಕಾ ಆಟವನ್ನು ಮುಂದವರಿಸಲಿಲ್ಲ. ಆದರೆ, ಅರವಿಂದ್ ಮತ್ತು ಪ್ರಶಾಂತ್ ಮುಗಿಸಿದರು. ಅಂತಿಮವಾಗಿ ತೀರ್ಪುಗಾರರಾಗಿದ್ದ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್, ವೈಷ್ಣವಿ ಗೌಡ ಅವರು ಅರವಿಂದ್‍ಗೆ ಮೊದಲ ಸ್ಥಾನ ಹಾಗೂ ಪ್ರಿಯಾಂಕಾಗೆ ಮೂರನೇ ಸ್ಥಾನ ನೀಡಿದರು. ಇದು ಪ್ರಿಯಾಂಕಾಗೆ ಬೇಸರ ತರಿಸಿತು. ನಾನು ಮೂರನೇ ಸ್ಥಾನವನ್ನು ಒಪ್ಪಿಕೊಳ್ಳಲ್ಲ ಎಂದು ತಕರಾರು ತೆಗೆದಿದ್ದರು.

 ನಾನು ತಳ್ಳುತ್ತಿದ್ದ ಬಾಲ್ ಅನ್ನು ಅರವಿಂದ್ ಬೇರೆಡೆಗೆ ತಳ್ಳಿದ್ದರಿಂದ ನನಗೆ ಮೋಸವಾಗಿದೆ. ಈ ತೀರ್ಪನ್ನು ಒಪ್ಪಲ್ಲ ಎಂದು ಪ್ರಿಯಾಂಕಾ ಗರಂ ಆದರು. ಮಂಜು ಜೊತೆಗೆ ಜೋರು ವಾಗ್ವಾದ ಮಾಡಿದರು. ನ್ಯಾಯ ಸಿಗುವವರೆಗೂ ನಾನು ಮೂರನೇ ಸ್ಥಾನ ಒಪ್ಪಿಕೊಳ್ಳಲ್ಲ ಎಂದು ಹಠ ಹಿಡಿದರು. ಕೊನೆಗೆ ಮನೆ ಮಂದಿಯೆಲ್ಲ ಹಸಿವು ಎಂದು ನರಳಾಡಬೇಕಾದ ಪರಿಸ್ಥಿತಿ ಬಂತು. ಗೇಮ್ ಮುಗಿಯುವವರೆಗೂ ಊಟ ಮಾಡುವಂತೆ ಇರಲಿಲ್ಲ. ಕೊನೆಗೂ ಪ್ರೀಯಾಂಕ ಒಪ್ಪಿಕೊಂಡು ಹೋಗಿ ಮೂರನೇ ಸ್ಥಾನದಲ್ಲಿ ಕುಳಿತುಕೊಂಡರು.

 ಆಟ ಆಡುವಾಗ ನನ್ನ ತಪ್ಪಿರಲಿಲ್ಲ ಆದರೂ ನನಗೆ ಮೂರನೇ ಸ್ಥಾನ ನೀಡಲಾಗುತ್ತಿದೆ ಎಂದು ಪ್ರಿಯಾಂಕಾ ಬೇಸರ ಮಾಡಿಕೊಂಡರು. ಕೊನೆಗೆ ಮೂರನೇ ಸ್ಥಾನವನ್ನು ಒಪ್ಪಿಕೊಂಡ 3ನೇ ಬೋಗಿಯಲ್ಲಿದ್ದ ರಘು ಗೌಡ ಅವರನ್ನು ಎರಡನೇ ಬೋಗಿಗೆ ಕಳುಹಿಸಿ, ಅವರು 3ನೇ ಬೋಗಿಯಲ್ಲಿ ಕೂತರು. ಅಂತಿಮವಾಗಿ ಈ ಆಟ ಇಲ್ಲಿಗೆ ಮುಗಿಯಿತು. ಕೊನೇ ಬೋಗಿಯಲ್ಲಿರುವ ಪ್ರಿಯಾಂಕಾ ಮತ್ತು ದಿವ್ಯಾ ಸುರೇಶ್ ನೇರವಾಗಿ ನಾಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದರು. ನಂತರ ಪ್ರಿಯಾಂಕಾ ಕಣ್ಣೀರಿಟ್ಟಿದ್ದಾರೆ ಮಂಜು ಮತ್ತು ದಿವ್ಯಾ ಉರುಡುಗ ಸಾಕಷ್ಟು ಸಮಾಧಾನ ಮಾಡಲು ಪ್ರಯತ್ನಿಸಿದರು.

ಬಿಗ್‍ಬಾಸ್ನ ಒಂದು ಗೇಮ್ ಮನೆಯಲ್ಲಿ ಬೇಸರವನ್ನುಂಟು ಮಾಡಿದೆ. ಸ್ಪರ್ಧಿಗಳು ಪ್ರಿಯಾಂಕ ಅವರ ಕುರಿತಾಗಿ ಬೇಸರಗೊಂಡರು. ಮನೆಯಲ್ಲಿ ಬಿಗ್‍ಬಾಸ್ ಹೊಸ ಆಟಗಳು ಏನೆಲ್ಲಾ ತಿರುವುದಕೊಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *