ಪ್ರಯಾಣಿಕರೇ ಗಮನಿಸಿ, ವೀಕೆಂಡ್ ಲಾಕ್‍ಡೌನ್ ವೇಳೆ ತುರ್ತುಸೇವೆಗೆ ಮಾತ್ರ ಬಸ್

Public TV
1 Min Read

ಬೆಂಗಳೂರು: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಲಾಕ್‍ಡೌನ್ ಮಾಡಲು ಸರ್ಕಾದ ಆದೇಶವನ್ನು ಹೊರಡಿಸಿದೆ. ರಾಜ್ಯದಲ್ಲಿ ವೀಕೆಂಡ್ ಲಾಕ್‍ಡೌನ್‍ಗೆ ಕೌಂಡ್‍ಡೌನ್ ಶುರುವಾಗಿದೆ. ಆದರೆ ಬಿಎಂಟಿಸಿ ಸಂಚಾರ ಮಾತ್ರ ನಾಳೆ ಎಂದಿನಂತೆ ಇರಲಿದೆ.

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರವು ನೈಟ್ ಕಫ್ರ್ಯೂ ಮತ್ತು ವೀಕೆಂಡ್ ಲಾಕ್‍ಡೌನ್ ಜಾರಿದೆ ಮಾಡಿದೆ. 2 ದಿನ ಕರ್ನಾಟಕ ಸಂಪೂರ್ಣ ಲಾಕ್‍ಡೌನ್ ಆಗಲಿದೆ. 2 ದಿನ ಜನ ಮನೆಬಿಟ್ಟು ಹೊರಬರುವಂತಿಲ್ಲ. ಅಗತ್ಯ ಸೇವೆ ಬಿಟ್ಟು ಯಾರೂ ಕೂಡಾ ಹೊರಗೆ ಓಡಾಡುವಂತಿಲ್ಲ. ವೀಕೆಂಡ್ ಕಫ್ರ್ಯೂನಲ್ಲಿ ಜನಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಬಿಎಂಟಿಸಿ ಬಸ್‍ಗಳು ಮಾತ್ರ ಎಂದಿನಂತೆ ಸಂಚರಿಸಲಿವೆ. ಬಿಎಂಟಿಸಿಯಿಂದ ಕೇವಲ ತುರ್ತುಸೇವೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೇವಲ 500 ಬಸ್‍ಗಳು ಮಾತ್ರ ಸಂಚರಿಸುತ್ತವೆ ಎಂದು ಬಿಎಂಟಿಸಿ ಎಂಡಿ ಶಿಖಾ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

ಶನಿವಾರ ಮತ್ತು ಭಾನುವಾರ ಟಫ್‍ರೂಲ್ಸ್ ಜಾರಿಯಾಗಿರಲಿದೆ. ಜನರು ಹೊರಗಡೆ ಓಡಾಡುವಂತಿಲ್ಲ ಆದರೆ. ಬಸ್ ಮಾತ್ರ ಎಂದಿನಂತೆ ಓಡಾಡಲಿದೆ. ತುರ್ತು ಪರಿಸ್ಥಿತಿ ಇದ್ದವರು ತೆರಳಲು ಅವಕಾಶ ಮಾಡಿಕೊಡುತ್ತಿದೆ.

ಪ್ರಯಾಣಿಕರೇ ಗಮನಿಸಿ, ಬಸ್ ಇರುತ್ತೆ ಆದರೆ ದೂರ ಪ್ರಯಾಣದ ಬಸ್‍ಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ. ದೂರ ಪ್ರಯಾಣದ ಬಸ್, ರೈಲುಗಳಿಗೆ ಅವಕಾಶ ಇದೆ. ಆದರೆ ನಿಲ್ದಾಣಗಳಿಗೆ ಹೋಗುವಾಗ ತಪಾಸಣೆ ವೇಳೆ ಟಿಕೆಟ್ ತೋರಿಸಬೇಕು. ದೂರ ಪ್ರಯಾಣ, ತುರ್ತು ಪ್ರಯಾಣಕ್ಕೆ ಕಾರಣ ಕೊಡಬೇಕಾಗುತ್ತದೆ. ಸ್ವಂತ ವಾಹನಗಳಲ್ಲಿ ಓಡಾಲು ಅವಕಾಶ ಇರುವುದಿಲ್ಲ. ದೂರದ ಜಿಲ್ಲೆಗಳಿಗೆ ರೈಲು ಮತ್ತು  ಕೆಎಸ್‌ಆರ್‌ಟಿಸಿ ಬಸ್ ಮೂಲಕವಾಗಿ ಹೋಗಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *