ಪ್ರಧಾನಿ ಮೋದಿ ಅಧಿಕಾರದಿಂದ ಇಳಿಯಲಿ- ಜೆಡಿಎಸ್ ಆಗ್ರಹ

Public TV
2 Min Read

ಉಡುಪಿ: ಕೇಂದ್ರ ಸರರ್ಕಾರ ಬೆಲೆ ಏರಿಕೆ ನೀತಿ ಮತ್ತು ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ. ಪ್ರಧಾನಿ ಮೋದಿ ಅಧಿಕಾರದಿಂದ ಇಳಿಯಲಿ ಎಂದು ಆರೋಪಿಸಿ ಉಡುಪಿಯಲ್ಲಿ ಜೆಡಿಎಸ್ ಪ್ರತಿಭಟನೆ ಮಾಡಿದೆ. ಇದನ್ನೂ ಓದಿ: ಜುಲೈ ಮೊದಲ ವಾರದಲ್ಲಿ ಮೋದಿ ಕ್ಯಾಬಿನೆಟ್‍ಗೆ ಸರ್ಜರಿ – ರಾಜ್ಯದ ಇಬ್ಬರಿಗೆ ಅವಕಾಶ?

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿ ಮುಂಭಾಗದಲ್ಲಿ ಪಕ್ಷದ ಸದಸ್ಯರು ಗುಂಪುಗೂಡಿ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಬಿಜೆಪಿ ರಾಜ್ಯದಲ್ಲಿ ಬಿಜೆಪಿ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಜನಕ್ಕೆ ಏನು ಪ್ರಯೋಜನ ಆಗಿದೆ? ರಾಷ್ಟ್ರೀಯ ಪಕ್ಷಗಳಿಗೆ ಜನರ ಹಿತ ಬೇಕಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರರ್ಕಾರ ತಜ್ಞರ ಅಭಿಪ್ರಾಯ ಸಲಹೆ ಪಡೆಯದೆ ದೇಶವನ್ನು ಮೃತ್ಯು ಕೂಪಕ್ಕೆ ತಳ್ಳಿದೆ. ಬೆಲೆ ನಿಯಂತ್ರಣ ಮಾಡಲು ವಿಫಲವಾದ ಪ್ರಧಾನಿ ಮೋದಿ ಅಧಿಕಾರದಲ್ಲಿರಲು ಸಮರ್ಥರಲ್ಲ. ಸಾಂಕ್ರಾಮಿಕ ಕಾಲದಲ್ಲಿ ಬೆಲೆಯೇರಿಕೆ ಮಾಡಿ ಬಡವರ ಮಧ್ಯಮ ವರ್ಗದ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ತಿನ್ನುವ ಆಹಾರಕ್ಕೂ ದುಬಾರಿ ಬೆಲೆ, ಓಡಾಟ ಮಾಡುವ ಪೆಟ್ರೋಲಿಯಂ ವಸ್ತುಗಳಿಗೂ ದುಬಾರಿ ಬೆಲೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಿಡಿಕಾರಿದ್ದಾರೆ. ಇದನ್ನೂ ಓದಿ:  ಹುಡುಗಿಯರಿಗೆ ಒಲಿಯದ ಕ್ಯಾಪ್ಟನ್ ಪಟ್ಟ

ಕಿಸಾನ್ ಕಿಸಾನ್ ಎಂದು ಹೇಳುವ ಪ್ರಧಾನಿ ಮೋದಿ ಡೀಸೆಲ್ ಬೆಲೆ ಏರಿಕೆ ಮಾಡಿ ರೈತರು ಟ್ರಾಕ್ಟರ್, ಟಿಲ್ಲರ್‌ನಲ್ಲಿ ಬೇಸಾಯ ಮಾಡಲು, ಆಹಾರ ವಸ್ತು ಸಾಗಾಟ ಮಾಡಲು ದುಬಾರಿ ಬೆಲೆ ತೆರುವಂತೆ ಮಾಡಿದ್ದು, ಸಾಧನೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಜನಜೀವನಕ್ಕೆ ತೊಡಕಾಗಿರುವ ಬೆಲೆ ಏರಿಕೆ ಇಳಿಸದಿದ್ದರೆ ಜೆಡಿಎಸ್ ಮತ್ತು ಮಿತ್ರಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ಮಾಡುತ್ತೇವೆ. ಸರರ್ಕಾರಕ್ಕೆ ಜನರ ಭಾವನೆಗಳನ್ನು ಸರರ್ಕಾರದ ಗಮನಕ್ಕೆ ತನ್ನಿ ಎಂದು ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಮನವಿ ಪತ್ರ ನೀಡಿ ಸರರ್ಕಾರಕ್ಕೆ ರವಾನಿಸಿ ಎಂದು ಹೇಳಿದರು. ಇದನ್ನೂ ಓದಿ: ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಬಾಲಕೃಷ್ಣ ಕಪ್ಪೆಟ್ಟು, ವಾಸುದೇವ, ಜಯಕುಮಾರ್ ಸುರೇಶ್ ದೇವಾಡಿಗ, ಶ್ರೀಕಾಂತ್, ಮನ್ಸೂರ್, ಹುಸೇನ್, ಜಯರಾಮ ಆಚಾರ್ಯ ಉಪಸ್ಥಿತರಿದ್ದರು ಹತ್ತಾರು ಸದಸ್ಯರು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *