ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ

Public TV
1 Min Read

ನವದೆಹಲಿ: ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಕಗಳು ತಿಳಿಸಿವೆ.

ಇತ್ತೀಚಿನ ಪೂರ್ವಲಡಾಖ್ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆಯ ಸಿಬ್ಬಂದಿಯಿಂದ ಭರ್ಜರಿ ಏಟು ತಿಂದಿದ್ದ ಚೀನಾ, ಮುಂದಿನದಿನಗಳಲ್ಲಿ ಇಂಥ ಮುಖಭಂಗ ತಪ್ಪಿಸಲು ಟಿಬೆಟಿಯನ್ ಯೋಧರನ್ನು ಬಳಸಿಕೊಳ್ಳಲು ನಿಧರಿಸಿದೆ. ತನ್ನ ವಶದಲ್ಲಿರುವ ಟಿಬೆಟ್‍ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಚೀನಾ ಸೇನೆ ಸೇರುವುದನ್ನು ಕಡ್ಡಾಯ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್ ಸಂಘರ್ಷದ ವೇಳೆ ಭಾರತ ತನ್ನ ಸೆಷಲ್ ಫ್ರಂಟಿಯರ್ಸ್ ಪಡೆಯನ್ನು ನಿಯೋಜಿಸಿತ್ತು. ವಲಸಿಗ ಟಿಬೆಟಿಯನ್ ಸಮುದಾಯದವರನ್ನೇ ಆಯ್ದು ರಚಿಸಿರುವ ಈ ಪಡೆ ಲಡಾಖ್‍ನ ಅತ್ಯಂತ ಸಂಕಷ್ಟಮಯ ವಾತಾವರಣವನ್ನೂ ಸುಲಭವಾಗಿ ಎದುರಿಸಬಲ್ಲದು. ಹೀಗಾಗಿಯೇ ಪೂರ್ವ ಲಡಾಖ್‍ನಲ್ಲಿ ಚೀನಾಯೋಧರು ಹಿನ್ನಡೆ ಅನುಭವಿಸಿದ್ದರು.

ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಟಿಬೆಟ್ ಯುವಕರನ್ನು ಆಯ್ದು ಅವರಿಗೆ ವಿಶೆಷ ತರಬೇತಿ ನೀಡಿದ್ದ ಚೀನಾ, ಇದೀಗ ಇಂಥ ಯೋಧರ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *