ಪ್ರಚೋದನಕಾರಿ ಟ್ವೀಟ್ – 500 ಟ್ವಿಟ್ಟರ್ ಖಾತೆ ಅಮಾನತು

Public TV
2 Min Read

– ಟ್ವಿಟ್ಟರ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
– ಪತ್ರಕರ್ತರ, ಹೋರಾಟಗಾರರ ಖಾತೆ ಅಮಾನತು ಮಾಡಲ್ಲ

ನವದೆಹಲಿ: ಕಿಸಾನ್ ಆಂದೋಲನ ಹಿಂಸೆ ರೂಪಕ್ಕೆ ತಿರುಗದಂತೆ ಸುಳ್ಳು ಮತ್ತು ಪ್ರಚೋದನಕಾರಿ ಸುದ್ದಿಗಳ ತಡೆಗಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದ್ದು, ಇದೀಗ ಟ್ವಿಟ್ಟರ್ 500 ಖಾತೆಗಳನ್ನ ಅಮಾನತುಗೊಳಿಸಿದೆ.

ರೈತರ ಪ್ರತಿಭಟನೆ ವಿಚಾರವಾಗಿ ಪ್ರಚೋದನಕಾರಿಯಾಗಿ ಟ್ವೀಟ್ ಮಾಡಿದ್ದ 1,178 ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್‍ಗೆ ಸೂಚಿಸಿತ್ತು. ಕಾರಣಕ್ಕೆ ನಿಮಯಗಳನ್ನು ಉಲ್ಲಂಘನೆ ಮಾಡಿದ್ದ 500 ಟ್ವಿಟ್ಟರ್ ಖಾತೆಗಳನ್ನು ಅಮಾನತು ಮಾಡಿದೆ.

ಐಟಿ ಆ್ಯಕ್ಟ್ 69ಎ ಪ್ರಕಾರ ಕೇಂದ್ರ ಸರ್ಕಾರ ಟ್ವಿಟ್ಟರ್ ಗೆ ನೋಟಿಸ್ ನೀಡಿತ್ತು. ಈ ಕಾಯ್ದೆಯಡಿ ಏಳು ವರ್ಷ ಜೈಲು ಶಿಕ್ಷೆ ನೀಡಲಾಗುತ್ತಿದೆ. ಒಂದು ವೇಳೆ ಟ್ವಿಟ್ಟರ್ ಈ ಸಂಬಂಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.

ಕಳೆದ ಕೆಲ ವಾರಗಳಿಂದ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದಂತೆ ವಿವಾದತ್ಮಕ ಅಂಶ ಮತ್ತು ಹ್ಯಾಶ್‍ಟ್ಯಾಗ್ ಟ್ವಿಟ್ಟರ್ ಖಾತೆಗಳ ವಿಸಿಬಿಲಿಟಿಯನ್ನ ಕಡಿಮೆ ಮಾಡಲಾಗಿತ್ತು. ಜನವರಿ 26ರಂದು ದೆಹಲಿಯಲ್ಲಿ ನಡೆದ ಘಟನೆ ಬಗ್ಗೆ ಟ್ವಿಟ್ಟರ್ ಮಾಹಿತಿ ನೀಡಿತ್ತು. ಅಮಾನುತುಗೊಂಡಿರುವ ಕೆಲ ಅಕೌಂಟ್ ಗಳು ಭಾರತದಲ್ಲಿ ಮಾತ್ರ ಬ್ಲಾಕ್ ಮಾಡಲಾಗಿದೆ. ವಿದೇಶಗಳಲ್ಲಿ ಈ ಖಾತೆಗಳು ಸಕ್ರಿಯವಾಗಿರಲಿವೆ.

ವಾಕ್ ಸ್ವಾತಂತ್ರ್ಯವನ್ನು ಕಾಪಾಡುವ ಹಿನ್ನೆಲೆ ನ್ಯೂಸ್ ಮೀಡಿಯಾ, ಪತ್ರಕರ್ತ, ರಾಜಕೀಯ ನಾಯಕರಗಳಿಗೆ ಸಂಬಂಧಿಸಿದಂತೆ ಖಾತೆಗಳ ಮೇಲೆ ಟ್ವಿಟ್ಟರ್ ಯಾವುದೇ ಕ್ರಮ ಜರುಗಿಸಿಲ್ಲ. ಜನರ ಪರವಾಗಿ ಮುಕ್ತ ಅಭಿವ್ಯಕ್ತಿ ಹಕ್ಕನ್ನು ಪ್ರತಿಪಾದಿಸುವುದನ್ನು ಮುಂದುವರಿಸುತ್ತೇವೆ ಮತ್ತು ಭಾರತೀಯ ಕಾನೂನಿನಡಿಯಲ್ಲಿ ಇರುವ ಆಯ್ಕೆಗಳನ್ನು ಹುಡುಕುತ್ತಿದ್ದೇವೆ ಎಂದು ಹೇಳಿದೆ.

ವಿವಾದಾತ್ಮಕ ಬರಹಗಳ ಖಾತೆಗಳ ಮೇಲೆ ಕ್ರಮಕೈಗೊಳ್ಳದ ಹಿನ್ನೆಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ಹೊರ ಹಾಕಿದ್ದಾರೆ. ಟ್ವಟ್ಟರ್ ತಾನು ಭಾರತ ಕಾನೂನುಗಳಿಗಿಂತ ಮೇಲು ಎಂದು ತಿಳಿದಂತೆ ಕಾಣಿಸ್ತಿದೆ. ಯಾವ ಕಾನೂನು ಪಾಲನೆ ಮಾಡಬೇಕು ಮತ್ತು ಏಕೆ ಎಂಬುದನ್ನ ಟ್ವಿಟ್ಟರ್ ನಿರ್ಧರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಎರಡು ದಿನಗಳ ಹಿಂದೆ ಭಾರತ ಸರ್ಕಾರ ಟ್ವಿಟ್ಟರ್ ನಿಂದ ಪಾಕಿಸ್ತಾನಿ-ಖಲಿಸ್ತಾನಿಗೆ ಸಂಬಂಧಿಸಿದ 1,178 ಖಾತೆಗಳನ್ನ ಅಳಿಸುವಂತೆ ಸೂಚನೆ ನೀಡಿತ್ತು. ಈ ಖಾತೆಗಳಿಂದಲೇ ರೈತರ ಪ್ರತಿಭಟನೆಗೆ ಸಂಬಂಧಿಸಿದ ಕೆಲ ತಪ್ಪು ಸಂದೇಶಗಳು ಭಾವನಾತ್ಮಕ ರೂಪ ಪಡೆದುಕೊಂಡು ರವಾನೆ ಆಗುತ್ತಿವೆ ಎಂದು ಭಾರತ ಸರ್ಕಾರ ತನ್ನ ನೋಟಿಸ್‍ನಲ್ಲಿ ಉಲ್ಲೇಖಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *