ಪೋಸ್ಟ್ ನೋಡಿ ಮೋಸ ಹೋಗಬೇಡಿ – ಅಭಿಮಾನಿಗಳಲ್ಲಿ ಡಾಲಿ ಮನವಿ

Public TV
1 Min Read

ಬೆಂಗಳೂರು: ಪೋಸ್ಟ್ ನೋಡಿ ಮೋಸ ಹೋಗಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ನಟ ಡಾಲಿ ಧನಂಜಯ್ ಅವರು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟ ನಟಿಯರ ಹೆಸರನ್ನು ಹೇಳಿಕೊಂಡು ಜನರಿಗೆ ಮೋಸ ಮಾಡುವ ಮಂದಿ ಬಹಳ ಇದ್ದಾರೆ. ಕೆಲವೊಮ್ಮೆ ನಟ-ನಟಿಯರ ಹೆಸರಿನಲ್ಲಿ ಫೇಸ್‍ಬುಕ್ ಖಾತೆ ತೆರೆದು ಹಣ ಕೇಳಿರುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಈಗ ಈ ರೀತಿಯ ಪ್ರಕರಣದ ಬಗ್ಗೆ ಸ್ವತಃ ನಟ ಧನಂಜಯ್ ಅವರು ಟ್ವೀಟ್ ಮಾಡಿದ್ದಾರೆ.

ಈ ವಿಚಾರವಾಗಿ ಟಿಟ್ಟರಿನಲ್ಲಿ ಬರೆದುಕೊಂಡಿರುವ ಡಾಲಿ, ಈ ತರಹದ ಪೋಸ್ಟ್‍ಗಳನ್ನು ನಂಬಿ ಮೋಸ ಹೋಗಬೇಡಿ. ಈ ರೀತಿಯ ಎರಡು ಮೂರು ಘಟನೆಗಳು ಗಮನಕ್ಕೆ ಬಂದಿವೆ. ಜೋಪಾನವಾಗಿರಿ, ಯಾವುದನ್ನೇ ನಂಬುವ ಮುನ್ನ ಅದನ್ನು ಒಂದು ಬಾರಿ ಪರೀಕ್ಷೆ ಮಾಡಿ. ಅದರಲ್ಲೂ ಯಾವುದನ್ನಾದರೂ ಮತ್ತು ಯಾರಾನ್ನದರೂ ಸೋಶಿಯಲ್ ಮೀಡಿಯಾದಲ್ಲಿ ನಂಬುವ ಮೊದಲು ಎಲ್ಲವನ್ನೂ ಪರಿಶೀಲಿಸಿ ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಡಾಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಈ ಫೋಟೋದಲ್ಲಿ ಆಕಾಶ್ ಗೌಡ ಎಂಬ ಹೆಸರಿನ ವ್ಯಕ್ತಿ ಡಾಲಿಯವರ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟಿನಲ್ಲಿ ನಮ್ಮ ಹೊಸ ಕನ್ನಡ ಸಿನಿಮಾಗೆ ತಂದೆ, ಮಹಿಳೆ, ಪುರುಷ ಮತ್ತು ಮಕ್ಕಳ ಪಾತ್ರದಲ್ಲಿ ನಟಿಸುವವರು ಬೇಕಾಗಿದ್ದಾರೆ. ಈ ಸಿನಿಮಾದಲ್ಲಿ ಡಾಲಿ ಸರ್ ಕೂಡ ನಟಿಸಲಿದ್ದಾರೆ. ಯಾರಿಗದರೂ ಆಸಕ್ತಿ ಇದ್ದರೆ, ನಮಗೆ ಮಸೇಜ್ ಮಾಡಿ. ವೃತ್ತಿಪರರು ಮಾತ್ರ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ನೋಡಿ ಗರಂ ಆಗಿರುವ ಡಾಲಿ ಇಂತವರನ್ನು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸದ್ಯ ಧನಂಜಯ್ ಅವರು ರತ್ನನ್ ಪ್ರಪಂಚ ಎಂಬ ಸಿನಿಮಾದಲ್ಲಿ ನಿರತರಾಗಿದ್ದು, ಈ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಯೋಗಿ ಜಿ ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಜೊತೆ ಶಿವಪ್ಪ ಸಿನಿಮಾದಲ್ಲಿ ಡಾಲಿ ನಟಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *