ಪುತ್ರನಂತೆ ನೋಡಿಕೊಳ್ಳುವೆ, ಆದ್ರೆ ರೈನಾ ರೀ ಎಂಟ್ರಿ ನನ್ನ ಕೈಯಲ್ಲಿಲ್ಲ: ಶ್ರೀನಿವಾಸನ್

Public TV
1 Min Read

ಮುಂಬೈ: ಐಪಿಎಲ್ 2020ರ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗೆ ಬಂದಿಲ್ಲ ಎಂದು ಹೇಳುವ ಮೂಲಕ ಟೂರ್ನಿಗೆ ರೀ ಎಂಟ್ರಿ ನೀಡುವ ಸುಳಿವು ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಸುರೇಶ್ ರೈನಾ ಅವರ ಕುರಿತು ಫ್ರಾಂಚೈಸಿ ಮಾಲೀಕ ಶ್ರೀನಿವಾಸನ್ ಪ್ರತಿಕ್ರಿಯೆ ನೀಡಿದ್ದು, ರೈನಾ ರೀ ಎಂಟ್ರಿ ವಿಚಾರ ನನ್ನೊಬ್ಬನ ಕೈಯಲ್ಲಿಲ್ಲ ಎಂದಿದ್ದಾರೆ.

ಕಳೆದ ಶುಕ್ರವಾರ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದ ಸುರೇಶ್ ರೈನಾ ಭಾರತಕ್ಕೆ ಹಿಂದಿರುಗಿದ್ದರು. ಯುಎಇನಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಪಂಜಾಬ್‍ನಲ್ಲಿ ರೈನಾ ಕುಟುಂಬ ಮೇಲೆ ದಾಳಿಯಾಗಿದ್ದು ಅವರು ಭಾರತಕ್ಕೆ ವಾಪಸ್ ಆಗಲು ಕಾರಣ ಎಂದು ತಿಳಿಸಿದ್ದರು. ಅಲ್ಲದೇ ಶ್ರೀನಿವಾಸನ್ ನನ್ನ ತಂದೆಯಂತೆ. ನಾನು ತಪ್ಪು ಮಾಡಿದ ಸಂದರ್ಭದಲ್ಲಿ ಬೈಯಬಹುದು ಎಂದಿದ್ದರು. ಇದನ್ನೂ ಓದಿ: ಧೋನಿ ನನ್ನ ದೊಡ್ಡಣ್ಣನಂತೆ – ಕೊನೆಗೂ ಮೌನ ಮುರಿದ ರೈನಾ

ರೈನಾ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸನ್, ಸುರೇಶ್ ರೈನಾ ಹೇಳಿದ್ದು ನಿಜ. ಆತನನ್ನು ನನ್ನ ಸ್ವತಃ ಮಗನಂತೇ ನೋಡಿಕೊಳ್ಳುತ್ತೇನೆ. ತಂಡದ ಗೆಲುವಿಗಾಗಿ ಎಷ್ಟೋ ಶ್ರಮಿಸಿದ್ದಾರೆ. ಆದರೆ ಆಟಗಾರರ ವೈಯಕ್ತಿಕ ಜೀವನದಲ್ಲಿ ಎಂದು ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದ್ದಾರೆ.

2020ರ ಐಪಿಎಲ್ ಟೂರ್ನಿಗೆ ರೈನಾ ರೀ ಎಂಟ್ರಿ ನನ್ನೊಬ್ಬನ ಕೈಯಲ್ಲಿಲ್ಲ. ನಾನು ತಂಡವನಷ್ಟೇ ಖರೀದಿ ಮಾಡಿದ್ದೇನೆ. ನಾನು ಚೆನ್ನೈ ತಂಡಕ್ಕೆ ನಾಯಕನಲ್ಲ. ಯಾವ ಆಟಗಾರರನ್ನು ತಂಡದಲ್ಲಿ ಆಡಲು ಅವಕಾಶ ನೀಡಬೇಕು ಎಂಬ ನಿರ್ಣಯ ತೆಗೆದುಕೊಳ್ಳುವುದು ಕ್ಯಾಪ್ಟನ್ ನಿರ್ಧಾರ. ಅವರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 20 ಸಾವಿರ ಕೋವಿಡ್ ಟೆಸ್ಟ್‌ಗೆ 10 ಕೋಟಿ ರೂ. ಖರ್ಚು ಮಾಡಲಿದೆ ಬಿಸಿಸಿಐ

Share This Article
Leave a Comment

Leave a Reply

Your email address will not be published. Required fields are marked *