ಪಾರ್ಸೆಲ್ ಜೊತೆ ಪರಾರಿಯಾಗಿದ್ದ ಕೊರಿಯರ್ ಬಾಯ್ ಅರೆಸ್ಟ್

Public TV
1 Min Read

– ಚಿನ್ನಾಭರಣ ಎಂದು ಎಗರಿಸಿದ

ಮುಂಬೈ: ಕೊರಿಯರ್ ತಲುಪಿಸಲು ಬಂದು, ಬೆಲೆ ಬಾಳುವ ಆಭರಣದೊಂದಿಗೆ ಪರಾರಿಯಾಗಿದ್ದ ಕೊರಿಯರ್ ಹುಡುಗನನ್ನು ಕ್ರೈಂ ವಿಭಾಗದ ಪೊಲೀಸರು ಬಂಧಿಸಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.

ಬಂಧಿತನನ್ನು ಇಮ್ರಾನ್ ರಫೀಕ್ ಸಯಾ (36) ಎಂದು ಗುರುತಿಸಲಾಗಿದೆ. ಆನ್‍ಲೈನ್‍ನಲ್ಲಿ ಪರಾಸ್ ಭನ್ಸಾಲಿ (53) ಒಡವೆಗಳು ಕೊರಿಯರ್ ಕಳುಹಿಸಿದ್ದರು. ಆದರೆ ಒಡವೆಗಳನ್ನು ಡೆಲಿವರಿ ಕೊಡಲು ಬಂದಿರುವ ರಫೀಕ್ ಬೆಲೆಬಾಳುವ ಆಭರಣಗಳನ್ನು ಹೊತ್ತು ಪಾರರಿಯಾಗಿದ್ದನು.

ಭನ್ಸಾಲಿ ಆನ್‍ಲೈನ್ ಡೆಲಿವರಿ ಆ್ಯಪ್ ಕೊರಿಯರ್ ಮೂಲಕ ಬೆಳ್ಳಿ ಆಭರಣಗಳು ಬಂದಿದ್ದವು ಆದರೆ ಆರ್ಡರ್ ತಲುಪಿಸಲು ಬಂದಿರುವ ಕೊರಿಯರ್ ಹುಡುಗನಿಗೆ ಇದು ದುಬಾರಿ ಆಭರಣ ಎಂದು ಗೊತ್ತಾಗಿದೆ. ಕೊರಿಯರ್ ಹುಡುಗ ಆಭರಣಗಳೊಂದಿಗೆ ಪರಾರಿಯಾಗಿದ್ದಾನೆ. ಕೊರಿಯರ್ ಮಾಡಿರುವ ಆಭರಗಳು ಬರದೆ ಇರುವುದನ್ನು ಗಮನಿಸಿದ ಭನ್ಸಾಲಿ, ಮಲಸಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಆಭರಣ ಕದ್ದಿರುವ ಆರೋಪದ ಮೇಲೆ ಅಪರಾಧ ವಿಭಾಗ ಘಟಕ 2 ಇಮ್ರಾನ್ ರಫೀಕ್ ಸಯಾ (36) ಎಂಬಾತನನ್ನು ಬಂಧಿಸಿದೆ.

ಅಪರಾಧ ವಿಭಾಗದ ಪ್ರಕಾರ ಭನ್ಸಾಲಿ ಡಿಸೆಂಬರ್ 10 ರಂದು ಆ್ಯಪ್ ಮೂಲಕ ಕೊರಿಯರ್ ಕಳುಹಿಸಿದ್ದಾರೆ ಆದರೆ ಅದನ್ನು ಡಿಸೆಂಬರ್ 18 ರವರೆಗೆ ತಲುಪಿಸಲಾಗಿಲ್ಲ. ಸಯಾ ಪಾರ್ಸೆಲ್ ಡೆಲವರಿ ಮಾಡುವ ಮೊದಲು ರಫೀಕ್ ತೆರೆದು ನೋಡಿದ್ದಾನೆ. ಆಭರಣಗಳಿರುವುದನ್ನು ನೋಡಿ ಆಮಿಷಕ್ಕೊಳಗಾಗಿದ್ದಾನೆ. ಚಿನ್ನದ ಆಭರಣಗಳು ಎಂದು ಅವನು ಭಾವಿಸಿದ್ದನು. ಅದರೆ ಬೆಳ್ಳಿ, ಚಿನ್ನದ ಪದರದಿಂದ ಲೇಪಿತವಾದ ಆಭರಣಗಳಾಗಿದ್ದವು. ಕೊರಿಯರ್ ಬರದೆ ಇದ್ದಾಗ ಆಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ನಡೆಸುತ್ತಿದ್ದ ನಮಗೆ ಅಲ್ಲಿ ಕದ್ದ ಆಭರಣಗಳ ಜೊತೆಗೆ ಇಮ್ರಾನ್ ರಫೀಕ್ ಸಯಾ ಸಿಕ್ಕಿಬಿದ್ದಿದ್ದಾನೆ. ಸಯಾದಿಂದ ವಶಪಡಿಸಿಕೊಂಡ ಆಭರಣಗಳ ಒಟ್ಟು ವೆಚ್ಚ ಸುಮಾರು 1,43,000 ರೂಪಾಯಿ ಬೆಲೆ ಬಾಳುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಾದ್‍ನ ಪಠಾಣ್ ವಾಡಿ ಬಳಿಯ ಅಂಬಾ ಪಾದದ ಮನೆಯೊಂದರಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ. ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಯನ್ನು ಮಲಬಾರ್ ಹಿಲ್ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಘಟಕ 2 ರ ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ಸಂಜಯ್ ನಿಕುಂಬೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *