ಪಾರಂಪರಿಕ ನಾಣ್ಯ ಆಸೆಗೆ ಬಿದ್ದು 7 ಲಕ್ಷ ಕಳೆದುಕೊಂಡ ಪಾನ್ ಬೀಡಾ ಮಾಲೀಕ

Public TV
2 Min Read

ದಾವಣಗೆರೆ: ಹಳೆಯ ಕಾಲದ ಪಾರಂಪರಿಕ ನಾಣ್ಯ ನೀಡುವುದಾಗಿ ನಂಬಿಸಿ ಮುಂಬೈನ ಪಾನ್ ಬೀಡಾ ಶಾಪ್ ಮಾಲೀಕನಿಗೆ 7 ಲಕ್ಷ ವಂಚಿಸಿರುವ ಪ್ರಕರಣ ದಾವಣಗೆರೆಯ ಲೋಕಿಕೆರೆ ರಸ್ತೆಯ ಅಯ್ಯಪ್ಪ ದೇವಾಲಯದ ಬಳಿ ನಡೆದಿದೆ.

ಪೂರ್ವ ಮುಂಬೈನ ಗುಲಾಬ್ ಚಂದ್ ಶೀತಲ್ ಪ್ರಸಾದ್ ಗುಪ್ತಾ ಮೋಸಕ್ಕೂಳಗಾದರು. ಪೂರ್ವ ಮುಂಬೈನ ಹರ್ಷದ್ ರಾಜ್ ಕುಮಾರ್ ಪಾಠಕ್, ಕರ್ನಾಟಕದ ರಮೇಶ್ ಹಾಗೂ ಮಹಾರಾಷ್ಟ್ರದ ನಾಸಿಕ್‍ನ ಅಮನ್ ಶೇಖ್ ಹಾಗೂ ಜೀಶಾನ್ ಶೇಖ್ ಆರೋಪಿಗಳಾಗಿದ್ದಾರೆ.

ಗುಲಾಬ್ ಚಂದ್ ಹಾಗೂ ಹರ್ಷದ್ ರಾಜ್‍ಕುಮಾರ್ ಪಾಠಕ್ ಅಕ್ಕಪಕ್ಕದ ಮನೆಯವರಾಗಿದ್ದು, ಆರೋಪಿ ಪಾಠಕ್, ಅಮನ್ ಶೇಖ್ ಹಾಗೂ ಜೀಶನ್ ಶೇಖ್ ಅವರನ್ನು ಗುಲಾಬ್ ಚಂದ್‍ಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಈ ವೇಳೆ ಅಮನ್ ಶೇಖ್ ಎಂಬಾತ ಕರ್ನಾಟಕದಲ್ಲಿ ನನ್ನ ಸ್ನೇಹಿತ ರಮೇಶ್ ಬಳಿ 5 ಕೆ.ಜಿ ಪಾರಂಪರಿಕ ನಾಣ್ಯವನ್ನು ಇಟ್ಟಿದ್ದು, ಹಣಕಾಸಿನ ಸಮಸ್ಯೆಯಿಂದಾಗಿ ಕಡಿಮೆ ಬೆಲೆಗೆ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾನೆ. ಹುಬ್ಬಳ್ಳಿಯ ಚೆಕ್ ಪೋಸ್ಟ್ ಬಳಿ ನನ್ನ ಸಹೋದರ ಜೀಶನ್‍ನೊಂದಿಗೆ ನಾಣ್ಯಗಳನ್ನು ನೋಡಿದ್ದೇನೆ’ ಎಂದು ಗುಲಾಬ್ ಚಂದ್‍ಗೆ ತಿಳಿಸಿದ್ದಾನೆ.

ಕಡಿಮೆ ಬೆಲೆಗೆ ನಾಣ್ಯಗಳನ್ನು ತಂದು ಮುಂಬೈನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಆಮಿಷ ಒಡ್ಡಿದ ಆರೋಪಿಗಳು ಆತನ ಬಳಿ ಇರುವ ಚಿನ್ನದ ನಾಣ್ಯಗಳಿಗೆ 10 ಲಕ್ಷವಾಗುತ್ತದೆ. ನಾನು ಚೌಕಾಸಿ ಮಾಡಿ 7 ಲಕ್ಷಕ್ಕೆ ಕೊಡಿಸುತ್ತೇನೆ ಎಂದು ಗುಲಾಬ್ ಚಂದ್ ಅವರನ್ನು ನಂಬಿಸಿದ್ದಾರೆ. ಇದನ್ನು ನಂಬಿದ ಗುಲಾಬ್ ಚಂದ್ ಪತ್ನಿ ಹಾಗೂ ಹರ್ಷದ್ ರಾಜ್ ಕುಮಾರ್ ಜೊತೆ ಹುಬ್ಬಳ್ಳಿಗೆ ಹೊರಟು ಬಂದಿದ್ದಾರೆ. ಆದರೆ ಆರೋಪಿಗಳು ಲೋಕಿಕೆರೆ ರಸ್ತೆಯ ಅಯ್ಯಪ್ಪ ದೇವಾಲಯದ ಬಳಿ ಬರಲು ಹೇಳಿದ್ದಾರೆ. ಅದರಂತೆಯೇ ಲೋಕಿಕೆರೆಗೆ ಬಂದ ಗುಲಾಬ್ ಚಂದ್ ಕುಟುಂಬಕ್ಕೆ ರಮೇಶ್ ಎಂಬಾತ ನನ್ನ ಬಳಿ 3,600 ಪಾರಂಪರಿಕ ನಾಣ್ಯಗಳು ಇವೆ ಎಂದು ಹೇಳಿ ಕುಂಕುಮ ಲೇಪಿಸಿರುವ ನಾಣ್ಯಗಳನ್ನು ನೀಡಿದ್ದಾನೆ. ಇದನ್ನೂ ಓದಿ:ಸೈಲೆನ್ಸರ್ ವಿರೂಪಗೊಳಿಸಿ ಚಾಲನೆ – 40ಕ್ಕೂ ಹೆಚ್ಚು ವಾಹನಗಳ ಮೇಲೆ ಕ್ರಮ

ಮುಂಬೈನಲ್ಲಿ ಹೋಗಿ ನಾಣ್ಯವನ್ನು ಪರೀಕ್ಷಿಸಿದಾಗ ತಾಮ್ರಲೇಪಿತ ನಾಣ್ಯಗಳು ಎಂದು ತಿಳಿದುಬಂದಿದೆ. ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಾನು ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ವಾಪಸ್ ಬಂದು ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.ಇದನ್ನೂ ಓದಿ:ನಂದಿಬೆಟ್ಟದ ತಪ್ಪಲಲ್ಲಿ ರಾಜಾರೋಷವಾಗಿ ಪ್ರವಾಸಿಗರಿಂದ ಹುಕ್ಕಾ ಸೇವನೆ

Share This Article
Leave a Comment

Leave a Reply

Your email address will not be published. Required fields are marked *