ಪತ್ನಿ ಪಾಲಿಗೆ ವಿಲನ್ ಆದ ಪೊಲೀಸ್ ಕಾನ್ಸ್‌ಟೇಬಲ್ – ಕೊಪ್ಪಳದಲ್ಲಿ ಗರ್ಭಿಣಿ ಹೆಂಡ್ತಿಗೆ ಟಾರ್ಚರ್

Public TV
2 Min Read

ಕೊಪ್ಪಳ: ಆತ ಓರ್ವ ಪೊಲೀಸ್ ಹೆಡ್ ಕಾನ್ಸ್‌ಟೇಬಲ್. ಜನರಿಗೆ ಆತ ನ್ಯಾಯ ಕೊಡಿಸಬೇಕಾದವನು. ಆದರೆ ಇದೀಗ ಆ ಮುಖ್ಯ ಪೇದೆ ತನ್ನ ಪತ್ನಿಯ ಬಾಳಲ್ಲಿ ವಿಲನ್ ಆಗಿದ್ದಾನೆ. ಮದುವೆ ಆದ ಐದೇ ದಿನದಿಂದ ಪತ್ನಿ ಕಿರುಕಳ ನೀಡುತ್ತಿರೋ ಆ ಪೊಲೀಸ್ ಪೇದೆ, ಇದೀಗ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ.

ಹೌದು. ಕೊಪ್ಪಳ ನಗರ ಠಾಣೆಯ ಮುಖ್ಯ ಪೇದೆ ಬಸವರಾಜ್ ಪತ್ನಿ ಬಾಳಲ್ಲಿ ವಿಲನ್ ಆಗಿದ್ದಾನೆ. ಪತ್ನಿ ಕವಿತಾಗೆ ಕಿರುಕುಳ ನೀಡ್ತಿರೋ ಆರೋಪ ಎಸ್ ಬಸವರಾಜ್ ವಿರುದ್ಧ ಕೇಳಿ ಬಂದಿದೆ. ಬಸವರಾಜ್ ಹಾಗೂ ಕವಿತಾ 2018ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಐದನೇ ದಿನಕ್ಕೆ ಇಬ್ಬರ ಬಾಳಲ್ಲಿ ಬಿರುಗಾಳಿ ಶುರುವಾಗಿತ್ತು. ಅಷ್ಟಕ್ಕೂ ಬಿರುಗಾಳಿ ಶುರುವಾಗಲು ಇನ್ನೊಬ್ಬ ಹೆಣ್ಣು ಕಾರಣವಾಗಿದ್ದಾಳೆ. ಪತ್ನಿ ಇದ್ದರೂ ಮತ್ತೊಬ್ಬಳ ಜೊತೆ ಬಸವರಾಜ್ ಅಕ್ರಮ ಸಂಬಂಧ ಹೊಂದಿರೋ ಆರೋಪ ಕೇಳಿ ಬಂದಿದೆ. ಹೀಗಾಗಿ ಬಸವರಾಜ್ ನಿತ್ಯ ಪತ್ನಿ ಕವಿತಾಗೆ ಕಿರುಕುಳ ನೀಡುತ್ತಿದ್ದಾನೆ. ಕಳೆದ ಎಂಟು ದಿನಗಳ ಹಿಂದೆ ಪೊಲೀಸ್ ಕ್ವಾರ್ಟರ್ಸ್‍ನಲ್ಲಿ ಗಲಾಟೆಯಾಗಿ ಪತ್ನಿ ಕವಿತಾಳನ್ನು ಮನೆಯಿಂದ ಹೊರಹಾಕಿದ್ದಾನೆ. ಅಲ್ಲದೆ ಗರ್ಭಿಣಿಯಾಗಿರುವ ಕವಿತಾ ಹೊಟ್ಟೆಗೆ ಬಸವರಾಜ್ ಬಲವಾಗಿ ಒದ್ದಿದ್ದಾನೆ. ಪರಿಣಾಮ ಹೊಟ್ಟೆಯಲ್ಲಿರೋ ಮಗುವಿಗೆ ತೊಂದರೆಯಾಗಿದೆ ಎಂದು ವೈದ್ಯರು ಹೇಳಿದ್ದಾರಂತೆ.

ಬಸವರಾಜ್ ಅನೇಕ ಬಾರಿ ಕವಿತಾಳೊಂದಿಗೆ ಜಗಳ ಮಾಡಿದ್ದರೂ ಹಿರಿಯರೆಲ್ಲ ಸೇರಿ ಬಗೆಹರಿಸಿದ್ರು. ಆದರೂ ಬಸವರಾಜ್ ಗದಗಿನ ತನ್ನ ಹಳೆಯ ಪ್ರೇಯಸಿಯನ್ನ ಮರೆತ್ತಿಲ್ಲ. ಅವಳೊಂದಿಗೆ ನಿತ್ಯ ಫೋನಿನಲ್ಲಿ ಮಾತಾಡಿದ್ದಾನೆ. ಈ ವಿಷಯ ಕವಿತಾಳಿಗೂ ತಿಳದಿತ್ತು. ಹೀಗಾಗಿ ಹಳೆ ಪ್ರೇಯಸಿ ವಿಚಾರಕ್ಕೆ ಗಲಾಟೆಯಾಗಿದೆ. ಹಳೆ ಪ್ರೇಯಸಿ ನಿತ್ಯ ಬಸವರಾಜ್‍ಗೆ ಫೋನ್ ಮಾಡಿ ಹೆಂಡತಿಗೆ ಡಿವೋರ್ಸ್ ಕೊಡು ಎಂದು ಹೇಳುತ್ತಿದ್ದಾಳಂತೆ. ಪ್ರೇಯಸಿ ಮಾತು ಕೇಳಿ ಮುಖ್ಯ ಪೇದೆ ಬಸವರಾಜ್ ಕವಿತಾಳಿಗೆ ವಿಚ್ಚೇಧನ ಕೊಡುವಂತೆ ಕಿರುಕುಳ ನೀಡುತ್ತಿದ್ದಾನೆ. ಇದಲ್ಲದೆ ಕವಿತಾ ಹಾಗೂ ಬಸವರಾಜ್ ದಂಪತಿಗೆ ಈಗಾಗಲೇ ಒಂದು ವರ್ಷದ ಹೆಣ್ಣು ಮಗು ಇದೆ. ಆ ಮಗು ಹೆಣ್ಣು ಹೀಗಾಗಿ ಅದನ್ನು ಮಾರಾಟ ಮಾಡಿ ಎಂದು ಕಿರುಕುಳ ನೀಡುತ್ತಿದ್ದಾನೆ. ಮುಖ್ಯ ಪೇದೆಯ ಕೀಚಕ ಕೃತ್ಯಕ್ಕೆ ಹೆಂಡತಿ ಹಾಗೂ ಹೆಣ್ಣು ಮಗು, ಹೊಟ್ಟೆಯಲ್ಲಿರೋ ಮಗು ಮೂವರು ನರಕಯಾತನೆ ಅನುಭವಿಸುತ್ತಿದ್ದಾರೆ. ಈಗಾಗಲೇ ಕವಿತಾ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದು, ತವರು ಮನೆ ನವಲಗುಂದಲದಲ್ಲಿ ಕೀಚಕ ಪೇದೆಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ಒಟ್ಟಾರೆ ಜನರಿಗೆ ನ್ಯಾಯ ಹೇಳಬೇಕಾದ ಪೇದೆಯೇ ಇದೀಗ ವಿಲನ್ ಆಗಿದ್ದಾನೆ. ಹಳೆ ಪ್ರೇಯಸಿ ಮಾತು ಕೇಳಿ ಹೆಂಡತಿಗೆ ಕಿರುಕುಳ ನೀಡುತ್ತಿದ್ದಾನೆ. ಜೊತೆಗೆ ಮಗು ಮಾರಾಟ ಮಾಡು ಅಂತ ಪೀಡಿಸುತ್ತಿರೋ ಪೊಲೀಸ್ ಪೇದೆ ಬಸವರಾಜ್‍ಗೆ ಸರಿಯಾದ ಶಿಕ್ಷೆಯಾಗಬೇಕಿದೆ ಎಂದು ಕವಿತಾ ಅಲವತ್ತುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *