ಪತ್ನಿ, ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ- ನಾಲ್ವರು ಸಾವು, ಇಬ್ಬರು ಗಂಭೀರ

Public TV
2 Min Read

– ನಾನು ಕೊಂದಿಲ್ಲ, ದೆವ್ವದ ಕೆಲಸ ಎಂದ ಪಾಪಿ

ಪಾಟ್ನಾ: ಪತಿಯೋರ್ವ ಪತ್ನಿ ಸೇರಿದಂತೆ ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಿಹಾರದ ಸಿವಾನ್ ಜಿಲ್ಲೆಯ ಭಗವಾನಪುರದಲ್ಲಿ ಈ ಘಟನೆ ನಡೆದಿದೆ.

ಅವಧೇಶ್ ಚೌಧರಿ ಮಕ್ಕಳನ್ನ ಕೊಂದ ರಾಕ್ಷಸ. ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಮನೆಯಲ್ಲಿದ್ದ ಆರು ಜನರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದ ಅವಧೇಶ್, ನಾನು ಕೊಲೆ ಮಾಡಿಲ್ಲ. ದೆವ್ವ ನನ್ನ ಕೈಯಲ್ಲಿಂದ ಮಾಡಿಸಿದೆ ಎಂದು ನಾಟಕ ಆಡುತ್ತಿದ್ದಾನೆ. ಇದನ್ನೂ ಓದಿ: 8 ದಿನ ಉಪವಾಸ ವ್ರತ ಆಚರಿಸಿ 9ನೇ ದಿನ ಪತ್ನಿ ಕೊಂದು ನರಬಲಿ ನೀಡಿದ!

ಅವಧೇಶ್ ಪತ್ನಿ ಮತ್ತು ಐದು ಮಕ್ಕಳ (ಎರಡು ಹೆಣ್ಣು, ಮೂರು ಗಂಡು) ಜೊತೆ ಭಗವಾನಪುರದಲ್ಲಿ ವಾಸವಾಗಿದ್ದನು. ಯಾವುದೋ ಸಣ್ಣ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆದಿದೆ. ಕೋಪಗೊಂಡ ಅವಧೇಶ್ ಮನೆಯಲ್ಲಿದ್ದ ಕೊಡಲಿಯಿಂದ ಎಲ್ಲರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ನಾಲ್ಕು ಮಕ್ಕಳು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ತಂತ್ರ ಮಂತ್ರದ ಮೊರೆಗಾಗಿ 8 ವರ್ಷದ ಮಗಳನ್ನ ಕೊಂದ ತಾಯಿ

ದೆವ್ವದ ಕಥೆ: ನಾನು ಗೇಟ್ ತೆಗೆದು ಮನೆಗೆ ಬರುತ್ತಿದ್ದಂತೆ ನನ್ನ ದೇಹವನ್ನ ಭೂತ ಪ್ರವೇಶಿಸಿತು. ಅದು ಎದುರಿಗೆ ಸಿಕ್ಕವರ ಮೇಲೆ ದಾಳಿ ನಡೆಸಬೇಕೆಂದು ಹೇಳಿತ್ತು. ಮನೆಯಲ್ಲಿ ಕುಟುಂಬಸ್ಥರೇ ಎದುರಾಗಿದ್ದರಿಂದ ಎಲ್ಲರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದೇನೆ ಎಂದು ಅವಧೇಶ್ ಚೌಧರಿ ಹೇಳಿದ್ದಾನೆ.

ಘಟನೆಯಿಂದ ಇಡೀ ಭಗವಾನಪುರದಲ್ಲಿ ಭಯ ವಾತಾವರಣ ನಿರ್ಮಾಣವಾಗಿದೆ. ಆರೋಪಿ ಅವಧೇಶ್ ಮಾನಸಿಕ ಖಿನ್ನತೆಯಿಂದ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಾಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನ ಮರೋಣತ್ತರ ಶವ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇನ್ನ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಮತ್ತು ಮಗುವಿಗೆ ಚಿಕಿತ್ಸೆ ಕೊಡಿಸಲಾಗ್ತಿದೆ ಎಂದು ಎಎಸ್‍ಐ ಶಶಿಭೂಷನ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪತ್ನಿಯ ಕುತ್ತಿಗೆ ಕೊಯ್ದು ಕುಲದೇವತೆಗೆ ಬಲಿ ನೀಡಿದ ಗಂಡ

Share This Article
Leave a Comment

Leave a Reply

Your email address will not be published. Required fields are marked *