ಕವಿ ನಾನಲ್ಲ, ಕವಿತೆಯಂತೂ ನನಗೆ ಗೊತ್ತಿಲ್ಲ- ಪತ್ನಿಗೆ ಕಿಚ್ಚನ ವಿಶ್

Public TV
2 Min Read

ಬೆಂಗಳೂರು: ಇಂದು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಅವರ ಹುಟ್ಟುಹಬ್ಬವಾಗಿದ್ದು, ಕಿಚ್ಚ ಸುದೀಪ್ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ. ಕವಿ ನಾನಲ್ಲ, ಕವಿತೆಯಂತೂ ನನಗೆ ಗೊತ್ತಿಲ್ಲ. ಕೆಲ ಸಿಂಪಲ್ ವರ್ಡ್ಸ್ ನಲ್ಲಿ ಹೇಳ್ತೀನಿ ಅದರ್ ಮೇಲ್ ನಂಗ್ ಗೊತ್ತಿಲ್ಲ ಎಂದು ಒಂದೇ ಸಾಲಿನ ಕವಿತೆ ಹೇಳಿ. ಬಳಿಕ ಮಡದಿಯೋ, ಗೆಳತಿಯೋ ಏನೆಂದು ಕರೆಯಲಿ ನಿನ್ನ ಎಂದು ಭಾವನಾತ್ಮಕವಾಗಿ ಹೇಳುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ್ದಾರೆ.

ವಿಡಿಯೋ ಜೊತೆಗೆ ಸಾಲುಗಳನ್ನೂ ಬರೆದಿರುವ ಕಿಚ್ಚ ಸುದೀಪ್, ಐ ಬಿಕೇಮ್ ಎ ಬರ್ಡ್ ಆ್ಯಂಡ್ ಯು ಕುಡ್ ನಾಟ್ ಫ್ಲೈ, ಜಸ್ಟ್ ಸೋ ಬಿ ವಿತ್ ಮೀ, ಯು ಬಿಕಮ್ ದಿ ಸ್ಕೈ….ಹ್ಯಾಪಿ ರಿಟರ್ನ್ಸ್ ಪ್ರೀ…..ವಿಶಿಂಗ್ ಯು ದಿ ಬೆಸ್ಟ್ ಆಲ್ವೇಸ್. ಮಚ್ ಲವ್ ಆ್ಯಂಡ್ ಹಗ್ಸ್ ಎಂದು ಬರೆದಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಕಿಚ್ಚನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದು, ಮಲಯಾಳಂ ನಟಿ ಮಂಜು ವಾರಿಯರ್ ಸಿಡಿಪಿ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಅಭಿಮಾನಿಗಳು ಇದೇ ಸಿಡಿಪಿ ಹಾಕಿ ಶುಭಾಶಯ ತಿಳಿಸುತ್ತಿದ್ದಾರೆ. ಈ ಟ್ವೀಟ್‍ಗೆ ಕಿಚ್ಚ ಸುದೀಪ್ ಸಹ ಪ್ರತಿಕ್ರಿಯಿಸಿದ್ದಾರೆ.

ನೀವು ಈ ಸಿಡಿಪಿ ಬಿಡುಗಡೆ ಮಾಡಲು ನೋ ನೆಟ್‍ವರ್ಕ್ ಏರಿಯಾದಿಂದ ನೆಟ್‍ವರ್ಕ್ ಇರುವ ಜಾಗಕ್ಕೆ ಬರಲು ಎಷ್ಟು ಕಷ್ಟ ಪಟ್ಟಿದ್ದೀರಿ ಎಂಬುದು ನನಗೆ ತಿಳಿದಿದೆ. ಗ್ರ್ಯಾಟಿಟ್ಯೂಡ್ ಮಂಜು ವಾರಿಯರ್ ಮ್ಯಾಡಂ, ಪ್ರಿಯಾ ಅವರ ಹುಟ್ಟುಹಬ್ಬದ ಕ್ಷಣವನ್ನು ನೀವು ಇನ್ನೂ ಅಮೂಲ್ಯವಾಗಿಸಿದ್ದೀರಿ. ಥ್ಯಾಂಕ್ ಯೂ ಎಂದು ಬರೆದಿದ್ದಾರೆ.

ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 19 ವರ್ಷಗಳಾಗಿದ್ದು, ಇತ್ತೀಚೆಗಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಟ್ವೀಟ್ ಮೂಲಕವೇ ಶುಭಾಶಯ ತಿಳಿಸಿದ್ದರು. ಇದಕ್ಕೆ ಪ್ರಿಯಾ ಸಹ ಪ್ರತಿಕ್ರಿಯೆ ನೀಡಿದ್ದರು.

ಸುದೀಪ್ ಅವರು ಪ್ರಿಯಾ ಅವರನ್ನು 2001ರ ಅಕ್ಟೋಬರ್ 18ರಂದು ವಿವಾಹವಾಗಿದ್ದರು. ಪ್ರಿಯಾ 2004ರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ವೈವಾಹಿಕ ಜೀವನದ 19ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಕಿಚ್ಚ ಸುದೀಪ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದು, ಅವರ ನಟನೆಯ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅಲ್ಲದೆ ಫ್ಯಾಂಟಮ್ ಚಿತ್ರ ತಂಡ ಸಹ ಕೊನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ. ಸದ್ಯ ಕೇರಳದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಕಿಚ್ಚ ಸುದೀಪ್ ಸೇರಿದಂತೆ ಚಿತ್ರ ತಂಡ ಕೇರಳದಲ್ಲೇ ಬೀಡು ಬಿಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *