ಪತ್ನಿಯ ಬೌಲಿಂಗ್‍ಗೆ ಬ್ಯಾಟ್ ಬೀಸಿದ ಕೊಹ್ಲಿ- ವಿಡಿಯೋ ನೋಡಿ

Public TV
2 Min Read

ಮುಂಬೈ: ಲಾಕ್‍ಡೌನ್‍ನಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ನೆಟ್‍ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಲು ಸಾಧ್ಯವಾಗದೆ ಇರಬಹುದು. ಆದರೆ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ.

ವಿರುಷ್ಕಾ ಜೋಡಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿರಾಟ್ ಮುಂಬೈನ ತಮ್ಮ ಫ್ಲ್ಯಾಟ್ ಮುಂದಿನ ಖಾಲಿ ಜಾಗದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವುದನ್ನು ಕಾಣಬಹುದಾಗಿದೆ. ಅನುಷ್ಕಾ ಬೌಲಿಂಗ್ ಮಾಡುವುದನ್ನು ನೋಡಬಹುದಾಗಿದೆ. ವಿರಾಟ್ ಗ್ಲೌಸ್ ಧರಿಸಿ ಅನುಷ್ಕಾ ಎಸೆದ ಬಾಲ್ ಅನ್ನು ಕವರ್ ಮತ್ತು ಸ್ಟ್ರೈಟ್ ಡ್ರೈವ್ ಮಾಡಿದ್ದನ್ನು ಕಾಣಬಹುದು. ಅಷ್ಟೇ ಅಲ್ಲದೆ ಅನುಷ್ಕಾ ಕೂಡ ವಿರಾಟ್‍ಗೂ ಮುನ್ನ ಸ್ವಲ್ಪ ಸಮಯದವರೆಗೆ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ‘ಹೇ ಕೊಹ್ಲಿ, ಚೌಕಾ ಮಾರ್ ನಾ’- ಅನುಷ್ಕಾ ಪ್ರೇರಣೆಗೆ ವಿರಾಟ್ ಸೈಲಂಟ್

ಇದಲ್ಲದೆ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ತರಬೇತಿಯ ವಿಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಒಂದು ಜೀವನ ವಿಧಾನವಾಗಿದೆ. ಆದರೆ ಪ್ರತಿಯೊಬ್ಬ ವೃತ್ತಿಪರರು ಇದನ್ನು ಮಾಡಬೇಕಾಗಿಲ್ಲ. ಆಯ್ಕೆ ನಿಮ್ಮದು” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಹಾಡು ಕೇಳುತ್ತಾ ಓಡುವುದು ಕಂಡುಬರುತ್ತದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ, ಮಸ್ತ್ ಭಾಯ್, ಎಂದು ಹೇಳಿದ್ದಾರೆ. ಈ ವಿಡಿಯೋವನ್ನು 20 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಇದನ್ನೂ ಓದಿ: ಬ್ರದರ್, ಇದು ನೀವೇನಾ?- ಕ್ಯಾಪ್ಟನ್ ಕೊಹ್ಲಿ ಕಾಲೆಳೆದ ಪಾಕ್ ಕ್ರಿಕೆಟಿಗ

https://www.instagram.com/p/CANrpF8ljOW/

ಕೊರೊನಾ ಲಾಕ್‍ಡೌನ್‍ನಿಂದಾಗಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಾರ್ಚ್ ನಿಂದ ಮುಂಬೈನಲ್ಲಿದ್ದಾರೆ. ವಿರಾಟ್ 86 ಟೆಸ್ಟ್ ಪಂದ್ಯಗಳಲ್ಲಿ 7,240 ರನ್, 248 ಏಕದಿನ ಪಂದ್ಯಗಳಲ್ಲಿ 11,867 ರನ್ ಮತ್ತು 81 ಟಿ20 ಪಂದ್ಯಗಳಲ್ಲಿ 2,794 ರನ್ ಗಳಿಸಿದ್ದಾರೆ. ಐಪಿಎಲ್‍ನ 177 ಪಂದ್ಯಗಳಲ್ಲಿ ಅವರು 5,412 ರನ್ ಗಳಿಸಿದ್ದಾರೆ.

ಹೆಮ್ಮಾರಿ ಕೊರೊನಾದಿಂದಾಗಿ ದೇಶಾದ್ಯಂತ ಪರಿಸ್ಥಿತಿ ಕೆಟ್ಟದಾಗಿದೆ. ಮುಂಬೈಯಲ್ಲಿಯೇ 16,000ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದ್ದು, 600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಮೇ 18ರ ನಂತರವೂ ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಮುಕ್ತಾಯವಾಗುವಂತೆ ಕಾಣುತ್ತಿಲ್ಲ. ಮುಂಬೈನಲ್ಲಿ ಲಾಕ್‍ಡೌನ್ ಸಡಿಲಗೊಳ್ಳದಿದ್ದರೆ ಮೇ 18ರ ನಂತರ ತಂಡದ ತರಬೇತಿಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *