-ತನ್ನ ಕುಟುಂಬಸ್ಥರಿಗೆ ಕೊನೆ ಸಂದೇಶ ಕಳಿಸಿ ಸೂಸೈಡ್
ಮುಂಬೈ: ಪತ್ನಿಯ ಕುಟುಂಬಸ್ಥರ ಕಿರುಕುಳದಿಂದ ಮನನೊಂದು 30 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಯಳೆಮಾವಡಿ ಗ್ರಾಮದಲ್ಲಿನಡೆದಿದೆ.
ಗೋವಿಂದ್ ದತ್ತಾತ್ರೆಯ ಕಾಂಬ್ಳೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆಯಲ್ಲಿ ಕಬ್ಬಿಣದ ಪೈಪಿಗೆ ನೇಣು ಬಿಗಿದುಕೊಂಡು ಗೋವಿಂದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಿಂದ ಕಳೆದ ಐದು ವರ್ಷಗಳಿಂದ ಪತ್ನಿಯ ಜೊತೆ ಯಳೆಮಾವಡಿ ಗ್ರಾಮದಲ್ಲಿ ವಾಸವಾಗಿದ್ದರು. ಕಳೆದ ಐದು ವರ್ಷಗಳಿಂದಲೂ ಪತ್ನಿ ಕುಟುಂಬಸ್ಥರು ಗೋವಿಂದ್ ರನ್ನು ಅವಮಾನಿಸುತ್ತಿದ್ದರು.
ಆತ್ಮಹತ್ಯೆಗೆ ಮುನ್ನ ಕುಟುಂಬಸ್ಥರ ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಮಾಡಿದ್ದ ಗೋವಿಂದ್, ಭಾನುವಾರ ರಾತ್ರಿ ತನಗೆ ಪತ್ನಿ ಸಂಬಂಧಿಕರು ನೀಡಿದ ಕಿರುಕುಳ ಬಗ್ಗೆ ಹೇಳಿಕೊಂಡಿದ್ದರು. ಈ ಸಂಬಂಧ ಪೊಲೀಸರು ಗೋವಿಂದನ ಪತ್ನಿ ಸೇರಿದಂತೆ ಐವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.