ಪಕ್ಕದ್ಮನೆ ಹುಡುಗನನ್ನ ಮದ್ವೆಯಾದ ಪತ್ನಿ – ಎಫ್‍ಬಿ ಲೈವ್‍ನಲ್ಲಿ ಪತಿ ಸೂಸೈಡ್

Public TV
2 Min Read

-ನನ್ನಿಂದ ಇದನ್ನ ನೋಡೋದಕ್ಕೆ ಆಗ್ತಿಲ್ಲ, ಸಾಯ್ತೀನಿ

ಪಾಟ್ನಾ: ಪತ್ನಿ ಪಕ್ಕದ್ಮನೆ ಯುವಕನನ್ನು ಮದುವೆಯಾಗಿದಕ್ಕೆ ನೊಂದ ಪತಿ ಫೇಸ್‍ಬುಕ್ ಲೈವ್ ನಲ್ಲಿ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರದ ಆರಾರಿಯಾ ಕ್ಷೇತ್ರದ ಸಿಮರ್ಹಾದಲ್ಲಿ ಘಟನೆ ನಡೆದಿದೆ.

ಹೇಮಂತ್ ಗುಪ್ತಾ ಆತ್ಮಹತ್ಯೆಗೆ ಶರಣಾದ ನೊಂದ ಪತಿ. ಹೇಮಂತ್ ಪತ್ನಿ ಮುನ್ನಿ ದೆವಿ ಕೆಲ ದಿನಗಳ ಹಿಂದೆ ಪಕ್ಕದ ಮನೆಯಲ್ಲಿ ವಾಸವಾಗಿದ್ದ ರಾಕೇಶ್ ಎಂಬಾತನನ್ನು ಮದುವೆ ಆಗಿದ್ದಳು. ಆದ್ದರಿಂದ ನೊಂದ ಹೇಮಂತ್ ವಿಷ ಸೇವನೆ ಬಳಿಕ ಫೇಸ್‍ಬುಕ್ ನಲ್ಲಿ ಲೈವ್ ಗೆ ಬಂದು ನನ್ನ ಸಾವಿಗೆ ನ್ಯಾಯ ಸಿಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ರಾಕೇಶ್ ಎಂಬವನ್ನು ನನ್ನ ಪತ್ನಿ ಮುನ್ನಿದೇವಿಯನ್ನು ಬಲವಂತವಾಗಿ ನ್ಯಾಯಾಲಯದಲ್ಲಿ ಮದುವೆ ಆಗಿದ್ದಾನೆ. ನನ್ನ ಈ ಹೇಳಿಕೆಗೆ ನಾನು ಬದ್ಧನಾಗಿದ್ದು, ಈ ಎಲ್ಲವನ್ನ ನಾನು ನೋಡಲಾರೆ. ಹಾಗಾಗಿ ವಿಷ ಸೇವಿಸಿದ್ದು, ಸತ್ತ ಮೇಲೆ ನನಗೆ ನ್ಯಾಯ ಸಿಗಬೇಕು ಎಂದು ಹೇಮಂತ್ ಗುಪ್ತಾ ಹೇಳಿದ್ದಾರೆ. ಇದನ್ನೂ ಓದಿ: ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

ಸಾಂದರ್ಭಿಕ ಚಿತ್ರ

ವಿಡಿಯೋ ನೋಡಿದ ಹೇಮಂತ್ ಆಪ್ತರು ಮನೆಯತ್ತ ಬಂದು ರಕ್ಷಣೆಗೆ ಮುಂದಾಗಿದ್ದಾರೆ. ಹಾಗೆ ಕೆಲವರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಹೇಮಂತ್ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದರು. ಕೂಡಲೇ ಸ್ಥಳೀಯರು ಕಟಿಹಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಹೇಮಂತ್ ಮೃತರಾಗಿರೋದನ್ನ ಖಚಿತ ಪಡಿಸಿದ್ದಾರೆ. ಇದನ್ನೂ ಓದಿ: ರೇಷನ್ ಕೊಡುವಂತೆ ಮನವಿ – ಫುಡ್ ಕಿಟ್ ನೀಡೋಕೆ ಹೋದವನನ್ನೇ ಮದ್ವೆಯಾದ್ಳು– ಲಾಕ್‍ಡೌನ್ ನಲ್ಲಿ ನಾಲ್ಕನೇ ಮದ್ವೆ

ಹೇಮಂತ್ ಗುಪ್ತಾ ಸಾವಿನ ಬಳಿಕ ಮುನ್ನಾದೇವಿ ನನ್ನ ಹೊಸ ಪತಿ ರಾಕೇಶ್ ಜೊತೆ ಪರಾರಿಯಾಗಿದ್ದಾಳೆ. ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೇಮಂತ್ ದೆಹಲಿಯಲ್ಲಿ ಇರುತ್ತಿದ್ದರು. ಮದುವೆ ವಿಷಯ ತಿಳಿದು ಗ್ರಾಮಕ್ಕೆ ಬಂದಿದ್ದ ಹೇಮಂತ್ ಪತ್ನಿಯನ್ನ ವಾಪಸ್ ಕರೆತರಲು ಬಹಳ ಪ್ರಯತ್ನಿಸಿದ್ದರು. ಆದ್ರೆ ಮುನ್ನಿದೇವಿ ಹಿಂದಿರುಗಿರಲಿಲ್ಲ. ಇದನ್ನೂ ಓದಿ: ಅಡವಿಗೆ ಕರ್ಕೊಂಡು ಹೋಗಿ ಅಪ್ರಾಪ್ತೆ ಮೇಲೆ ಸಂಬಂಧಿಕನಿಂದ್ಲೇ ಅತ್ಯಾಚಾರ

Share This Article
Leave a Comment

Leave a Reply

Your email address will not be published. Required fields are marked *