ಪಂಚೇಂದ್ರಿಯಗಳಿಲ್ಲದ ದಪ್ಪ ಚರ್ಮದ ಸರ್ಕಾರ ರಾಜ್ಯದಲ್ಲಿದೆ: ಎಸ್.ಆರ್.ಪಾಟೀಲ್

Public TV
1 Min Read

ರಾಯಚೂರು: ಪಂಚೇಂದ್ರಿಯಗಳಿಲ್ಲದ ದಪ್ಪ ಚರ್ಮದ ಸರ್ಕಾರ ಇದು. ರಾಜ್ಯದ ಜನರ ಬಗ್ಗೆ ಸರ್ಕಾರಕ್ಕೆ ಎಳ್ಳಷ್ಟು ಕಾಳಜಿಯಿಲ್ಲ, ಕುರ್ಚಿ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಔಷಧಿ ಸರಬರಾಜು ಮಾಡುವಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ಲಿಕ್ವಿಡ್ ಪ್ರೊಫೈಲ್ ನಲ್ಲಿ ಕೊಡುತ್ತಿರುವ ಔಷಧಿ ಜ್ವರ ,ವಾಂತಿ, ಮೈಕೈ ಬಾವಿನಂತ ಅಡ್ಡಪರಿಣಾಮ ಬೀರುತ್ತಿದೆ. ಅಂಪೋಟೆರಿಸಿನ್ ಬಿ ಔಷಧಿಯನ್ನೇ ತರಿಸಲು ಕೇಳಿದ್ದೇವೆ. ಆದ್ರೆ ಔಷಧಿ ಸ್ಟಾಕ್ ಇಲ್ಲಾ, ಉತ್ಪಾದನೆ ಆಗುತ್ತಿಲ್ಲ ಅಂತ ಅಧಿಕಾರಿಗಳು ಕಾರಣ ಹೇಳುತ್ತಿದ್ದಾರೆ. ಒಟ್ಟಾರೆ ಮೊದಲೇಯಲ್ಲಿ ಪಾಠ ಕಲಿತರು ಎರಡನೇ ಅಲೆ ಸಮರ್ಪಕವಾಗಿ ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ರಾಯಚೂರಿನಲ್ಲಿ ಹೇಳಿದ್ದಾರೆ.

ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಎಸ್.ಆರ್.ಪಾಟೀಲ್ ಜಿಲ್ಲಾಧಿಕಾರಿಯಿಂದ ಕೋವಿಡ್ 19 ಕುರಿತ ಮಾಹಿತಿ ಪಡೆದರು. ಬಳಿಕ ಮಾತನಾಡಿ ಎಸ್.ಎಸ್.ಎಲ್ .ಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಶಿಕ್ಷಣ ಸಚಿವರು ಹಠ ಮಾಡಬಾರದು. ಸುಪ್ರೀಂ ಕೋರ್ಟ್ ಆದೇಶ ಕೇವಲ ಆಂಧ್ರಪ್ರದೇಶಕ್ಕೆ ಮಾತ್ರ ಅಲ್ಲಾ ಎಲ್ಲೆಡೆ ಅನ್ವಯವಾಗುತ್ತೆ. ಆಂಧ್ರದಲ್ಲಿ ಪರೀಕ್ಷೆ ನಡೆಸದಂತೆ ಸರ್ವೊಚ್ಚ ನ್ಯಾಯಾಲಯ ಆದೇಶಿಸಿದೆ ಎಂದರು.

ಕಾಂಗ್ರೆಸ್ ಸಿದ್ದಾಂತ ನಂಬಿಕೊಂಡು ನಾನು ಪಕ್ಷದಲ್ಲಿದ್ದೇನೆ. ಇವರೇ ಮುಖ್ಯಮಂತ್ರಿಯಾಗಬೇಕು ಅಂತ ಹಾದಿ ಬೀದಿಯಲ್ಲಿ ಮಾತನಾಡಬಾರದು. 2023 ರಲ್ಲಿ ಚುನಾವಣೆ ನಡೆಯಲಿದೆ ಅದರಲ್ಲಿ ಕಾಂಗ್ರೆಸ್ 113 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು. ಸರ್ಕಾರ ಅಧಿಕಾರಕ್ಕೆ ಬಂದ್ರೆ ಶಾಸಕಾಂಗ ಪಕ್ಷದ ನಾಯಕನನ್ನ ಆಯ್ಕೆ ಮಾಡಲಾಗುತ್ತೆ. ದೆಹಲಿ ವರಿಷ್ಠರು ಮುಂದೆ ಸಿಎಂ ಯಾರು ಅಂತ ನಿರ್ಧಾರ ಮಾಡುತ್ತಾರೆ. ಈಗ ಮಾತನಾಡುವವರು ಚುನಾವಣೆ ಬಳಿಕ ಮೊದಲು ಶಾಸಕಾಂಗ ಪಕ್ಷದ ಸದಸ್ಯರಾಗಬೇಕು. ಶಾಸಕಾಂಗ ಪಕ್ಷದ ನಿರ್ಣಯವನ್ನ ನಾನು ಹೇಳಲು ಸಾಧ್ಯವಿಲ್ಲ ಅಂತ ಎಸ್ .ಆರ್.ಪಾಟೀಲ್ ಹೇಳಿದರು.

ಬಿಎಸ್‍ವೈ ಮಂತ್ರಿಮಂಡಲದಲ್ಲಿ ಹೊಂದಾಣಿಕೆ ಇಲ್ಲಾ, ಒಬ್ಬ ಸಚಿವರ ಹೇಳಿಕೆಗೆ ಇನ್ನೊಬ್ಬ ಸಚಿವ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ. ಇದು ಸಚಿವರಲ್ಲಿ ಹೊಂದಾಣಿಕೆಯಿಲ್ಲದ ಸರ್ಕಾರ ಅಂತ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *