ನೋಟು ಮುದ್ರಿಸಿ ಆರ್ಥಿಕ ಸಮಸ್ಯೆ ದೂರವಾಗಿಸುತ್ತಾ ಸರ್ಕಾರ? ಲೋಕಸಭೆಯಲ್ಲಿ ಸೀತಾರಾಮನ್ ಉತ್ತರ

Public TV
1 Min Read

ನವದೆಹಲಿ: ಹೊಸ ನೋಟು ಮುದ್ರಣ ಮಾಡಿ ಆರ್ಥಿಕ ಸಂಕಟವನ್ನು ಸರ್ಕಾರ ದೂರು ಮಾಡುತ್ತಾ ಪ್ರಶ್ನೆಗೆ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಮಾಹಾಮರಿಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಾ ಬಂದಿದೆ. ಈ ವರ್ಷ ಚೇತರಿಕೆ ಕಾಣುವ ಸಮಯದಲ್ಲಿಯೇ ಕೊರೊನಾ ಎರಡನೇ ಅಲೆ ಅಪ್ಪಳಿಸಿ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿತ್ತು. ಇದೀಗ ಮತ್ತೆ ಆರ್ಥಿಕ ಚಟುವಟಿಕೆಗಳು ಹಳೆಯ ಲಯಕ್ಕೆ ಮರಳಿವೆ. ಇಂದು ಲೋಕಸಭೆಯಲ್ಲಿ ಈ ವಿಷಯದ ಕುರಿತಾಗಿ ಪ್ರಶ್ನೆ ಕೇಳಲಾಗಿತ್ತು. ಹೊಸ ನೋಟುಗಳ ಮುದ್ರಣ ಮೂಲಕ ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆಯಾ ಎಂದು ಪ್ರಶ್ನೆ ಮಾಡಲಾಗಿತ್ತು.

ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಟದ ಪರಿಹಾರಕ್ಕಾಗಿ ಹೊಸ ನೋಟುಗಳ ಮುದ್ರಣ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಬಹುತೇಕ ಅರ್ಥಶಾಸ್ತ್ರಜ್ಞರು ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಹೊಸ ನೋಟುಗಳು ಮುದ್ರಣದ ಜೊತೆಯಲ್ಲಿ ಲಭ್ಯವಿರುವ ಉದ್ಯೋಗಗಳನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ ಎಂದರು. ಇದೇ ವೇಳೆ 2020-21ನೇ ಆರ್ಥಿಕ ವರ್ಷದಲ್ಲಿ ಶೇ.7.3ರಷ್ಟು ಉತ್ಪಾದನೆ ಕುಸಿಯುವ ಅನುಮಾನಗಳಿವೆ ಎಂದು ಲಿಖಿತ ರೂಪದಲ್ಲಿ ಹೇಳಿದರು.

ಜಿಡಿಪಿ ಇಳಿಕೆಯನ್ನು ಗಮನಿಸಿದ್ರೆ ಕೊರೊನಾ ಮಹಾಮಾರಿ ಅರ್ಥವ್ಯವಸ್ಥೆಯ ಮೇಲೆ ಎಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಿಳಿಯುತ್ತದೆ. ನಮ್ಮ ಅರ್ಥವ್ಯವಸ್ಥೆ ಅಡಿಪಾಯ ಭದ್ರವಾಗಿದ್ದು, ಲಾಕ್‍ಡೌನ್ ತೆರವುಗೊಳಿಸಿದ ಆರ್ಥಿಕ ಚಟುವಟಿಕೆಗಳು ಹಂತ ಹಂತವಾಗಿ ಚೇತರಿಕೆ ಕಂಡಿವೆ. ಜೊತೆಗೆ ಆತ್ಮನಿರ್ಭರ ಭಾರತದ ಅಭಿಯಾನದಡಿಯಲ್ಲಿ ಆರ್ಥಿಕ ಚಟುವಟಿಕೆಗೆ ಸಹಾಯ ನೀಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸದನಕ್ಕೆ ವಿತ್ತ ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಎಸ್‍ವೈ ಮೋದಿಯ ಇತ್ತೀಚಿನ ಬಲಿಪಶು: ರಣದೀಪ್ ಸಿಂಗ್ ಸುರ್ಜೆವಾಲಾ

ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಸರ್ಕಾರ ಇದುವರೆಗೂ 29.87 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲಾಗಿದೆ. ಆರ್ಥಿಕ ಚಟುವಟಿಕೆ ಮತ್ತೆ ಹಳೆ ಲಯಕ್ಕೆ ತರೋದು ಈ ಅಭಿಯಾನದ ಉದ್ದೇಶ ಎಂದು ಸೀತಾರಾಮನ್ ಹೇಳಿದರು. ಇದನ್ನೂ ಓದಿ: ಕೃಷಿ ಕಾನೂನು ವಿರೋಧಿಸಿ ಸಂಸತ್‍ಗೆ ಟ್ರ್ಯಾಕ್ಟರ್ ಏರಿ ಬಂದ ರಾಹುಲ್ ಗಾಂಧಿ

Share This Article
Leave a Comment

Leave a Reply

Your email address will not be published. Required fields are marked *