ನೆಹರು ಕುಟುಂಬದ ಟ್ರಸ್ಟ್ ಗಳ ವಿರುದ್ಧ ತನಿಖೆ – ಸಂಕಷ್ಟದಲ್ಲಿ ರಾಗಾ, ಸೋನಿಯಾ ಗಾಂಧಿ

Public TV
2 Min Read

ನವದೆಹಲಿ: ನೆಹರು ಕುಟುಂಬದ ಟ್ರಸ್ಟ್‍ಗಳಿಂದ ಕಾನೂನು ಉಲ್ಲಂಘನೆ ಆರೋಪ ಹಿನ್ನೆಲೆ ಟ್ರಸ್ಟ್ ಗಳ ತನಿಖೆಗೆ ಮುಂದಾಗಿರುವ ಗೃಹ ಇಲಾಖೆ ಅಂತರ ಸಚಿವಾಲಯ ಸಮಿತಿ ರಚಿಸಿದೆ. ಇದರಿಂದಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಜಾರಿ ನಿರ್ದೇಶನಾಲಯ, ಸಿಬಿಐನ ವಿಶೇಷ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಿರುವ ಗೃಹ ಇಲಾಖೆ ರಾಜೀವ್ ಗಾಂಧಿ ಪ್ರತಿಷ್ಠಾನ, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್‍ನ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲಿದೆ.

ತನಿಖೆಯಲ್ಲಿ ಈ ಮೂರು ಟ್ರಸ್ಟ್ ಗಳಿಂದ ಅಕ್ರಮ ಹಣ ವರ್ಗಾವಣೆ, ಆದಾಯ ತೆರಿಗೆ ವಂಚನೆ, ಅಕ್ರಮವಾಗಿ ವಿದೇಶಿ ಹಣ ಪಡೆದಿರುವ ಬಗ್ಗೆ ತನಿಖೆ ಕೂಲಂಕಷವಾಗಿ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ 1991 ಜೂನ್ ನಲ್ಲಿ ಸ್ಥಾಪನೆ ಮಾಡಲಾದ ರಾಜೀವ್ ಗಾಂಧಿ ಫೌಂಡೇಷನ್ ಟ್ರಸ್ಟಿಗಳಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಮೂರೂ ಟ್ರಸ್ಟ್ ಗಳ ಚೇರ್ ಪರ್ಸನ್ ಆಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಈ ಟ್ರಸ್ಟ್ ಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಾಲು ಸಾಲು ಆರೋಪ ಮಾಡಿದ್ರು. ಪ್ರಧಾನಮಂತ್ರಿಗಳ ರಿಲೀಫ್ ಫಂಡ್‍ನಿಂದ ರಾಜೀವ್ ಗಾಂಧಿ ಫೌಂಡೇಷನ್‍ಗೆ ಹಣ ನೀಡಲಾಗಿದೆ ಎಂದು ಆರೋಪಿಸಿದ್ದರು. ಆರೋಪಕ್ಕೆ ಪೂರಕವಾಗಿ 2007-08 ಮತ್ತು 2005-2006ರ ಅವಧಿಯಲ್ಲಿ ಈ ಫೌಂಡೇಷನ್‍ಗಳಿಗೆ ಹಣ ನೀಡಿದ ಸಂಸ್ಥೆಗಳ ಲಿಸ್ಟ್ ಬಿಡುಗಡೆ ಮಾಡಿದ್ದರು. ಕೇಂದ್ರ ಸಚಿವರಾದ ರವಿ ಶಂಕರ್ ಪ್ರಸಾದ್, ಚೀನಾದಿಂದಲೂ ರಾಜೀವ್ ಗಾಂಧಿ ಫೌಂಡೇಷನ್‍ಗೆ ಹಣ ನೀಡಲಾಗಿತ್ತು ಎಂದು ಆರೋಪ ಮಾಡಿದ್ದರು.

ರಾಜಕೀಯ ತಿರುವು : ಕೊರೊನಾ ಸಂಕಷ್ಟ ಪರಿಸ್ಥಿತಿ ನಿಭಾಯಿಸಲು ಸ್ಥಾಪಿಸಿರುವ ಪಿಎಂ ಕೇರ್ಸ್ ಗೆ ಚೀನಾದ ಹಲವು ಅಂತರಾಷ್ಟ್ರೀಯ ಕಂಪನಿಗಳು ದೇಣಿಗೆ ನೀಡಿವೆ, ಹಲವು ಬಿಜೆಪಿ ನಾಯಕರು ಚೀನಾ ಕಂಪನಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಟ್ರಸ್ಟ್ ಗಳೊಂದಿಗೆ ಚೀನಾದ ವ್ಯವಹಾರದ ಮಾಹಿತಿ ಬಿಡುಗಡೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *