ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ: ಸೋನು ಸೂದ್

Public TV
1 Min Read

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ತಾಯಿಯ ಫೋಟೋವನ್ನು ಶೇರ್ ಮಾಡಿಕೊಂಡು ಭಾವನಾತ್ಮಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರಿಯಲ್ ಹೀರೋಗೆ ಜನ್ಮ ನೀಡಿದ ಸರೋಜ್ ಸೂದ್. ಆದರೆ ಹಲವು ವರ್ಷಗಳ ಹಿಂದೆಯೇ ಅವರು ಇಹಲೋಕ ತ್ಯಜಿಸಿದರು. ಇಂದು (ಜು.21) ಸರೋಜ್ ಸೂದ್ ಜನ್ಮದಿನ. ಆ ಪ್ರಯುಕ್ತ ಅಮ್ಮನನ್ನು ನೆನಪಿಸಿಕೊಂಡು ಸೋನು ಸೂದ್ ಭಾವುಕ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಕಲ್ಯಾಣ್ ಸಿಂಗ್ ಆರೋಗ್ಯ ಗಂಭೀರ-ವೆಂಟಿಲೇಟರ್ ಅಳವಡಿಕೆ

 

View this post on Instagram

 

A post shared by Sonu Sood (@sonu_sood)

ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ಪ್ರತಿ ವರ್ಷ ನಿಮ್ಮನ್ನು ತಬ್ಬಿಕೊಂಡು ನೇರವಾಗಿ ವಿಶ್ ಮಾಡುವಂತಿರಬೇಕಿತ್ತು ಎಂದು ಬಯಸುತ್ತೇನೆ. ಬದುಕಿನ ಪಾಠಗಳನ್ನು ಕಲಿಸಿದ್ದಕ್ಕೆ ಧನ್ಯವಾದ ಅರ್ಪಿಸಬೇಕು ಎಂದು ಬಯಸುತ್ತೇನೆ. ನನ್ನ ಕೆಲಸವನ್ನು ನಾನು ಉತ್ತಮವಾಗಿ ಮಾಡಿ, ನಿಮಗೆ ಹೆಮ್ಮೆ ತರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ ನಾನು ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಈ ಮೆಸೇಜ್‍ಗಳಿಂದ ತಿಳಿಸಲು ಸಾಧ್ಯವೇ ಇಲ್ಲ. ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ. ನಾನು ನಿಮ್ಮನ್ನು ಮತ್ತೆ ಭೇಟಿ ಆಗುವವರೆಗೂ ಆ ಖಾಲಿತನ ತುಂಬಲು ಸಾಧ್ಯವಿಲ್ಲ. ನೀವು ಎಲ್ಲೇ ಇದ್ದರೂ ಖುಷಿ ಆಗಿರಿ. ನನಗೆ ಮಾರ್ಗದರ್ಶನ ನೀಡುತ್ತಿರಿ. ಲವ್ ಯೂ ಅಮ್ಮ ಎಂದು ಸೋನು ಸೂದ್ ಭಾವನಾತ್ಮಕವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Sonu Sood (@sonu_sood)

ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಅನೇಕ ಸಿನಿಮಾಗಳಲ್ಲಿ ಸೋನು ಸೂದ್ ಬ್ಯುಸಿ ಆಗಿದ್ದಾರೆ. ಕೋಟ್ಯಂತರ ಜನರ ಮನಸ್ಸಿನಲ್ಲಿ ನಟ ಸೋನು ಸೂದ್ ಅವರಿಗೆ ವಿಶೇಷ ಸ್ಥಾನವಿದೆ. ಸಿನಿಮಾ ಮೂಲಕ ಸಂಪಾದಿಸಿದ್ದಕ್ಕಿಂತಲೂ ಹೆಚ್ಚು ಅಭಿಮಾನಿಗಳನ್ನು ಅವರು ತಮ್ಮ ಸಮಾಜಸೇವೆಯ ಮುಖಾಂತರ ಸಂಪಾದಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಅವರ ಮಾಡಿರುವ ಸಹಾಯ ಹಲವರ ಜೀವನ, ಜೀವ ಕಾಪಾಡಿದೆ.

f

Share This Article
Leave a Comment

Leave a Reply

Your email address will not be published. Required fields are marked *