ನಿಮ್ಮ ಮಗುವಿನ ಜವಾಬ್ದಾರಿ ನನ್ನದು: ಸೋನು ಸೂದ್

Public TV
1 Min Read

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಮಗುವೊಂದರ ಜವಾಬ್ದಾರಿಯನ್ನು ಹೊತ್ತಿದ್ದು, ನಿಮ್ಮ ಮಗುವಿನ ಜವಾಬ್ದಾರಿ ನನ್ನದು ಎಂದಿದ್ದಾರೆ.

ತೆಲಂಗಾಣದ ಕರೀಂನಗರದಲ್ಲಿ ಅವಧಿ ಪೂರ್ವವಾಗಿ ಗಂಡು ಮಗುವೊಂದು ಜನಿಸಿದ್ದು, ಹೊಟ್ಟಯ ಇನ್ಫೆಕ್ಷನ್‍ನಿಂದಾಗಿ ಮಗು ಬಳಲುತ್ತಿದೆ. ಐಸಿಯುನಲ್ಲಿ ಮಗುವನ್ನು ಇರಿಸಲಾಗಿದ್ದು, ಮಗುವಿನ ಪೋಷಕರು ಆರೈಕೆಗೆ ಹಣವಿಲ್ಲದೇ ಪರದಾಡುತ್ತಿದ್ದಾರೆ. ಈ ವೇಳೆ ಅವರಿಗೆ ನೆನಪಿಗೆ ಬಂದಿರುವುದು ನಟ ಸೋನು ಸೂದ್. ನಟನಿಂದ ಸಹಾಯದ ನಿರೀಕ್ಷೆಯಲ್ಲಿ ಮಗುವಿನ ತಂದೆ ಮಹೇಶ್ ಫೋಟೊ ತೆಗೆದು ಸೋನು ಸೂದ್‍ಗೆ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್‍ಗೆ ಸ್ಪಂದಿಸಿರುವ ಸೋನ್ ಸೂದ್ ಮಗುವಿನ ಸಂಪೂರ್ಣ ಜವಬ್ದಾರಿ ತಮ್ಮದೆಂದು ತಿಳಿಸಿದ್ದಾರೆ.

ಇಡೀ ದೇಶವೇ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದ ಬಳಲುತ್ತಿರುವ ಈ ಹೊತ್ತಿನಲ್ಲಿ ಸೋನು ಸೂದ್ ಮಗುವಿನ ಜವಾಬ್ದಾರಿ ಹೊತ್ತು ಮತ್ತೊಮ್ಮೆ ಕರುಣಾಮಯಿಯಾಗಿರುವುದಕ್ಕೆ ಟ್ವಿಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಹಲವಾರು ಜನರಿಗೆ ತಮ್ಮ ನಿಷ್ಕಲ್ಶ ಸೇವೆಯನ್ನು ಮಾಡುತ್ತಲೇ ಇದ್ದಾರೆ. ಕೊರೊನಾ ಲಾಕ್‍ಡೌನ್ ವೇಳೆ ಸಂಕಷ್ಟದಲ್ಲಿದ್ದ ವಲಸಿಗರ ಪಾಲಿನ ದೇವರಾದ ಸೋನು ತಮ್ಮ ಸಹಾಯಹಸ್ತವನ್ನು ಚಾಚುತ್ತಲೇ ಇದ್ದಾರೆ. ಇದಕ್ಕಾಗಿ ಫೌಂಡೇಷನ್‍ವೊಂದನ್ನು ಅವರು ಮಾಡಿದ್ದು, ಈ ಮೂಲಕ ಕಷ್ಟದಲ್ಲಿರುವವರಿಗೆ ನೆರವಾಗುತ್ತಲೇ ಇದ್ದಾರೆ.

ಕೋವಿಡ್ ಸೋಂಕಿಗೆ ತುತ್ತಾಗಿದ್ದ ನಟ ಸೋನ್ ಸೂದ್ ಈಗ ಸೋಂಕಿನಿಂದ ಮುಕ್ತವಾಗಿದ್ದಾರೆ. ತಮಗೆ ಹೆಚ್ಚಾಗಿ ರೆಮಿಡಿಸಿವರ್, ಆಕ್ಸಿಜನ್, ಬೆಡ್‍ಗಾಗಿ ಮನವಿ ಬರುತ್ತಿದೆ. ಸಾಧ್ಯವಾದ ಮಟ್ಟಿಗೆ ನಾನು ವ್ಯವಸ್ಥೆ ಮಾಡುತ್ತಿದ್ದೇನೆ. ಕೆಲವೊಮ್ಮೆ ನಾನು ಸೋಲುತ್ತಿದ್ದೇನೆ. ಆದರೆ ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರವಾಗಿರಲಿದೆ ಎಂದು ಸಹಾಯವನ್ನು ಮಾಡುತ್ತಲೇ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *