ನಿಮ್ಮ ತ್ವಚೆಗೆ ಸೂಟ್ ಆಗುವ ಲಿಪ್‍ಸ್ಟಿಕ್ ಆಯ್ಕೆ ಮಾಡುವುದೇಗೆ ಗೊತ್ತಾ?

Public TV
2 Min Read

ಸಾಮಾನ್ಯವಾಗಿ ಬಟ್ಟೆ, ಒಡವೆ, ಚಪ್ಪಲಿ ಮೇಕಪ್ ಮೇಲೆ ಆಸಕ್ತಿ ತೋರಿಸುವ ಹುಡುಗಿಯರು ಲಿಪ್‍ಸ್ಟಿಕ್ ಮೇಲೆ ಕೂಡ ಹೆಚ್ಚು ಗಮನ ಹರಿಸುತ್ತಾರೆ ಎಂದರೆ ತಪ್ಪಾಗಲಾರದು. ಲಿಪ್‍ಸ್ಟಿಕ್ ತುಟಿಯ ಅಂದವನ್ನು ಹೆಚ್ಚಿಸುವುದಾಗಿದ್ದು, ಸೀರೆ, ಮಾಡೆರ್ನ್ ಹೀಗೆ ನಾವು ಧರಿಸುವ ಎಲ್ಲಾ ರೀತಿಯ ಬಟ್ಟೆಗಳಿಗೂ ಸುಂದರವಾಗಿ ಕಾಣಿಸುತ್ತದೆ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ತನಕ ಕೂಡ ಲಿಪ್‍ಸ್ಟಿಕ್ ಹೆಣ್ಣು ಮಕ್ಕಳಿಗೆ ಪ್ರಿಯವಾದ ವಸ್ತು.

ಫ್ಯಾಷನ್ ಕೂಡ ನೀವು ಬಳಸುವ ಲಿಪ್‍ಸ್ಟಿಕ್ ಮೇಲೆ ಆಧಾರಿತವಾಗಿರುತ್ತದೆ. ಎಲ್ಲಾ ರೀತಿಯ ತ್ವಚೆಗಳಿಗೆ ಎಲ್ಲಾ ಬಣ್ಣದ ಲಿಪ್‍ಸ್ಟಿಕ್ ಸೂಟ್ ಆಗುವುದಿಲ್ಲ. ಫ್ಯಾಷನ್ ಬ್ರಾಂಡ್‍ಗಳು ಕೂಡ ತ್ವಚೆಯ ಮೇಲೆ ಕೇಂದ್ರೀಕರಿಸುತ್ತವೆ. ಹಾಗಾಗಿ ನಮ್ಮ ಮೈ ಬಣ್ಣಕ್ಕೆ ಸೂಟ್ ಆಗುವಂತಹ ಲಿಪ್‍ಸ್ಟಿಕ್‍ಗಳನ್ನು ಬಳಸಬೇಕು. ಆದರೆ ಲಿಪ್‍ಸ್ಟಿಕ್ ಬಗ್ಗೆ ತಿಳಿಯದೇ ಇರುವವರು ಎಲ್ಲಾ ರೀತಿಯ ಲಿಪ್‍ಸ್ಟಿಕ್ ಗಳನ್ನು ಬಳಸುತ್ತಾರೆ. ಅಂತಹವರಿಗೆ ತಮ್ಮ ಮೈ ಬಣ್ಣಕ್ಕೆ ಸರಿಹೊಂದುವಂತಹ ಲಿಪ್‍ಸ್ಟಿಕ್ ಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬ ವಿಚಾರ ಕುರಿತಂತೆ ಒಂದಷ್ಟು ಟಿಪ್ಸ್ ಈ ಕೆಳಗಿನಂತಿವೆ.

 

ಲಿಪ್‍ಸ್ಟಿಕ್ ಖರೀದಿಸುವುದು ಹೇಗೆ?
ಸಾಮಾನ್ಯವಾಗಿ ಲಿಪ್‍ಸ್ಟಿಕ್ ಖರೀದಿಸಲು ಹೋದಾಗ ಹುಡುಗಿಯರು ತಮ್ಮ ಕೈ ಬೆರಳಿನ ತುದಿಯಲ್ಲಿ ಲಿಪ್‍ಸ್ಟಿಕ್ ಅನ್ನು ಹಚ್ಚಿ ಪ್ರಯತ್ನಿಬೇಕು. ನಿಮ್ಮ ಕೈ ಬಣ್ಣವು ನಿಮ್ಮ ತುಟಿಯ ಬಣ್ಣಕ್ಕಿಂತ ವಿಭಿನ್ನವಾಗಿರುತ್ತದೆ. ಹಾಗಾಗಿ ಕೈ ಮೇಲೆ ಹಚ್ಚಿದ ಲಿಪ್‍ಸ್ಟಿಕ್ ನನ್ನು ಮುಖದ ಪಕ್ಕ ಇರಿಸಿಕೊಂಡು ಕನ್ನಡಿ ಮುಂದೆ ನಿಂತು ಪರಿಶೀಲಿಸಬೇಕು. ಬಳಿಕ ಆ ಬಣ್ಣವು ನಿಮ್ಮ ಲಿಪ್‍ಗೆ ಸೂಟ್ ಆಗುತ್ತದೆ ಎಂದರೆ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಸ್ಕಿನ್ ಟೋನ್‍ಗಳಿಗೆ ಸೂಟ್ ಆಗುವ ಲಿಪ್‍ಸ್ಟಿಕ್ ಯಾವುದು?
ಲಿಪ್‍ಸ್ಟಿಕ್ ಬಣ್ಣ ನಿಮಗೆ ಸುಂದರವಾಗಿ ಕಾಣಿಸುತ್ತದೆಯೇ ಎಂದು ತಿಳಿಯಲು ಮೊದಲು ನಿಮ್ಮ ತ್ವಚೆ ಬಿಳಿಯೋ, ಕಪ್ಪೋ, ಗೋಧಿ ಮೈ ಬಣ್ಣದ ತ್ವಚೆಯೋ ಎಂಬುವುದನ್ನು ಅರಿತುಕೊಳ್ಳಬೇಕು.

ಬಿಳಿ ಬಣ್ಣದ ತ್ವಚೆ: ಬಿಳಿ ಬಣ್ಣದ ಮೈ ಕಾಂತಿ ಹೊಂದಿರುವವರಿಗೆ ಮೀಡಿಯಂ ಬಣ್ಣದ ಲಿಪ್‍ಸ್ಟಿಕ್ ಗಳು ಸುಂದರವಾಗಿ ಕಾಣಿಸುತ್ತದೆ. ಅದರಲ್ಲಿಯೂ ಕಂದು ಬ್ರೌನ್ ಬಣ್ಣದ ಲಿಪ್‍ಸ್ಟಿಕ್ ಹಾಗೂ ಕಿತ್ತಳೆ(ಆರೆಂಜ್) ಬಣ್ಣದ ಲಿಪ್‍ಸ್ಟಿಕ್ ನಿಮಗೆ ಎದ್ದು ಕಾಣಿಸುತ್ತದೆ.

ಗೋಧಿ ಬಣ್ಣದ ತ್ವಚೆ: ಗೋಧಿ ಬಣ್ಣದ ಮೈ ಕಾಂತಿ ಹೊಂದಿರುವವರು ಬ್ರೌನ್ ಕಲರ್ ಮತ್ತು ಪೀಚ್ ಕಲರ್ ಲಿಪ್‍ಸ್ಟಿಕ್ ಉಪಯೋಗಿಸಬೇಕು. ಇದು ನಿಮ್ಮ ತುಟಿಗೆ ಸುಂದರವಾಗಿ ಕಾಣಿಸುತ್ತದೆ.

ಕಂದು ಬಣ್ಣದ ತ್ವಚೆ: ಬ್ರೌನ್, ಬೆರ್ರಿ ಶೇಡ್‍ಗಳು, ಕಿತ್ತಳೆ ಮತ್ತು ಕೆಂಪು ಬಣ್ಣದ ಲಿಪ್‍ಸ್ಟಿಕ್ ಗಳು ಕಂದು ಬಣ್ಣದ ಮೈ ಕಾಂತಿ ಹೊಂದಿರುವ ನಿಮ್ಮ ತುಟಿಗಳಿಗೆ ಆಕರ್ಷಕವಾಗಿ ಕಂಗೊಳಿಸುತ್ತದೆ.

ಕಪ್ಪು ಬಣ್ಣದ ತ್ವಚೆ: ನಿಮ್ಮ ಮೈ ಕಾಂತಿ ಕಪ್ಪಾಗಿದ್ದರೆ ಬ್ರೌನ್, ಕೆಂಪು ಮತ್ತು ನೇರಳೆ ಬಣ್ಣದಂತಹ ಲಿಪ್‍ಸ್ಟಿಕ್ ಗಳನ್ನು ಆಯ್ಕೆ ಮಾಡುವುದು ಉತ್ತಮ. ಈ ಬಣ್ಣ ಹೊಂದಿರುವವರಿಗೆ ಕಿತ್ತಳೆ ಬಣ್ಣದ ಲಿಪ್‍ಸ್ಟಿಕ್ ಸೂಟ್ ಆಗುವುದಿಲ್ಲ. ಹಾಗಾಗಿ ಆ ಬಣ್ಣದ ಲಿಪ್‍ಸ್ಟಿಕ್ ನಿಂದ ದೂರವಿರಿ.

Share This Article
Leave a Comment

Leave a Reply

Your email address will not be published. Required fields are marked *