ನಾಳೆಯಿಂದ ರಾಜ್ಯದಲ್ಲಿ 14 ದಿನ ಬಿಗಿ ಲಾಕ್‍ಡೌನ್ – ಏನಿರುತ್ತೆ? ಏನಿರಲ್ಲ?

Public TV
1 Min Read

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ರಾಜ್ಯದಲ್ಲಿ ದಿನಕ್ಕೆ ಹೆಚ್ಚು ಕಡಿಮೆ 50 ಸಾವಿರ ಕೊರೊನಾ ಕೇಸ್ ಬರ್ತಿವೆ. ಹೀಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ, ಈಗಿರೋ ಜನತಾ ಲಾಕ್‍ಡೌನ್ ಬದಲಿಗೆ, ನಾಳೆಯಿಂದ 14 ದಿನಗಳ ಕಾಲ ಮೇ 24ರವರೆಗೂ ಅನ್ವಯವಾಗುವಂತೆ ಟಫ್ ಲಾಕ್‍ಡೌನ್ ಜಾರಿಗೊಳಿಸುತ್ತಿದೆ.

ಬೆಳಗ್ಗೆ 6 ಗಂಟೆಯಿಂದ ಹೊಸ ಲಾಕ್‍ಡೌನ್ ಜಾರಿಯಾಗುತ್ತೆ. ಹೊಸತೇನು ಅಂದ್ರೆ ಈ ಬಾರಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗ್ತಿದೆ. ಇನ್ನುಳಿದಂತೆ ಬಹುತೇಕ ನಿಯಮಗಳೆಲ್ಲಾ ಜನತಾ ಲಾಕ್‍ಡೌನ್‍ನ ಪಾರ್ಟ್ 1ರಿಂದ ಯಥಾವತ್ತಾಗಿ ನಕಲು ಮಾಡಲಾಗಿದೆ. ಈ 14 ದಿನ ಏನಿರುತ್ತೆ? ಏನಿರಲ್ಲ? ಎಂಬುದರ ಮಾಹಿತಿ ಇಲ್ಲಿದೆ.

ಏನಿರುತ್ತೆ?:
* ಆಸ್ಪತ್ರೆ, ಮೆಡಿಕಲ್, ನ್ಯಾಯಬೆಲೆ ಅಂಗಡಿ
* ಹಾಲು (ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ)
* ಹಾಪ್‍ಕಾಮ್ಸ್, ಹಣ್ಣು-ತರಕಾರಿ ಬೆಳಗ್ಗೆ 10 ಗಂಟೆವರೆಗೆ- ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ ಸಂಜೆ 6 ಗಂಟೆಯವರೆಗೆ ಮಾರಬಹುದು.
* ದಿನಸಿ-ಮಾಂಸ (ಬೆಳಗ್ಗೆ 10 ಗಂಟೆವರೆಗೆ)
* ಇಡೀ ದಿನ ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಇರುತ್ತೆ ಮತ್ತು ಹೋಂ ಡೆಲಿವರಿ
* ಮದ್ಯ ಪಾರ್ಸೆಲ್ ಬೆಳಗ್ಗೆ 10 ಗಂಟೆವರೆಗೆ ಮಾತ್ರ
* ಮನೆಯಲ್ಲಿ ಮಾತ್ರ ಮದುವೆ ನಡೆಯವುದು. ಮದುವೆಯಲ್ಲಿ ಕೇಬಲ 40 ಜನರಿಗಷ್ಟೇ ಭಾಗವಹಿಸಲು ಅವಕಾಶ.
* ಅಂತ್ಯಸಂಸ್ಕಾರದಲ್ಲಿ 5ಕ್ಕಿಂತ ಜನರು ಭಾಗವಹಿಸುವಂತಿಲ್ಲ
* ಆಹಾರ ಸಂಸ್ಕರಣಾ ಘಟಕ
* ರೈಲು, ವಿಮಾನ

ಏನಿರಲ್ಲ?
* ಅಂತರ್ ಜಿಲ್ಲಾ ಓಡಾಟ, ಖಾಸಗಿ ವಾಹನ ಸಂಚಾರ
* ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್, ಮೆಟ್ರೋ, ಆಟೋ, ಟ್ಯಾಕ್ಸಿ
* ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ
* ಮಾರುಕಟ್ಟೆಗಳು

ಅಗತ್ಯ ವಸ್ತು ಖರೀದಿಗೆ ಜನ ನಡೆದುಕೊಂಡೇ ಹೋಗಬೇಕು. ಸಮೀಪದ ಅಂಗಡಿಗಳಲ್ಲಿ ದಿನ ಬಳಕೆ ವಸ್ತು ಖರೀದಿಸಬೇಕು. ಹೋಟೆಲ್, ಬಾರ್‍ನಲ್ಲಿ ಪಾರ್ಸೆಲ್ ಲಭ್ಯವಿರುತ್ತೆ. ಆಟೋ, ಬೈಕ್, ಕಾರು ನಾಳೆ ರೋಡಿಗಿಳಿದ್ರೆ ಪೊಲೀಸರು ವಶಕ್ಕೆ ಪಡೆದುಕೊಳ್ಳೋದು ಬಹುತೇಕ ಖಚಿತ. ಅನಗತ್ಯವಾಗಿ ಓಡಾಡಿದ್ರೆ ಲಾಠಿ ಏಟು ಬೀಳೋದು ಫಿಕ್ಸ್ ಅಥವಾ ಪೊಲೀಸರು ಬಂಧಿಸಲಬಹುದು.

Share This Article
Leave a Comment

Leave a Reply

Your email address will not be published. Required fields are marked *