ನಾಚಿಕೆ ಆಗ್ಬೇಕು, ನಾನು ನಿಮ್ಮ ಮಗನ ವಯಸ್ಸಿನವಳು: ಠಾಕ್ರೆಗೆ ಕಂಗನಾ ತಿರುಗೇಟು

Public TV
2 Min Read

– ಸಿಎಂ ಸ್ಥಾನದಲ್ಲಿರಲು ಠಾಕ್ರೆ ಯೋಗ್ಯರಲ್ಲ
– ನಿಮ್ಮ ಕೊಳಕು ಭಾಷಣ, ಅಯೋಗ್ಯತನದ ಪ್ರತೀಕ

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮತ್ತೆ ಮುನ್ನಲೆಗೆ ಬಂದಿದೆ. ಭಾನುವಾರ ದಸರಾ ಸಮಾವೇಶದಲ್ಲಿ ಸಿಎಂ ನೀಡಿದ ಹೇಳಿಕೆಯನ್ನ ಖಂಡಿಸಿರುವ ಮಣಿಕರ್ಣಿಕಾ ಸಾಲು ಸಾಲು ಟ್ವೀಟ್ ಗಳ ಮೂಲಕ ತಿರುಗೇಟು ನೀಡಿದ್ದಾರೆ.

ಸಂಜಯ್ ರಾವತ್ ನನ್ನನ್ನು ಹರಾಮ್‍ಕೋರ್ ಅಂದ, ಉದ್ಧವ್ ನನಗೆ ನಮಕ್ ಹರಾಮ್ ಅಂತ ಹೇಳಿದ್ದಾನೆ. ಮುಂಬೈನಲ್ಲಿ ನನಗೆ ಆಶ್ರಯ ಸಿಗದಿದ್ರೆ ನನಗೆ ಊಟವೇ ಸಿಗುತ್ತಿರಲಿಲ್ಲ ಅಂತಾ ಹೇಳ್ತಿದ್ದಾರೆ. ನಿಮಗೆ ನಾಚಿಕೆ ಆಗಬೇಕು, ನಾನು ನಿಮ್ಮ ಮಗನ ವಯಸ್ಸಿನ ಸ್ವಾವಲಂಭಿ ಮಹಿಳೆ. ನಿಮ್ಮ ವ್ಯಕ್ತಿತ್ವವನ್ನ ನೀವು ನೀಡಿದ ಹೇಳಿಕೆಗಳು ತೋರಿಸುತ್ತಿವೆ. ಸ್ವಜನಪಕ್ಷಪಾತದ ಅತಿ ಕೆಟ್ಟ ಉತ್ಪನ್ನವೇ ಮುಖ್ಯಮಂತ್ರಿ ಠಾಕ್ರೆ ಎಂದು ಕಂಗನಾ ಮತ್ತೆ ಏಕವಚನದಲ್ಲಿ ಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಕಂಗನಾಗೆ ಎದುರಾಯ್ತು ಮತ್ತೊಂದು ಕಂಟಕ – 10 ದಿನದಲ್ಲಿ 3 ಎಫ್‍ಐಆರ್

ಹಿಮಾಲಯದ ಸುಂದರತೆಯನ್ನ ಎಲ್ಲ ಭಾರತೀಯರು ಅನುಭವಿಸಬಹುದು. ಹಾಗೆಯೇ ಮುಂಬೈನಲ್ಲಿರುವ ಕೆಲಸಗಳು ನಮ್ಮೆಲ್ಲರಿಗಾಗಿ ಇವೆ. ಎರಡೂ ನನ್ನ ಮನೆಗಳು. ಪ್ರಜಾಪ್ರಭುತ್ವದಲ್ಲಿ ನೀವು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಡಿ. ನಿಮ್ಮ ಕೊಳಕು ಭಾಷಣ, ನಿಮ್ಮ ಅಯೋಗ್ಯತೆಯ ಮಟ್ಟದ ಪ್ರದರ್ಶನವಾಗಿದೆ ಎಂದು ಕಂಗಣಾ ಟೀಕಿಸಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ 

ಮುಖ್ಯಮಂತ್ರಿಯಾಗಿರುವ ಉದ್ಧವ್ ಠಾಕ್ರೆ ತನ್ನನ್ನು ತಾನು ಮಹಾರಾಷ್ಟ್ರದ ಗುತ್ತಿಗೆದಾರ ಅಂದುಕೊಂಡು ದೇಶದ ವಿಭಜನೆ ಮಾಡುತ್ತಿದ್ದಾನೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಕೇವಲ ಜನರ ಸೇವಕ, ಸರ್ವಾಧಿಕಾರಿ ಅಲ್ಲ. ಸಿಎಂ ಸ್ಥಾನ ಬದಲಾಗುತ್ತಿರುತ್ತದೆ, ಆದ್ರೆ ಠಾಕ್ರೆ ಮಹಾರಾಷ್ಟ್ರ ಕೇವಲ ತನ್ನದೇ ಎಂಬ ರೀತಿ ವರ್ತಿಸುತ್ತಿರೋದು ಏಕೆ ಎಂದು ಕಂಗನಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶದಂತೆ ತುಮಕೂರಲ್ಲಿ ಕಂಗನಾ ವಿರುದ್ಧ ಎಫ್‍ಐಆರ್

ಸಿಎಂ ಠಾಕ್ರೆ ಹೇಳಿದ್ದೇನು?: ಕೆಲಸ ಅರಸಿಕೊಂಡು ಬಂದ ಕೆಲವರು ಮುಂಬೈಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ. ತಮ್ಮ ರಾಜ್ಯದಲ್ಲಿ ಸರಿಯಾಗಿ ಊಟ ಸಿಗದಕ್ಕೆ ಇಲ್ಲಿಗೆ ಬಂದಿರುತ್ತಾರೆ ಎಂದು ಕಂಗನಾ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಒಂದು ವರ್ಷವಾಯ್ತು. ಅಂದಿನಿಂದ ಇಂದಿನವರೆಗೂ ಕೆಲವರು ಸರ್ಕಾರ ಪತನವಾಗುತ್ತೆ ಅಂತ ಹೇಳುತ್ತಿದ್ದಾರೆ. ನಿಮಗೆ ತಾಕತ್ತು ಇದ್ರೆ ನಮ್ಮ ಸರ್ಕಾರ ಬೀಳಿಸಿ ಎಂದು ನಾನು ನಿಮಗೆ ಬಹಿರಂಗವಾಗಿ ಸವಾಲು ಹಾಕುತ್ತೇನೆ. ಕೆಲವರು ರಾಜ್ಯದಲ್ಲಿ ದೇವಸ್ಥಾನಗಳನ್ನು ತೆಗೆಯದಿರುವುದಕ್ಕೆ ಬಾಳಾ ಠಾಕ್ರೆ ಮತ್ತು ನನ್ನ ಹಿಂದುತ್ವ ಬೇರೆ ಎಂದು ಹೇಳುತ್ತಿದ್ದಾರೆ. ನಿಮ್ಮ ಹಿಂದುತ್ವ ಅಂದ್ರೆ ಗಂಟೆ ಬಾರಿಸುವುದು ಮತ್ತು ಭಜನೆ ಮಾಡೋದು ಎಂದರ್ಥ. ನಾವು ಇಷ್ಟು ಚಿಕ್ಕದಾಗಿ ಹಿಂದುತ್ವ ವ್ಯಾಖ್ಯಾನ ಮಾಡಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿಗೆ ಹೆಸರು ಹೇಳದೇ ತಿರುಗೇಟು ನೀಡಿದ್ದರು. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

Share This Article
Leave a Comment

Leave a Reply

Your email address will not be published. Required fields are marked *