19 ನವೋದ್ಯಮಿಗಳಿಗೆ ಎಲಿವೇಟ್ ಉನ್ನತಿ ಪ್ರಶಸ್ತಿ ನೀಡಿದ ಅಶ್ವಥ್ ನಾರಾಯಣ್

Public TV
1 Min Read

– ಪ್ರಶಸ್ತಿ ಜೊತೆ ನವೋದ್ಯಮಿಗಳಿಗೆ ಪ್ರೋತ್ಸಾಹ ಧನ

ಬೆಂಗಳೂರು: ಐಟಿ ಬಿಟಿ ಕ್ಷೇತ್ರದಲ್ಲಿ ವಿಶ್ವದಲ್ಲಿ ಉತ್ತುಂಗದಲ್ಲಿರುವ ಕರ್ನಾಟಕದ ಸಾಧನೆಗೆ ಪೂರಕವಾಗಿ ರಾಜ್ಯ ಸರ್ಕಾರ ಯುವ ನವೋದ್ಯಮಿಗಳನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಲಿದೆ ಎಂದು ಐಟಿಬಿಟಿ ಇಲಾಖೆ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವಥನಾರಾಯಣ್ ಭರವಸೆ ನೀಡಿದ್ದಾರೆ.

ಇಲಾಖೆಯ ಆಶ್ರಯದಲ್ಲಿ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ನವೋದ್ಯಮಗಳಿಗೆ ಎಲಿವೇಟ್ ಉನ್ನತಿ ಪ್ರಶಸ್ತಿ ಪ್ರದಾನ ಮಾಡಿ, ರಾಜ್ಯದ ಯುವ ನವೋದ್ಯಮಿಗಳಿಗೆ (ಸ್ಟಾರ್ಟ್ ಅಪ್) ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ಈ ಬಾರಿಯ ಟಾಪರ್ ಕಲ್ಯಾಣ ಕರ್ನಾಟಕ ಭಾಗದ ಯುವ ಉದ್ಯಮಿ ಬೀದರ್ ನ ಅಗರಿಕಾ ಸೋಲ್ಯುಷನ್ ನ ದೀಪಕ್ ದಿಲ್ಲೆ ಅವರಿಗೆ 30 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಯಿತು. ಇವರು ಕೃಷಿ ತ್ಯಾಜ್ಯ ಹಾಗೂ ನಗರ ಸಭೆಯ ಘನ ತ್ಯಾಜ್ಯವನ್ನು ಉಪಯೋಗಿಸಿ ಇಟ್ಟಿಗೆ ಹಾಗೂ ಕಟ್ಟಡ ನಿರ್ಮಾಣದ ವಸ್ತುಗಳನ್ನು ತಯಾರಿಸುತ್ತಾರೆ. ಅಲ್ಲದೆ ದೀಪಕ್ ಬಡ ಕುಟುಂಬದವರಾಗಿದ್ದು, ಇವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಪ್ರಶಸ್ತಿ ಹಾಗೂ ಸಹಾಯ ಧನ ನೀಡಿದೆ. ತ್ಯಾಜ್ಯವನ್ನು ಪರಿಣಾಮಕಾರಿ ಮರುಬಳಕೆ ಮಾಡುವ ಸ್ಟಾರ್ಟ್ ಅಪ್ ಮಾಡಿರುವ ದೀಪಕ್ ಸಾಧನೆಯನ್ನು ಡಿಸಿಎಂ ಅಶ್ವಥ್ ನಾರಾಯಣ್ ಶ್ಲಾಘಿಸಿದ್ದಾರೆ.

ಒಟ್ಟು 19 ನವೋದ್ಯಮಿಗಳಿಗೆ ಇದೇ ವೇಳೆ ಪ್ರಶಸ್ತಿ ಹಾಗೂ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಒಟ್ಟು 30 ಲಕ್ಷ ರೂ.ಪೈಕಿ ಇಂದು ಮೊದಲ ಕಂತು 15 ಲಕ್ಷ ರೂ. ಚೆಕ್ ನೀಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *