ನವೆಂಬರ್ ವರೆಗೂ ಅನ್ನ ಯೋಜನೆ ವಿಸ್ತರಣೆ- ಪ್ರಧಾನಿ ಮೋದಿ ಮಹತ್ವದ ಘೋಷಣೆ

Public TV
2 Min Read

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅವಧಿಯನ್ನು ನವೆಂಬರ್ ವರೆಗೆ ವಿಸ್ತರಣೆ ಮಾಡಲಾಗಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಿಗೆ ಉಚಿತ ಪಡಿತರ ನೀಡಲಾಗುವುದು. 5 ಕೆ.ಜಿ ಗೋಧಿ ಅಥವಾ ಅಕ್ಕಿ, ಒಂದು ಕೆ.ಜಿ. ಕಾಳು ಉಚಿತವಾಗಿ ನೀಡಲಾಗಿದೆ. ದೇಶದ 80 ಕೋಟಿ ಜನರಿಗೆ ಇದರ ಲಾಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಅನ್ನ ಯೋಜನೆ ವಿಸ್ತರಣೆಯಿಂದ ಸರ್ಕಾರ ಮೇಲೆ 90 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಿ ಇಂದು ಅನ್‍ಲಾಕ್ ಸ್ಥಿತಿಗೆ ಬಂದಿವೆ. ವಿಶ್ವದ ಇತರೆ ರಾಷ್ಟ್ರಗಳನ್ನು ಗಮನಿಸಿದ್ರೆ ಭಾರತ ಸುಸ್ಥಿತಿಯಲ್ಲಿದ್ದೇವೆ. ಸೂಕ್ತ ಸಮಯದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದು ಇಂದು ಲಕ್ಷ ಲಕ್ಷ ಜನರ ಜೀವ ಉಳಿದಿದೆ.

ಅನ್‍ಲಾಕ್ ಬಳಿಕ ಜನರ ಚಲನವಲನ ಹೆಚ್ಚಾಗಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸ್ಥಳ ಮತ್ತು ವ್ಯಾಪಾರದ ವೇಳೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿ ಲ್ಲ ಇರೋದು ಬೇಸರದ ಸಂಗತಿಯಾಗಿದೆ. ನಿಮ್ಮ ಆಸುಪಾಸಿನ ಜನ ನಿಯಮ ಪಾಲನೆ ಮಾಡದಿದ್ದರೆ ನೀವು ತಿಳಿ ಹೇಳಬೇಕು. ಕಂಟೈನ್‍ಮೆಂಟ್ ಝೋನ್ ಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಗ್ರಾಮದ ವ್ಯಕ್ತಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ ಎಲ್ಲರಿಗೂ ಕಾನೂನು ಒಂದೇಯಾಗಿವೆ. ಮಾಸ್ಕ್ ಧರಿಸದ ಬೇರೆ ದೇಶದ ಪ್ರಧಾನಿಗೆ ದಂಡ ಹಾಕಿದ್ದಾರೆ. ಹಾಗಾಗಿ ನಿಯಮಗಳಿಗಿಂತ ಯಾರು ದೊಡ್ಡವರಲ್ಲ.

ಲಾಕ್‍ಡೌನ್ ಸಮಯದಲ್ಲಿ ಸರ್ಕಾರ ಎಲ್ಲರಿಗೂ ಆಹಾರ ಒದಗಿಸುವ ಕೆಲಸವನ್ನ ಮಾಡಿದೆ. ಯಾರು ಖಾಲಿ ಹೊಟ್ಟೆಯಿಂದ ಮಲಗಿಲ್ಲ. ಸರ್ಕಾರ ಪಡಿತರ ವ್ಯವಸ್ಥೆಯ ಮೂಲಕ ಮೂರು ತಿಂಗಳ ಅವಧಿಯ ಮುಂಗಡ ಆಹಾರ ಧಾನ್ಯಗಳ ವಿತರಣೆ ಮಾಡಲಾಗಿದೆ. 80 ಕೋಟಿಗೂ ಹೆಚ್ಚು ಜನರಿಗೆ ಆಹಾರದ ವ್ಯವಸ್ಥೆ ನೀಡಲಾಗಿದೆ. ಬಡವರ ಜನ್‍ಧನ್ ಖಾತೆಗೆ ಹಣ ಹಾಕಲಾಗಿದೆ.

ಇಂತಹ ಕಷ್ಟದ ಸಮಯದಲ್ಲಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ತೆರಿಗೆಯಿಂದ ನಾವು ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಇದರ ಜೊತೆಗೆ ಆತ್ಮನಿರ್ಭರ ಭಾರತದತ್ತ ದೊಡ್ಡ ಹೆಜ್ಜೆ ಇಡುತ್ತಿದ್ದೇವೆ.

Share This Article
Leave a Comment

Leave a Reply

Your email address will not be published. Required fields are marked *