-ಪಿಎಸ್‍ಐ ಎದುರು ಬಟ್ಟೆ ಬಿಚ್ಚಿ ಮಲಗಿದ ಭೂಪ
ಬೆಳಗಾವಿ/ಚಿಕ್ಕೋಡಿ: ಸೀಲ್‍ಡೌನ್ ಏರಿಯಾದಲ್ಲಿ ಕುಡುಕನೋರ್ವ ನನ್ನನ್ನು ಹೊರಗೆ ಕಳುಹಿಸಿ. ಎಣ್ಣೆ ತೆಗದುಕೊಂಡು ಬರುತ್ತೀನಿ, ನನ್ನನ್ನು ಬಿಟ್ಟು ಬಿಡಿ ಎಂದು ವ್ಯಕ್ತಿ ರಂಪಾಟ ಮಾಡಿರೋ ಘಟನೆ ಚಿಕ್ಕೋಡಿ ಪಟ್ಟಣದ ಝಾರಿಗಲ್ಲಿಯಲ್ಲಿ ನಡೆದಿದೆ.
ಕೊರೊನಾ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದು ಐದು ದಿನಗಳಿಂದ ಝಾರಿಗಲ್ಲಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಇಂದು ಮನೆಯಿಂದ ಹೊರ ಬಂದ ವ್ಯಕ್ತಿ, ನನಗೆ ಕುಡಿಯಲು ಮದ್ಯ ಬೇಕಾಗಿದೆ. ಎನಾದರೂ ಮಾಡಿ ನನ್ನನ್ನು ಆಚೆ ಹೋಗಲು ಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ.
ಇದೇ ವೇಳೆ ಸ್ಥಳಕ್ಕೆ ಚಿಕ್ಕೋಡಿ ಪಿಎಸ್‍ಐ ಐ ರಾಕೇಶ್ ಬಗಲಿ ಆಗಮಿಸಿದ್ದಾರೆ. ಆದ್ರೂ ಸುಮ್ಮನಾಗದ ವ್ಯಕ್ತಿ ಬಟ್ಟೆ ಕಳಚಿ ರಸ್ತೆಯಲ್ಲಿ ಮಲಗಿ ಹೈಡ್ರಾಮಾ ಮಾಡಿದ್ದಾನೆ. ಕುಡುಕನ ರಂಪಾಟದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.