ನನ್ನೊಂದಿಗೆ ಹೆಜ್ಜೆ ಹಾಕಿ ಬದುಕಿದ ಮಡದಿಗೆ ಧನ್ಯವಾದ ಹೇಳುವುದು ಸಣ್ಣ ಪದ- ಜಗ್ಗೇಶ್

Public TV
2 Min Read

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು 37 ನೇ ವರ್ಷದ ವಿವಾಹ ವಾರ್ಷಿಕೊತ್ಸವನ್ನು ಸಂಭ್ರಮದಿಂದ ಸೆಲೆಬ್ರೆಟ್ ಮಾಡುತ್ತಿದ್ದಾರೆ. ವಿವಾಹ ವಾರ್ಷಿಕೋತ್ಸವದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.

ಋಣಾನುಬಂಧಂರೂಪೇಣಾಂ ಪಶುಪತ್ನಿಸುತಆಲಯ..Marrages are made in heaven.. ಪ್ರೀತಿಸುವುದು ತಪ್ಪಲ್ಲಾ ಪ್ರೀತಿಸಿದ ಮೇಲೆ ಬಾಳದಿರುವುದು ತಪ್ಪಾಗಿದೆ. 1984ರ ಮಾರ್ಚ್ 22 ರಂದು ನಾನು ಪರಿಮಳನಿಗೆ ತಾಳಿ ಕಟ್ಟಿ ಇಂದಿಗೆ 37 ವರ್ಷವಾಗಿದೆ. ನನ್ನ ಎಲ್ಲಾ ಗುಣ ಕಷ್ಟ ಸಹಿಸಿಕೊಂಡು ನನ್ನೊಂದಿಗೆ ಹೆಜ್ಜೆ ಹಾಕಿ ಬದುಕಿದ ಮಡದಿಗೆ ಧನ್ಯವಾದ ಹೇಳುವುದು ಸಣ್ಣ ಪದವಾಗಿದೆ. ನನ್ನ ಎರಡನೇ ತಾಯಿ ಸ್ಥಾನನನ್ನು ನಿನಗೆ ನೀಡಿರುವೆ ಎಂದು ಮುದ್ದಿನ ಮಡದಿಯ ಕುರಿತಾಗಿ ಬರೆದು ಕೊಂಡು ಮದುವೆಯ ಕೆಲವು ಫೋಟೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಮತ್ತು ಪರಿಮಳ ಅವರ ಲವ್ ಸ್ಟೋರಿ ಯಾವ ಸಿನಿಮಾ ಕಥೆಗಿಂದ ಕಮ್ಮಿಯಿಲ್ಲ. ಸಿನಿಮಾಗಳಲ್ಲಿ ಬರುವಂತೆ ಲವ್, ಫೈಟ್, ಪೊಲೀಸ್, ಕೇಸ್, ಕೋರ್ಟ್ ಹೀಗೆ ಎಲ್ಲವೂ ಜಗ್ಗೇಶ್ ಅವರ ಮದುವೆ ವಿಚಾರದಲ್ಲಿ ನಡೆದಿದೆ. ಇದೆಲ್ಲವನ್ನು ಎದುರಿಸಿ, ಪ್ರೀತಿಸಿದವಳ ಕೈ ಹಿಡಿದು 36 ವರ್ಷಗಳ ಕಾಲ ಸುಖಕರ ಜೀವನ ಮಾಡಿದ್ದಾರೆ ನಟ ಜಗ್ಗೇಶ್. ಇಂದು ಜಗ್ಗೇಶ್ ದಂಪತಿ 37ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಮುದ್ದಾದ ಸ್ಯಾಂಡಲ್‍ವುಡ್ ದಂಪತಿಗೆ ಅಭಿಮಾನಿಗಳು, ಚಿತ್ರತಾರೆಯರು, ರಾಜಕೀಯ ಗಣ್ಯರು ಶುಭಾಶಯವನ್ನು ಕೋರುತ್ತಿದ್ದಾರೆ.

ಕಷ್ಟದ ಸಮಯದಲ್ಲಿ ದಾಂಪತ್ಯ ಜೀವನ ಆರಂಭಿಸಿ ಜಗ್ಗೇಶ್ ಅವರು ಇಂದು ಹಣ, ಅಂತಸ್ತು, ಅಭಿಮಾನಿಗಳ ಪ್ರೀತಿ ರಾಯರ ಆಶೀರ್ವಾದದಿಂದ ರಾಯಲ್ ಆಗಿ ಜೀವಿಸುತ್ತಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿರುವ ಮುದ್ದಾದ ಜೋಡಿಗಳಲ್ಲಿ ಜಗ್ಗೇಶ್ ಮತ್ತು ಪರಿಮಳ ಜೋಡಿ ಕೂಡಾ ಒಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *