‘ನನ್ನತ್ರ ದುಡ್ಡಿಲ್ಲ, ನನ್ನನ್ನು ಬದುಕಿಸಿ ಪ್ಲೀಸ್’- ಚಿಕಿತ್ಸೆ ಸಿಗದೆ ಮಹಿಳೆ ಒದ್ದಾಟ

Public TV
1 Min Read

– 5 ಲಕ್ಷ ಖರ್ಚು ಮಾಡಿ ಪತಿ ಕಂಗಾಲು

ಬೆಂಗಳೂರು: ನನ್ನತ್ರ ದುಡ್ಡಿಲ್ಲ, ನನ್ನನ್ನು ಬದುಕಿಸಿ ಪ್ಲೀಸ್ ಎಂದು ಸಿಲಿಕಾನ್ ಸಿಟಿಯ ಯಲಹಂಕದ 21 ವರ್ಷದ ಮಹಿಳೆ ಕಣ್ಣೀರಿಟ್ಟ ಘಟನೆಯೊಂದು ನಡೆದಿದೆ.

ಹೌದು. ಕೊರೊನಾ ಕಾರಣದಿಂದ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಅನ್ಯರೋಗಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯಲಹಂಕದ ಮಹಿಳೆಯನ್ನ 2 ದಿನ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದ ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ರಾಜೀವ್‍ಗಾಂಧಿ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದರು.

ಅದರಂತೆ ಮಹಿಳೆ ರಾಜೀವ್‍ಗಾಂಧಿ ಆಸ್ಪತ್ರೆಗೆ ಹೋದರೆ ಅಲ್ಲಿ ತಜ್ಞ ವೈದ್ಯರಿಲ್ಲ ಎಂಬ ನೆಪ ಹೇಳಿ ದಾಖಲು ಮಾಡಿಕೊಂಡಿಲ್ಲ. ವಿಕ್ಟೋರಿಯಾ, ಬೌರಿಂಗ್, ಜಯನಗರ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕೊನೆಗೆ ವಿಧಿಯಿಲ್ಲದೇ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಈಗಾಗಲೇ 5 ಲಕ್ಷ ಖರ್ಚಾಗಿದ್ದು ಮಹಿಳೆ ಪತಿ ಕಂಗಾಲಾಗಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಸಿಎಂ ಗಮನಕ್ಕೆ ತಂದಿತ್ತು. ಕೂಡಲೇ ಸ್ಪಂದಿಸಿದ ಯಡಿಯೂರಪ್ಪ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಕೇಸ್‍ಗಳಿಗೆ ಚಿಕಿತ್ಸೆ ನೀಡಲು ಸೂಚನೆ ಕೊಡುವುದಾಗಿ ತಿಳಿಸಿದರು. ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *